ಪಂಜಾಬ್ ಮುಖ್ಯಮಂತ್ರಿಗಳ ಮನೆ ಬಳಿ ಬಾಂಬ್ ಪತ್ತೆ
ಚಂಡೀಗಡ, ಜನವರಿ 2: ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಸ್ಫೋಟಕ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಇಂದು ಪತ್ತೆಯಾಗಿದೆ.
ಹೀಗಾಗಿ ಪಂಜಾಬ್ ಮತ್ತು ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಗಿದೆ. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಕೂಡ ತನಿಖೆಗಾಗಿ ನಿಯೋಜನೆ ಮಾಡಲಾಗಿದೆ. ಸಂಜೆ 4ರಿಂದ 4:30ರ ಸುಮಾರಿಗೆ ಪಂಜಾಬ್ ಮುಖ್ಯಮಂತ್ರಿಯ ಹೆಲಿಪ್ಯಾಡ್ ಮತ್ತು ನಿವಾಸದ ಸಮೀಪವಿರುವ ಮಾವಿನ ತೋಟದಲ್ಲಿ ಟ್ಯೂಬ್‌ವೆಲ್ ನಿರ್ವಾಹಕರು ಈ ಬಾಂಬ್ ಅನ್ನು ಗುರುತಿಸಿದ್ದಾರೆ.
ಈ ಸಮಯದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ನಿವಾಸದಲ್ಲಿ ಇರಲಿಲ್ಲ. "ಇಲ್ಲಿ ಕೆಲವು ಅನಗತ್ಯ ವಸ್ತುಗಳು ಪತ್ತೆಯಾಗಿವೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ಪರಿಶೀಲಿಸಿದಾಗ ಅದು ಜೀವಂತ ಬಾಂಬ್‌ಶೆಲ್ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ಅದನ್ನು ಈಗ ತನಿಖೆ ನಡೆಸುತ್ತಿದ್ದೇವೆ. ಅದು ಇಲ್ಲಿಗೆ ಹೇಗೆ ತಲುಪಿತು ಎಂಬುದನ್ನು ನಾವು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಇದಲ್ಲದೆ, ನಾವು ಬಾಂಬ್ ಸ್ಕ್ವಾಡ್ ಸಹಾಯದಿಂದ ಪ್ರದೇಶವನ್ನು ಸುರಕ್ಷಿತಗೊಳಿಸಿದ್ದೇವೆ. ಈಗ ಸೇನೆಯು ಬಂದು ಅದನ್ನು ನೋಡಿಕೊಳ್ಳುತ್ತದೆ ಎಂದು ಚಂಡೀಗಢ ಆಡಳಿತದ ನೋಡಲ್ ಅಧಿಕಾರಿ ಕುಲದೀಪ್ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನು ಗಂಭೀರ ವಿಷಯ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್, "ಸಿಎಂ ಭಗವಂತ್ ಮಾನ್ ಅವರ ನಿವಾಸದ ಬಳಿಯ ಜೀವಂತ ಬಾಂಬ್ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ಮಾಡಬೇಕು. ಪಂಜಾಬ್ ಸಿಎಂ ನಿವಾಸದ ಹತ್ತಿರ ಲೈವ್ ಬಾಂಬ್ ಇಡುವ ಧೈರ್ಯವಿರುವವರು ಏನು ಬೇಕಾದರೂ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications