88 ವರ್ಷದ ವೃದ್ಧನಿಗೆ ಹೊಡೆದ 5 ಕೋಟಿ ಲಾಟರಿ
ಚಂಡೀಗಢ, ಜನವರಿ 20: ರಾತ್ರೋರಾತ್ರಿ ಅದೃಷ್ಟ ಹೇಗೆ ಬದಲಾಗುತ್ತದೆ ಹೇಳಲು ಸಾಧ್ಯವಿಲ್ಲ. ನಿಜ ಜೀವನದಲ್ಲಿ ಈ ಬಗೆಯ ಘಟನೆಗಳು ಸಂಭವಿಸುವುದಿಲ್ಲ. ಆಚಾನಕ್ಕಾಗಿ ನಡೆದರೆ ಇದರಿಂದ ಸಮಾಜವೇ ನಿಬ್ಬೆರಗಾಗುತ್ತದೆ.
ಇಂತಹದ್ದೇ ಘಟನೆ ಪಂಜಾಬ್‌ನ ದೇರಾಬಸ್ಸಿಯಲ್ಲಿ ನಡೆದಿದೆ. ಇಲ್ಲಿನ ಸ್ಥಳಿಯ ತ್ರಿವೇದಿ ಕ್ಯಾಂಪ್‌ನ ನಿವಾಸಿ 88 ವರ್ಷದ ಮಹಂತ್ ದ್ವಾರಕಾ ದಾಸ್‌ಗೆ ಅದೃಷ್ಟವು ಅವರ ಬಾಗಿಲನ್ನು ತಟ್ಟಿದೆ. ಅವರಿಗೆ ಬರೋಬ್ಬರಿ 5 ಕೋಟಿ ಲಾಟರಿ ಹೊಡೆದಿದೆ.
ಲಾಟರಿ ಹೊಡೆದ ಸುದ್ದಿಯು ಬಹಿರಂಗಗೊಂಡ ನಂತರ ಊರಿನಲ್ಲಿ ಸಂಭ್ರಮಾಚರಣೆಗಳು ನಡೆದವು. ಜನರು ಅವರಿಗೆ ಅಭಿನಂದಿಸಿ ಹಾರ ಹಾಕಿ ಅವರು ಸುತ್ತ ನೆರೆದಿದ್ದರು. ದ್ವಾರಕಾ ದಾಸ್ ಅವರು 5 ಕೋಟಿ ಮೌಲ್ಯದ ಲೋಹ್ರಿ ಮಕರ ಸಕ್ರಾಂತಿ ಬಂಪರ್ ಲಾಟರಿಯನ್ನು ಖರೀದಿಸಿದಾಗ ಅವರಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಅವರು ಭಾವಿಸಿರಲಿಲ್ಲ. ದಾಸ್ ಅವರು ಜಿರಾಕ್‌ಪುರದಿಂದ ಲಾಟರಿ ಟಿಕೆಟ್ ಖರೀದಿಸಿದ್ದರು. ಈಗ ಅವರಿಗೆ ತೆರಿಗೆ ಕಡಿತದ ನಂತರ ಸುಮಾರು 3.5 ಕೋಟಿ ರೂಪಾಯಿ ಸಿಗುವ ನಿರೀಕ್ಷೆಯಿದೆ.

