8th Pay Commission: ಪಿಂಚಣಿ ಹೆಚ್ಚಳಕ್ಕೆ ಡಿಮ್ಯಾಂಡ್: OPS ಪಿಂಚಣಿ 50-67%ಕ್ಕೆ ಏರಿಕೆಯಾಗುತ್ತಾ?

8ನೇ ವೇತನ ಆಯೋಗ: ಕೇಂದ್ರ ಸರ್ಕಾರವು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ 8ನೇ ವೇತನ ಆಯೋಗವನ್ನು ಕಳೆದ ವರ್ಷ 2025ರ ನವೆಂಬರ್ 3 ರಂದು ರಚಿಸಿತು. ಈ ಆಯೋಗಕ್ಕೆ ಒಟ್ಟು 18 ತಿಂಗಳ ಅವಧಿ ಇದ್ದು, ಅದಾಗಲೇ 10 ತಿಂಗಳು ಕಳೆದಿವೆ. ಸದ್ಯ ಅವಧಿಯೊಳಗೆ ನೌಕರರ ಸಂಘಟನೆಗಳ ಜೊತೆಗೆ ನಿರಂತರವಾಗಿ ಚರ್ಚಿಸುತ್ತಿದೆ. ಸಭೆಗಳನ್ನು ಮಾಡುತ್ತಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಭತ್ಯೆಗಳು ಮತ್ತು ಪಿಂಚಣಿ ಹೆಚ್ಚಳ ಕುರಿತು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ವರದಿಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಾಗುತ್ತಿದೆ. ಹಾಗಾದರೆ ಯಾವೆಲ್ಲ ಪ್ರಮುಖ ಬೇಡಿಕೆಗಳು ಕೇಳಿ ಬಂದಿವೆ? ಎಂಬ ಮಹತ್ವದ ಮಾಹಿತಿ ಇಲ್ಲಿದೆ.

ನೌಕರರ ಸಂಘಟನೆಗಳು, ಒಕ್ಕೂಟಗಳ ಜೊತೆಗೆ ಆಯೋಗದಿಂದ ಸೆಪ್ಟಂಬರ್ 7ರಿಂದ ಮತ್ತೊಂದು ಹಂತದಲ್ಲಿ ಸಭೆಗಳು ನಡೆಯಲಿವೆ. ಚೆನ್ನೈ ಬಳಿಕ ಸೆಪ್ಟೆಂಬರ್ 9, ಸೆಪ್ಟೆಂಬರ್ 16 ಮತ್ತು ಅಕ್ಟೋಬರ್ 7 ರಿಂದ ಪುದುಚೇರಿ, ಚಂಡೀಗಢ ಹಾಗೂ ಬೆಂಗಳೂರಿನಲ್ಲಿ ಸಭೆ ನಡೆಯಲಿವೆ. ಪಿಂಚಣಿ ಸಮಸ್ಯೆ, ಖಚಿತ ಪರಿಹಾರಗಳು, ಸರ್ಕಾರಿ ಉದ್ಯೋಗಿ ಮತ್ತು ಪಿಂಚಣಿದಾರರು ನಿವೃತ್ತಿ ನಂತರ ಪ್ರಯೋಜನಗಳಲ್ಲಿನ ಅಗತ್ಯವಿದ್ದಲ್ಲಿ ಬದಲಾವಣೆಗಳನ್ನು ಚರ್ಚಿಸಲಾಗುತ್ತದೆ.

8th Pay Commission

ಶೇ.50-67ರಷ್ಟು ಏರಿಕೆ ಪ್ರಸ್ತಾವನೆ

ಇನ್ನೂ ಪಿಂಚಣಿ ಸಂಸ್ಥೆಗಳ ಪ್ರಮುಖ ಬೇಡಿಕೆಗಳಲ್ಲಿ ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ ಶೇ 50 ರಿಂದ 67ರಷ್ಟು ಏರಿಕೆ ಮಾಡುವ ಪ್ರಸ್ತಾಪವು ಪ್ರಮುಖವಾಗಿದೆ. ಒಂದು ಶ್ರೇಣಿ, ಒಂದು ಪಿಂಚಣಿ (OROP) ಲಾಭಗಳನ್ನು ವಿಸ್ತರಿಸುವುದು ಮತ್ತೊಂದು ನಿರ್ಣಾಯಕ ಬೇಡಿಕೆಯಾಗಿದೆ. ಎಲ್ಲ ಬೇಡಿಕೆಗಳ ಆಧರಿಸಿ 8 ನೇ ವೇತನ ಆಯೋಗವು ಅಂತಿಮ ಶಿಫಾರಸುಗಳನ್ನು ಸಮಿತಿ ನಿರ್ಧರಿಸುತ್ತದೆ.

