AAP Kailash Gahlot: ಚುನಾವಣೆ ಮೊದಲೇ ಎಎಪಿಗೆ ಕೈಲಾಶ್ ಗಹ್ಲೋಟ್ ಗುಡ್‌ಬೈ
ನವದೆಹಲಿ, ನವೆಂಬರ್ 17: ದೆಹಲಿ ಮಾಜಿ ಮುಖ್ಯಮಂತ್ರಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸ್ವಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಅವರು ಆಘಾತ ನೀಡಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿತ್ತು. ಅಷ್ಟರಲ್ಲಿ ಕೈಲಾಶ್ ಗಹ್ಲೋಟ್ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ದೆಹಲಿ ಎಎಪಿ ನಾಯಕರಿಗೆ ಕಹಿ ಸುದ್ದಿ ರವಾನಿಸಿದ್ದಾರೆ.
ದೆಹಲಿಯಲ್ಲಿ ಅದರಲ್ಲಿ ತಮ್ಮ ಪಕ್ಷದಲ್ಲಿ ಭಾನುವಾರ ನಡೆದ ರಾಜಕೀಯ ಬೆಳವಣಿಗೆಯಿಂದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಅವರು ಆಘಾತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಕೈಲಾಶ್ ಗಹ್ಲೋಟ್ ಅವರು ಚುನಾವನೆಗೂ ಮೊದಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅಚ್ಚರಿ ಮೂಡಿಸಿದೆ.

ಕೈಲಾಶ್ ಗಹ್ಲೋಟ್ ಅವರು ನವದೆಹಲಿ ರಾಜ್ಯ ಸರ್ಕಾರದಲ್ಲಿ ಗೃಹ ಇಲಾಖೆ, ಸಾರಿಗೆ ಖಾತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐಟಿ ಸೇರಿದಂತೆ ನಿರ್ಣಾಯಕ ಖಾತೆಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಇಷ್ಟು ಸಾಮರ್ಥ್ಯ ಇರುವ ಇವರು ಯಾಕೆ ರಾಜೀನಾಮೆ ನೀಡಿದರೂ ಎಂಬುದಕ್ಕೆ ಉತ್ತರ ಅವರೇ ತಿಳಿಸಿದ್ದಾರೆ.
ಎಎಪಿಗೆ ರಾಜೀನಾಮೆ ನೀಡಿರುವ ಕೈಲಾಶ್ ಗಹ್ಲೋಟ್ ಅವರು ಪಕ್ಷದೊಳಗಿನ 'ಗಂಭೀರ ಸವಾಲುಗಳನ್ನು' ಉಲ್ಲೇಖಿಸಿ ರಾಜೀನಾಮೆ ನೀಡಿರುವುದು ಬಹಳ ವಿಶೇಷವಾಗಿದೆ. ದೆಹಲಿ ರಾಜ್ಯ ಸರ್ಕಾರವು ಅತೃಪ್ತ ಭರವಸೆಗಳನ್ನು ನೀಡಿದೆ. ಅಲ್ಲದೇ ಪಕ್ಷ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದರ್ಥದಲ್ಲಿ ದೆಹಲಿ ಜನರಿಗೆ ರಾಜಕೀಯ ಬದ್ಧತೆ ತೋರಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಎಪಿ ಮಾಡಿದ ತಪ್ಪೇನು? ಗಹ್ಲೋತ್ ಹೇಳಿದ್ದೇನು?
ದೆಹಲಿ ಆಮ್ ಆದ್ಮಿ ಪಕ್ಷವು ಒಟ್ಟುಗೂಡಿಸಿದ ಮೌಲ್ಯಗಳು, ಜನರಿಗೆ ನೀಡಿದ್ದ ಮಹತ್ವಾಕಾಂಕ್ಷೆಯ ಭರವಸೆಗಳನ್ನು ಈಡೇರಿಸಲಿಲ್ಲ. ಜನರ ಮೇಲಿನ ಬದ್ಧತೆಯನ್ನು ನಿಭಾಯಿಸುವಲ್ಲಿ ಸೋತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ಅವರು ದೆಹಲಿ ಯಮುನಾ ನದಿ ಮಾಲಿನ್ಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಜೊತೆಗಿನ ಜಗಳದಲ್ಲಿ ಯಮುನಾ ಮಾಲಿನ್ಯ ಪರಿಹಾರ ಕುರಿತು ನೀಡಿದ್ದ ಭರವಸೆಗಳನ್ನು ಸಕಾರಾಗೊಳಿಸಿಲ್ಲ. ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಿದ್ದಾಗಿನ ಒಂದಷ್ಟು ಘಟನೆಗಳನ್ನು ನೆನಪಿಸಿದ್ದಾರೆ.
ಎಎಪಿ ಯಮುನಾ ನದಿಯನ್ನು ಶುದ್ಧ ನದಿಯಾಗಿ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅದನ್ನು ಮಾಡಲು ಎಂದಿಗೂ ಸಾಧ್ಯವಾಗಲೇ ಇಲ್ಲ. ಸದ್ಯ ನದಿ ಈ ಹಿಂದಿನಗಿಂತಲೂ ಅಧಿಕ ಪ್ರಮಾಣದಲ್ಲಿ ಕಳುಷಿತಗೊಂಡಿದೆ. ಇದಲ್ಲದೇ ಪಕ್ಷದಲ್ಲಿ ಒಂದಷ್ಟು ವಿವಾದಗಳು ಭುಗಿಲೆದ್ದವು. ಸವಾಲುಗಳ ಮಧ್ಯೆ ಎಲ್ಲರನ್ನು ಅನುಮಾನದಿಂದ ನೋಡುವಂತಾಗಿದೆ.
ಪಕ್ಷವು ದೆಹಲಿ ಜನರಿಗಾಗಿ ಹೋರಾಟ ಮಾಡುವ ಬದಲು ಸ್ವರಾಜಕೀಯ ಹಿತಾಸಕ್ತಿಗೆ ಮಾತ್ರವೇ ಕೇಂದ್ರದ ವಿರುದ್ಧ ಹೋರಾಡುವಂತಾಗಿದೆ. ಇದು ನನಗೆ ಸರಿ ಕಾಣುತ್ತಿಲ್ಲ ಎಂದಿದ್ದಾರೆ.












Click it and Unblock the Notifications