ಉತ್ತರ ಪ್ರದೇಶದಲ್ಲಿ ಟಾಯ್ಲೇಟ್ ಗೂ ಕೇಸರಿ ಬಣ್ಣ!

Posted By:
Subscribe to Oneindia Kannada

ಇಟವಾಹ(ಉತ್ತರ ಪ್ರದೇಶ), ಜನವರಿ 12: ಇತ್ತೀಚೆಗೆ ತಾನೇ ಉತ್ತರ ಪ್ರದೇಶದ ಮಸೀದಿಯೊಂದರ ಹೊರಾಂಗಣ ಗೋಡೆಗೆ ಕೇಸರಿ ಬಣ್ಣ ಬಳಿದಿದ್ದು ಸುದ್ದಿಯಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಕೇಸರಿ ಬಣ್ಣ ಸುದ್ದಿ ಮಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಜಿಲ್ಲೆಯಾದ ಕೃಪಾಲ್ಪುರದ ಇಟವಾಹ ಎಂಬಲ್ಲಿ ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಟಾಯ್ಲೆಟ್ ಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಸುವ ಮೂಲಕ ಇಲ್ಲಿನ ಹಳ್ಳಿಯ ಮುಖ್ಯಸ್ಥ ವೇದ್ ಪಾಲ್ ಎಂಬುವವರು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಲಕ್ನೋ ಮಸೀದಿಗೆ ಕೇಸರಿ ಬಣ್ಣ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಿಪಕ್ಷ ಕಿಡಿ

'ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಅವರು ಕಚೇರಿಗಳಿಗೂ ಕೇಸರಿ ಬಣ್ಣ ಬಳಿವಾಗ ನಾವು ಶೌಚಾಲಯಕ್ಕೆ ಬಳಿದರೇನಂತೆ' ಎಂದು ಪ್ರಶ್ನಿಸಿದ್ದಾರೆ ಪಾಲ್!

A UP village gives toilets saffron colour

ಒಟ್ಟಿನಲ್ಲಿ ತ್ಯಾಗ, ಧೈರ್ಯದ ಪ್ರತೀಕವಾದ ಕೇಸರಿ ಬಣ್ಣವನ್ನು ಶೌಚಾಲಯಕ್ಕೆ ಬಳಿಸಿದ ಗ್ರಾಮ ಮುಖ್ಯಸ್ಥನ ಕುರಿತು ಆಕ್ರೋಶವಂತೂ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A village in Uttar Pradesh has started giving toilets saffron colour. Kripalpur village is in Samajwadi Party (SP) chief and former Chief Minister Akhilesh Yadav's home district Etawah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