ದೆಹಲಿಯಲ್ಲಿ ಏಕಾಏಕಿ ಕುಸಿದ ಮದುವೆಗೆ ಹಾಕಲಾಗಿದ್ದ ಬೃಹತ್ ಪೆಂಡಾಲ್! ವೀಡಿಯೊ

ನವದೆಹಲಿ ಫೆಬ್ರವರಿ 17: ದೆಹಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ದೊಡ್ಡ ಅವಘಡವೊಂದು ಸಂಭವಿಸಿದೆ. ಮದುವೆಗೆ ಹಾಕಲಾಗಿದ್ದ ಬೃಹತ್ ಪೆಂಡಾಲ್ ಏಕಾಏಕಿ ಕುಸಿದು 12 ಮಂದಿ ಗಾಯಗೊಂಡಿದ್ದು ಇದರೊಳಗೆ ಇನ್ನಷ್ಟು ಜನ ಸಿಲುಕಿರುವ ಶಂಕೆ ಇದೆ.

ಕ್ರೀಡಾಂಗಣದ ಗೇಟ್ ನಂ.2ರ ಬಳಿಯ ಹುಲ್ಲುಹಾಸಿನಲ್ಲಿ ಮದುವೆಯ ಪೆಂಡಾಲ್ ಹಾಕಲಾಗಿತ್ತು. ಈ ವೇಳೆ ಒಂದು ಭಾಗ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. 20ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆ ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿವೆ.

ಡಿಸಿಪಿ (ದಕ್ಷಿಣ) ಅಂಕಿತ್ ಚೌಹಾಣ್ ಮಾತನಾಡಿ, ''ಬೆಳಿಗ್ಗೆ 11.15 ರ ಸುಮಾರಿಗೆ ಪಂಂಡಲ್ / ಟೆಂಟ್ ಕುಸಿದು ಅದರ ಅಡಿಯಲ್ಲಿ ಕೆಲವು ಕಾರ್ಮಿಕರು ಸಿಲುಕಿರುವ ಸಾಧ್ಯತೆಯ ಬಗ್ಗೆ ಕರೆ ಸ್ವೀಕರಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡಕ್ಕೆ 25-30 ಕೂಲಿ ಕಾರ್ಮಿಕರು ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಇಲ್ಲಿ ಮದುವೆಗೆ ಟೆಂಟ್ ಹಾಕಲಾಗುತ್ತಿತ್ತು. ಸ್ಥಳೀಯರ ನೆರವಿನಿಂದ ಪೊಲೀಸರು ಸಿಲುಕಿದವರನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿಯವರೆಗೆ 25-30 ಜನರನ್ನು ರಕ್ಷಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ಅಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ'' ಎಂದರು.

A huge wedding pendal in Delhi suddenly collapsed

ಕಲ್ಕಾಜಿ ದೇವಸ್ಥಾನದಲ್ಲಿಯೂ ಕೂಡ ಪಂಡಲ್ ಕುಸಿದು ಅವಘಡ

ಇತ್ತೀಚೆಗೆ ದೆಹಲಿಯ ಕಲ್ಕಾಜಿ ದೇವಸ್ಥಾನದಲ್ಲಿ ಪೆಂಡಾಲ್ ಕುಸಿದು ಅವಘಡ ಸಂಭವಿಸಿತ್ತು. ಕಲ್ಕಾಜಿ ದೇವಸ್ಥಾನದಲ್ಲಿ ಜಾಗರಣೆಗಾಗಿ ಹಾಕಲಾಗಿದ್ದ ಪೆಂಡಾಲ್ ಕುಸಿದು 45 ವರ್ಷದ ಮಹಿಳೆ ಸಾವನ್ನಪ್ಪಿದ್ದು, 17 ಮಂದಿ ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಜಾಗರಣೆಯಲ್ಲಿ ಗಾಯಕ ಬಿ ಪ್ರಾಕ್ ಕೂಡ ಇದ್ದರು. ಕಾರ್ಯಕ್ರಮಕ್ಕೆ ಯಾವುದೇ ಪೂರ್ವಾನುಮತಿ ನೀಡಿಲ್ಲ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಕಲ್ಕಾಜಿ ದೇವಸ್ಥಾನದ ಮಹಂತ್ ಆವರಣದಲ್ಲಿ ಜಾಗರಣೆಯಲ್ಲಿ ಆಯೋಜಿಸಲಾಗಿದ್ದು, ಸುಮಾರು 1600 ಮಂದಿ ಪಾಲ್ಗೊಂಡಿದ್ದರು. ಜಾಗರಣೆಯಲ್ಲಿ ಗಾಯಕ ಬಿ ಪ್ರಾಕ್ ಹಾಡಿದ್ದರು. ಮೂಲಗಳ ಪ್ರಕಾರ, ಘಟನೆಗೂ ಮುನ್ನ ಅವರು ಸ್ಥಳದಿಂದ ನಿರ್ಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+