ಸಭೆಗಳು, ಚರ್ಚೆಗಳು ಮುಗಿದ ಮೇಲೆ ವೇತನ, ಭತ್ಯೆ ಪರಿಷ್ಕರಣೆಗೆ ಫಿಟ್‌ಮೆಂಟ್ ಅಂಶ ಹೆಚ್ಚಳವನ್ನು ಸರ್ಕಾರ ಯಾವ ಪ್ರಮಾಣದಲ್ಲಿ ಪರಿಗಣಿಸುತ್ತದೆ ಎಂಬುದು ಪ್ರಮುಖ ಪಾತ್ರವಹಿಸಲಿದೆ. ಅದರ ಆಧಾರದಲ್ಲಿ ಈ ಬಾರಿಯ ಪರಿಷ್ಕರಣೆ ನಿರ್ಧಾರವಾಗುತ್ತದೆ. 8 ನೇ ವೇತನ ಆಯೋಗದ ತಾತ್ಕಾಲಿಕ ವರದಿಯು ಮುಂದಿನ ವರ್ಷ 2027 ಮೇ-ಜೂನ್ ತಿಂಗಳೊಳಗೆ ಮಂಡಿಸಲು ಮುಹೂರ್ತ ಫಿಕ್ಸ್ ಆಗಿದೆ. ಈ ದಿನಕ್ಕಾಗಿ ನೌಕರರು ಕಾಯುತ್ತಿದ್ದಾರೆ.

4-7 ನೇ ಹಂತದ ಉದ್ಯೋಗಿಗಳ ಪಿಂಚಣಿ ಲೆಕ್ಕಾಚಾರ

ಹಿಂದಿನ 7ನೇ ವೇತನ ಆಯೋಗದ ಅಡಿಯಲ್ಲಿ ಕೊನೆಯ ಮೂಲ ವೇತನದ ಶೇ.50 ಅಥವಾ ಕೊನೆಯ 10 ತಿಂಗಳ ಸರಾಸರಿ ಮೂಲ ವೇತನದಲ್ಲಿ ಲೆಕ್ಕಹಾಕಲಾಗುತ್ತದೆ. ಹೆಚ್ಚಿರುವ ವೇತವನ್ನು ಪರಿಗಣಿಸಲಾಗುತ್ತದೆ. 4ನೇ ಹಂತ ಉದ್ಯೋಗಿಗಳ ಮೂಲವೇತನ 25,500 ರೂ. ಆಗಿದ್ದರೆ ಕನಿಷ್ಠ ಪಿಂಚಣಿ 12,750 ರೂಪಾಯಿ ಆಗಿರಲಿದೆ. 5ನೇ ಹಂತ ನೌಕರರ ಕ್ರಮವಾಗಿ ಮೂಲ ವೇತನ 29,200 ರೂ, ಕನಿಷ್ಠ ಪಿಂಚಣಿ 14,600 ರೂ. ಇರಲಿದೆ. 6ನೇ ಹಂತದಲ್ಲಿ ನೌಕರರು ಕ್ರಮವಾಗಿ 35,400 ರೂ. ಮೂಲವೇತನ, 17,700ರೂ. ಕನಿಷ್ಠ ಪಿಂಚಣಿ, 7ನೇ ಹಂತದಲ್ಲಿ 44,900 ರೂ.,22,450 ರೂ. ಆಗಿರಲಿದೆ ಎಂಬ ಅಂದಾಜಿಸಿದೆ.

ಫಿಟ್‌ಮೆಂಟ್ 3.61-04 ಪರಿಗಣಿಸಲು ಡಿಮ್ಯಾಂಡ್

ಅಸ್ತಿತ್ವದಲ್ಲಿರುವ ಮೂಲ ಪಿಂಚಣಿಯು 2.15, 2.28 ಮತ್ತು 2.57ರ ಫಿಟ್‌ಮೆಂಟ್ ಅಂಶ ಪರಿಗಣಿಸಿದರೆ, ಕನಿಷ್ಠ ಪಿಂಚಣಿ ಹೆಚ್ಚಾಗಲಿದೆ. ಮುಂದೆ 8ನೇ ವೇತನ ಆಯೋಗದಿಂದ ನೌಕರರ ಬೇಡಿಕೆಯಷ್ಟು ಫಿಟ್‌ಮೆಂಟ್ ಅಂಶನ್ನು ಘೋಷಿಸಿದರೆ ಅಂತಿಮವಾಗಿ ತುಟ್ಟಿಭತ್ಯೆ, ಪಿಂಚಣಿ, ವೇತನ ಪರಿಷ್ಕರಣೆಯ ಸ್ಪಷ್ಟ ಲೆಕ್ಕಾಚಾರ ಲಭ್ಯವಾಗಲಿದೆ. ಸದ್ಯ ನೌಕರರ ಒಕ್ಕೂಟವು ಈ ಬಾರಿ 3.61 ನಿಂದ 04ರಷ್ಟು ಫಿಟ್‌ಮೆಂಟ್ ಅಂಶ ಪರಿಗಣಿಸಿ ಆರ್ಥಿಕ ಸೌಲಭ್ಯ ಕಲ್ಪಿಸುವಂತೆ ಕೋರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+