ಸಾಧಾರಣ ಕುಟುಂಬದ ಹಿನ್ನೆಲೆಯ 88 ವರ್ಷದ ವ್ಯಕ್ತಿಯೊಬ್ಬರು ಭಾರಿ ಮೊತ್ತದ ಬಹುಮಾನ ಪಡೆದಿರುವುದಕ್ಕೆ ಲಾಟರಿ ಟಿಕೆಟ್ ಮಾರಾಟ ಮಾಡಿದ ಲೋಕೇಶ್ ಸಂತಸ ವ್ಯಕ್ತಪಡಿಸಿದರು. ದಾಸ್ ಅವರ ಮೊಮ್ಮಗ ನಿಖಿಲ್ ಶರ್ಮಾ ನನ್ನ ಬಳಿಗೆ ಬಂದು ಅವರ ಅಜ್ಜ ನಿರ್ದಿಷ್ಟ ಅಂಕೆಗಳಿರುವ ಲಾಟರಿ ಟಿಕೆಟ್ ಬೇಕು ಎಂದು ಹೇಳಿದ್ದರು. ನಾನು ಅವರಿಗೆ ಟಿಕೆಟ್ ನೀಡಿದ್ದೇನೆ. ಈಗ ಅವರು ಮೆಗಾ ಬಂಪರ್ ಗೆದ್ದಿದ್ದಾರೆ. ಜೀವನವೇ ಬದಲಾಗಲಿರುವ ಕುಟುಂಬಕ್ಕೆ ಟಿಕೆಟ್ ಮಾರಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಲೋಕೇಶ್ ಹೇಳಿದ್ದಾರೆ.
ದ್ವಾರಕಾ ದಾಸ್ ಅವರ ಕುಟುಂಬದ ಸದಸ್ಯರು ಮತ್ತು ಇತರ ನಿಕಟ ಸಹವರ್ತಿಗಳು ಈ ಸಂದರ್ಭವನ್ನು ಸಂತೋಷದಿಂದ ಆಚರಿಸಿ, ಡೋಲು ಬಾರಿಸಿ ನೃತ್ಯ ಮಾಡಿದರು. ಮಹಂತ್ ದ್ವಾರಕಾ ದಾಸ್ ಅವರು 1947ರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಪಾಕಿಸ್ತಾನದಿಂದ ವಲಸೆ ಬಂದವರು. ಅವರು ತಮ್ಮ ಕುಟುಂಬ ಮತ್ತು ತನಗಾಗಿ ವಸ್ತುಗಳನ್ನು ಬದಲಾಯಿಸಲು ಬಯಸಿದ್ದರಿಂದ ಅವರು ಆಗಾಗ್ಗೆ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು.
ಸ್ಥಳೀಯ ಡೇರಾವನ್ನು ನೋಡಿಕೊಳ್ಳುವ ದ್ವಾರಕಾ ದಾಸ್, ಅರ್ಧದಷ್ಟು ಮೊತ್ತವನ್ನು ಡೇರಾಗೆ ದಾನ ಮಾಡಲು ಮತ್ತು ಉಳಿದ ಮೊತ್ತವನ್ನು ತನ್ನ ಇಬ್ಬರು ಪುತ್ರರಿಗೆ ಸಮಾನವಾಗಿ ವಿತರಿಸಲು ಯೋಜಿಸಿದ್ದಾರೆ. ಒಂದು ದಿನ ಬಂಪರ್ ಪ್ರಶಸ್ತಿಯನ್ನು ನಿರೀಕ್ಷಿಸುತ್ತಾ ನಾನು ಪ್ರತಿ ತಿಂಗಳು ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದೆ. ಈ ಹಣವನ್ನು ಈಗ ನನ್ನ ಕುಟುಂಬದವರು ಬಳಸುತ್ತಾರೆ. ನಾನು ನನ್ನ ಜೀವನದುದ್ದಕ್ಕೂ ಬಹಳಷ್ಟು ಕೆಲಸ ಮಾಡಿದ್ದೇನೆ. ಆದರೆ ಯಾವತ್ತೂ ತಪ್ಪು ಮಾಡಿಲ್ಲ. ನಾವು 1947ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದೆವು ಮತ್ತು ಆಗ ನನಗೆ 13 ವರ್ಷ ವಯಸ್ಸಾಗಿತ್ತು ಎಂದು ಮಹಂತ್ ದ್ವಾರಕಾ ನೆನಪಿಸಿಕೊಂಡರು.












Click it and Unblock the Notifications