'ಪಾನ್ ಮಸಾಲಾ' ಚೀಟುಗಳಲ್ಲಿ ಲಕ್ಷಗಟ್ಟಲೇ ಹಣ ಬಚ್ಚಿಟ್ಟವನನ್ನು ಬಂಧಿಸಿದ ಕೋಲ್ಕತ್ತ ಕಸ್ಟಮ್ಸ್ ಅಧಿಕಾರಿಗಳು

ಕೋಲ್ಕತ್ತ, ಜನವರಿ 09: ಬ್ಯಾಗ್‌ನಲ್ಲಿ 'ಪಾನ್ ಮಸಾಲಾ' ಚೀಟುಗಳಲ್ಲಿ ಅಪಾರ ಪ್ರಮಾಣದ ಡಾಲರ್ ನೋಟುಗಳನ್ನು ಬಚ್ಚಿಟ್ಟುಕೊಂಡು ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ ಘಟನೆ ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತದಲ್ಲಿ ನಡೆದಿದೆ.

ಸೀಲ್ ಮಾಡಿದ ನೂರಾರು 'ಪಾನ್ ಮಸಾಲಾ' ಸ್ಯಾಚೆಟ್‌ಗಳಲ್ಲಿ ರೂ.32 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಾಲರ್ ನೋಟುಗಳನ್ನು ಬಚ್ಚಿಟ್ಟು ವ್ಯಕ್ತಿಯೊಬ್ಬರು ಥಾಯ್ಲೆಂಡ್‌ನ ಬ್ಯಾಂಕಾಕ್‌ಗೆ ತೆರಳಲು ಯತ್ನಿಸಿದ್ದರು. ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳ ಮಾಹಿತಿಯ ಮೇರೆಗೆ ಕೋಲ್ಕತ್ತಾ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆತನನ್ನು ಪರಿಶೀಲಿಸಿ ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯ ಟ್ರಾಲಿ ಬ್ಯಾಗಿನಲ್ಲಿ 'ಪಾನ್ ಮಸಾಲಾ' ಚೀಟು‌ಗಳಲ್ಲಿ ರೂ.32 ಲಕ್ಷಕ್ಕೂ ಹೆಚ್ಚು ಮೌಲ್ಯದ ಡಾಲರ್ ನೋಟುಗಳು ಪತ್ತೆಯಾಗಿವೆ. ಒಂದು ಪಾನ್‌ ಮಸಾಲಾ ಚೀಟುಗಳ ಒಳಗೆ ತಲಾ ಎರಡು, ಹತ್ತು ಡಾಲರ್ ನಂತೆ ಅಪಾರ ಹಣದ ನೋಟುಗಳನ್ನು ಯಾರಿಗೂ ಗೊತ್ತಾಗದಂತೆ ಹುದುಗಿಸಿಟ್ಟಿದ್ದ. ಅಧಿಕಾರಿಗಳ ಕಣ್ತಪ್ಪಿಸಲು ಕೆಲವು ಪಾನ್ ಮಸಾಲಾ ಚೀಟುಗಳನ್ನು ಹಾಗೆಯೆ ಬಿಟ್ಟಿದ್ದ.

A Passenger Arrested He Trying To Fly To Bangkok with 40,000 Dollars In Pan Masala Sachet

ಅಧಿಕಾರಿಗಳು ವಶಕ್ಕೆ ಪಡೆದ ಒಟ್ಟು ಡಾಲರ್ (ಹಣದ) ಮೌಲ್ಯ $40,000 (ರೂ.32,78,000) ಎನ್ನಲಾಗಿದೆ. ಕಸ್ಟಮ್ಸ್ ಅಧಿಕಾರಿಯೊಬ್ಬರು ಸ್ಯಾಚೆಟ್‌ಗಳನ್ನು ಹರಿದು ಹಾಕುವ ವೀಡಿಯೊ ಹರಿದಾಡುತ್ತಿದೆ. ಅದರಲ್ಲಿ ಸುಮಾರು 10 ಡಾಲರ್ ನೋಟುಗಳನ್ನು ಜೋಡಿಯಾಗಿ ಮತ್ತು ಪಾರದರ್ಶಕ ಪ್ಲಾಸ್ಟಿಕ್‌ನಿಂದ ಮುಚ್ಚಿರುವುದು ಕಾಣಿಸುತ್ತದೆ. ದೊಡ್ಡ ಟ್ರಾಲಿ ಬ್ಯಾಗ್‌ ಇದಾಗಿದ್ದು, ಕೆಲವು ಚೀಟುಗಳಲ್ಲಿ ಹರಿದ ತಕ್ಷಣ ಪಾನ್ ಮಸಾಲಾ ಬೀಳುವುದು ಮತ್ತು ಇನ್ನೂ ಕೆಲವು ಪಾನ್‌ ಮಸಾಲಾ ಚೀಟುಗಳಲ್ಲಿ ನೋಟುಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+