ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಎಎಪಿಯ ಆಶಿಷ್ ವಿರುದ್ಧ ಎಫ್ ಐಆರ್

By Mahesh
|
Google Oneindia Kannada News

ನವದೆಹಲಿ, ಜುಲೈ 06: ಪಂಜಾಬಿನ ಆಮ್ ಆದ್ಮಿ ಪಕ್ಷದ (ಆಪ್) ಮುಖಂಡ, ವಕ್ತಾರ ಅಶೀಷ್ ಖೇತನ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.

ಅಮೃತಸರದಲ್ಲಿ ಇತ್ತೀಚೆಗೆ ಎಎಪಿ ಪಕ್ಷದ ಯುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪ್ರಣಾಳಿಕೆಯನ್ನು ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ್ ಸಾಹಿಬ್ ಮತ್ತು ಹಿಂದೂಗಳ ಪವಿತ್ರ ಗ್ರಂಥ ಭಗದ್ಗೀತೆಗೆ ಹೋಲಿಸಿದ್ದರು. ಪ್ರಣಾಳಿಕೆಯಲ್ಲಿ ಸ್ವರ್ಣ ದೇಗುಲ ಮತ್ತು ಆಮ್ ಆದ್ಮಿ ಪಕ್ಷದ ಚುನಾವಣಾ ಲಾಂಛನ 'ಪೊರಕೆ'ಯ ಚಿತ್ರವನ್ನು ಬಳಸಲಾಗಿತ್ತು.

AAP leader Ashish Khetan booked for hurting religious sentiments

ಪ್ರಣಾಳಿಕೆಯ ವಿನ್ಯಾಸ ಹಾಗೂ ಖೇತನ್ ಹೇಳಿಕೆ ವಿರುದ್ಧ ಸಿಖ್ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪಂಜಾಬಿನ ಉಪ ಮುಖ್ಯಮಂತ್ರಿ ಗಳು ಕೂಡಾ ಇದನ್ನು 'ಧರ್ಮ ನಿಂದೆ'ಯ ಕೃತ್ಯ ಎಂದಿದ್ದರು.

ಆದರೆ, ನಂತರ ಎಚ್ಚೆತ್ತುಕೊಂಡ ಖೇತನ್, ಪವಿತ್ರ ಗ್ರಂಥಗಳಿಗೆ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ಹೋಲಿಕೆ ಮಾಡಿದ್ದು ತಪ್ಪೆನಿಸಿದರೆ ಕ್ಷಮೆ ಬೇಡುತ್ತೇನೆ ಎಂದಿದ್ದರು.

ಆದರೆ, ಖೇತನ್ ಅವರ ಕ್ಷಮೆಯಾಚನೆಯಿಂದ ತೃಪ್ತರಾಗದ ಸಿಖ್ ವಿದ್ಯಾರ್ಥಿ ಒಕ್ಕೂಟವು ದೂರು ದಾಖಲಿಸಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹಾಜರಿದ್ದ ಈ ಸಮಾರಂಭದಲ್ಲಿ ಇಂಥ ಹೇಳಿಕೆ ನೀಡಿದ್ದು ಶೋಚನೀಯ ಎಂದು ವಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

English summary
AAP spokesperson Ashish Khetan was booked on Wednesday for hurting religious sentiments in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X