ಗಾಜಿಯಾಬಾದ್‌ನಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ: ಹಲವರು ಅವಶೇಷಗಳಡಿ
ಗಾಜಿಯಬಾದ್, ಜುಲೈ 27: ಉತ್ತರ ಪ್ರದೇಶದ ಗಾಜಿಯಾಬಾದ್ ನಗರದ ಕೋಡಾ ಎಂಬಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದಿದ್ದು ಹಲವರು ಅವಶೇಷಗಳ ಅಡಿ ಸಿಲುಕಿದ್ದಾರೆ.
ರಾತ್ರಿ ಎಂಟು ಗಂಟೆ ಸುಮಾರಿಗೆ ಐದು ಅಂತಸ್ತುಗಳ ಕಟ್ಟಡವು ಏಕಾಏಕಿ ಕುಸಿದಿದ್ದು. ಜನನಿಬಿಡ ಪ್ರದೇಶವಾದ್ದರಿಂದ ಹೆಚ್ಚಿನ ಹಾನಿ ಆಗಿರುವ ಅಂದಾಜಿದೆ.
ಎನ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯ ನಡೆಸುತ್ತಿದ್ದು, ಅವಶೇಷಗಳ ಅಡಿಯಲ್ಲಿರುವವರನ್ನು ರಕ್ಷಿಸುವ ಕಾರ್ಯ ನಡೆಸಲಾಗುತ್ತಿದೆ.

ಗಾಜಿಯಾಬಾದ್‌ನಲ್ಲಿ ಕೆಲವು ದಿನಗಳಿಂದ ಸತತವಾಗಿ ಮಳೆ ಆಗುತ್ತಿದ್ದು, ಕೆಲವುಕಡೆ ರಸ್ತೆಗಳು ಕುಸಿದಿವೆ. ಇಂದು ಮುಂಜಾನೆಯಷ್ಟೆ ಗಾಜಿಯಾಬಾದ್‌ನಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಯು ಖಾಲಿ ಮಾಡಿಸಿತ್ತು.












Click it and Unblock the Notifications