ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ವಿಷ ಲೇಪಿತ 9,600 ಕೆಜಿ ಮೀನು ವಶ

By Sachhidananda Acharya
|
Google Oneindia Kannada News

ತಿರುವನಂತಪುರಂ, ಜೂನ್ 26: ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಕೇರಳದಲ್ಲಿ ಟಾಕ್ಸಿಕ್ ಮಿಶ್ರಿತ ಮೀನುಗಳ ಕಾರುಬಾರು ಜೋರಾಗಿದೆ. ಇದಕ್ಕೆ ತಡೆ ಹಾಕಲು ಕೇರಳ ಸರಕಾರ 'ಆಪರೇಷನ್ ಸಾಗರ್ ರಾಣಿ' ಆರಂಭಿಸಿದ್ದು 9,600 ಕೆಜಿ ವಿಷಕಾರಿ ಮೀನುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊಲ್ಲಂ ಜಿಲ್ಲೆಯ ಅರಯನಕಾವು ಚೆಕ್ ಪೋಸ್ಟ್ ನಲ್ಲಿ ವಿಷಕಾರಿ ರಸಾಯನಿಕ ಫಾರ್ಮಾಲಿನ್ ಬೆರೆಸಿದ ಮೀನುಗಳನ್ನು ವಶಕ್ಕೆ ಪಡೆಯಲಾಗಿದೆ.

ಕರಾವಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಕೆಮಿಕಲ್ ಲೇಪಿತ ಮೀನುಗಳು?ಕರಾವಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ಕೆಮಿಕಲ್ ಲೇಪಿತ ಮೀನುಗಳು?

ಇವುಗಳೆಲ್ಲಾ ತಮಿಳುನಾಡಿನ ತೂತುಕುಡಿ ಬಂದರಿನಿಂದ ಬಂದ ಮೀನುಗಳಾಗಿವೆ ಎಂದು ಇಲ್ಲಿನ ರಾಜ್ಯ ಆರೋಗ್ಯ ಸುರಕ್ಷತಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. 9,600 ಕೆಜಿ ಮೀನುಗಳಲ್ಲಿ 7,000 ಕೆಜಿ ಸೀಗಡಿ ಮೀನುಗಳು ಮತ್ತು 2,600 ಕೆಜಿ ಇತರ ಜಾತಿಯ ಮೀನುಗಳಾಗಿವೆ.

9600 kg of toxic fish seized in Kerala

ಈ ಮೀನು ಬೇಟೆಯೊಂದಿಗೆ ಆಪರೇಷನ್ ಸಾಗರ್ ರಾಣಿ ಆರಂಭಿಸಿದ ನಂತರ ಒಟ್ಟಾರೆ 21,600 ಕೆಜಿ ಮೀನುಗಳನ್ನು ವಶಕ್ಕೆ ಪಡೆದಂತೆ ಆಗಿದೆ.

ಪಾರ್ಮಲಿನ್ ವಿಷಕಾರಿ ರಾಸಾಯನಿಕವಾಗಿದ್ದು, ಹೆಣವನ್ನು ಶವಗಾರದಲ್ಲಿ ಕೊಳೆಯದಂತೆ ಕಾಪಿಟ್ಟುಕೊಳ್ಳಲು ಇದನ್ನು ಬಳಸುತ್ತಾರೆ. ಇದೀಗ ಮೀನುಗಳಿಗೂ ಇದನ್ನು ಲೇಪನ ಮಾಡುವುದು ತಿಳಿದು ಬಂದಿದೆ.

ಇದನ್ನು ಇತ್ತೀಚೆಗೆ ಹಣ್ಣು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಬಳಸುತ್ತಿರುವುದು ತಿಳಿದು ಬಂದಿದೆ. ಇದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.

English summary
Nearly 9,600 kg of fish, preserved in toxic chemical formalin, was seized at the border check post of Arayankavu in Kollam district. The state food safety department officials intercepted a cargo of chemical-laced fish from Tuticorin in neighbouring Tamil Nadu, at the check post last night, a release said here today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X