ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯ 93 ಸಾವಿರ ಸಿಬ್ಬಂದಿಗೆ ಕೊರೊನಾ ಸೋಂಕು

|
Google Oneindia Kannada News

ನವದೆಹಲಿ, ಏಪ್ರಿಲ್ 24: ಕೊರೊನಾ ಸೋಂಕಿನ ಪ್ರಮಾಣ ದೇಶದಲ್ಲಿ ಏರಿಕೆಯಾಗಿರುವ ನಡುವೆಯೇ, ಭಾರತೀಯ ರೈಲ್ವೆ ಇಲಾಖೆಯ 93 ಸಾವಿರ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದಾಗಿ ರೈಲ್ವೆ ಮಂಡಳಿ ಅಧ್ಯಕ್ಷ ಹಾಗೂ ಸಿಇಒ ಸುನೀತ್ ಶರ್ಮಾ ಮಾಹಿತಿ ನೀಡಿದ್ದಾರೆ.

"ರೈಲ್ವೆ ಇಲಾಖೆಯೂ ಕೊರೊನಾಗೆ ಹೊರತಾಗಿಲ್ಲ. ಕೊರೊನಾ ಸೋಂಕಿನ ರೈಲ್ವೆ ಇಲಾಖೆಯ ಸುಮಾರು 93 ಸಾವಿರ ಸಿಬ್ಬಂದಿ ತುತ್ತಾಗಿದ್ದಾರೆ. ಈ ಸೋಂಕಿತರಿಗಾಗಿ 72 ಆಸ್ಪತ್ರೆಗಳಲ್ಲಿ 5000 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ" ಎಂದು ಶರ್ಮಾ ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಕೊರೊನಾ ರೋಗಿಗಳ ಜೀವ ಉಳಿಸಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳ ಆರಂಭಕೊರೊನಾ ರೋಗಿಗಳ ಜೀವ ಉಳಿಸಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ರೈಲುಗಳ ಆರಂಭ

ಕೊರೊನಾ ಸೋಂಕು ತಗುಲಿದವರೆಲ್ಲರೂ ಆಸ್ಪತ್ರೆಗೆ ಸೇರಿಕೊಳ್ಳಬೇಕೆಂದಿಲ್ಲ. ಕೆಲವರು ಸ್ವತಃ ಕ್ವಾರಂಟೈನ್ ಆಗಿದ್ದಾರೆ. ಸದ್ಯದ ಈ ಪರಿಸ್ಥಿತಿ ಭಾರತೀಯ ರೈಲ್ವೆಗೆ ಅತಿ ದೊಡ್ಡ ಸವಾಲಾಗಿದೆ. ಈಗಿರುವ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಂಡು ಈ ಸವಾಲನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯವಾಗಿದೆ ಎಂದಿದ್ದಾರೆ.

93 Thousand Railway Staff Tested Corona Positive

ಎಲ್ಲಾ ರೈಲ್ವೆ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಜನರನ್ನು ಹಾಗೂ ಸರಕುಗಳನ್ನು ಮಾತ್ರವಲ್ಲ, ತುರ್ತು ಅಗತ್ಯವಿರುವ ಸರಕುಗಳನ್ನೂ ರೈಲುಗಳ ಮುಖಾಂತರ ಸಾಗಣೆ ಮಾಡಲಾಗುತ್ತಿದೆ. ಜನರ ಅವಶ್ಯಕತೆಗಳನ್ನು ಪೂರೈಸುವುದು ಈ ಸಂದರ್ಭದಲ್ಲಿ ನಮಗೆ ಮುಖ್ಯವಾಗಿದೆ. ನಮ್ಮ ಎಲ್ಲಾ 12 ಲಕ್ಷ ಸಿಬ್ಬಂದಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಕ್ಕೆ ಇಂಥ ಸಂದರ್ಭದಲ್ಲಿ ಸೇವೆ ಒದಗಿಸುವುದು ನಮ್ಮ ಆದ್ಯತೆ ಎಂದಿದ್ದಾರೆ

Recommended Video

KL Rahul ಮುಂಬೈ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ | Oneindia Kannada

English summary
93 thousand staffs of indian railway tested corona positive informed Railway Board Chairman and CEO Suneet Sharma,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X