ಹುಷಾರ್‌.. ನೀವೂ 80s ಫೋಟೋ ಟ್ರೆಂಡ್ ಹಿಂದೆ ಬಿದ್ದಿದ್ದೀರಾ? ಸೈಬರ್ ತಜ್ಞರಿಂದ ಎಚ್ಚರಿಕೆ ಸಂದೇಶ

80s AI Photo Trend Effects: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳ ವೇದಿಕೆಗಳಾದ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸಾಪ್‌ನಲ್ಲಿ 80ರ ದಶಕದ ಸ್ಟೈಲ್‌ನ ಫೋಟೋಗಳು ಟ್ರೆಂಡಿಂಗ್‌ನಲ್ಲಿವೆ. ಕೃತಕ ಬುದ್ಧಿಮತ್ತೆ (AI) ಆ್ಯಪ್‌ಗಳ ಮೂಲಕ ಮೂಲ ಫೋಟೋಗಳನ್ನು ಅಪ್‌ಲೋಡ್ ಮಾಡಿ, ವಿಂಟೇಜ್ ಲುಕ್‌ನಲ್ಲಿ ಚಿತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಆದರೆ ಇದೀಗ ಇದನ್ನು ಅನುಸರಿಸುವವರಿಗೆ ಸೈಬರ್ ತಜ್ಞರು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಈ ಟ್ರೆಂಡ್ ಕುರಿತು ಸೈಬರ್ ತಜ್ಞರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಎಐ ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುವ ಮೂಲ ಫೋಟೋಗಳು ಹಾಗೂ ಮುಖದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಡೀಪ್‌ಫೇಕ್, ಮುಖ ಗುರುತಿಸುವಿಕೆ ತಂತ್ರಜ್ಞಾನ ಹಾಗೂ ವೈಯಕ್ತಿಕ ಮಾಹಿತಿಯ ಕಳ್ಳತನಕ್ಕೆ ಫೋಟೋಗಳು ಬಳಕೆಯಾಗುವ ಅಪಾಯವಿದೆ. ಆದ್ದರಿಂದ ವೈರಲ್ ಟ್ರೆಂಡ್‌ಗಳಿಗೆ ಮಾರುಹೋಗದೆ, ಮೂಲ ಫೋಟೋಗಳನ್ನು ಎಐ ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡುವ ಮುನ್ನ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

80s AI Photo Trend Cyber Experts Warn Users About Privacy and Data Security Risks Know details

80ರ ದಶಕದ ಫೋಟೋ ಟ್ರೆಂಡ್‌ಗೆ ಮರುಳಾದ ಜನ

ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ '1980ರ ದಶಕದ ಸ್ಟೈಲ್' (80s Vintage Style) ಫೋಟೋಗಳ ಹವಾ ಜೋರಾಗಿದೆ. ಬಳಕೆದಾರರು ತಮ್ಮ ಇಂದಿನ ಫೋಟೋಗಳನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡಿ, 80s ರೆಟ್ರೋ ಹಾಗೂ ವಿಂಟೇಜ್ ಲುಕ್‌ನಲ್ಲಿ ಬದಲಾಯಿಸಿ ಅಪ್‌ಲೋಡ್ ಮಾಡುತ್ತಿದ್ದಾರೆ.

ಹೊರ ಟ್ರೆಂಡ್‌ಗೆ ಮಾರುಹೋದ ಸಿನಿ ತಾರೆಯರು

ಸಿನಿಮಾ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಪ್ರತಿಯೊಬ್ಬರೂ ಈ ಹೊಸ ಟ್ರೆಂಡ್‌ಗೆ ಮನಸೋಲುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಆದರೆ ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ಈ ಸಣ್ಣ ಗಿಮಿಕ್ ನಿಮ್ಮನ್ನು ದೊಡ್ಡ ಅಪಾಯಕ್ಕೆ ಸಿಲುಕಿಸಬಹುದು ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ

ಥರ್ಡ್‌ಪಾರ್ಟಿ ಆ್ಯಪ್‌ಗಳಿಂದ ಆಗುವ ಅನಾಹುತಗಳು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಇಂತಹ ಉಚಿತ ಅಥವಾ ಥರ್ಡ್‌ಪಾರ್ಟಿ ಎಐ ಆ್ಯಪ್‌ಗಳು ಬಳಕೆದಾರರಿಂದ 'ಫೇಸ್ ಡೇಟಾ' ಅಂದರೆ ಮುಖದ ಸ್ಪಷ್ಟ ಚಿತ್ರಣ ಮತ್ತು ವಿವರಗಳನ್ನು ಸಂಗ್ರಹಿಸುತ್ತವೆ. ನೀವು ಅಪ್‌ಲೋಡ್ ಮಾಡುವ ಪ್ರತಿಯೊಂದು ಮೂಲ ಫೋಟೋವೂ ಆ್ಯಪ್‌ನ ಸರ್ವರ್‌ಗಳಲ್ಲಿ ಸಂಗ್ರಹವಾಗುತ್ತವೆ.

ಇಂತಹ ಉಚಿತ ಸೇವೆ ನೀಡುವ ಬಹುತೇಕ ಆ್ಯಪ್‌ಗಳು ಸೂಕ್ತ ಸೈಬರ್ ಭದ್ರತಾ ಮಾನದಂಡಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ಫೋಟೋಗಳು ಹಾಗೂ ವೈಯಕ್ತಿಕ ವಿವರಗಳು ಸೈಬರ್ ಅಪರಾಧಿಗಳ ಕೈಗೆ ಸುಲಭವಾಗಿ ತಲುಪುವ ಸಾಧ್ಯತೆ ಇರುತ್ತದೆ.

ಹೀಗೆ ಸಂಗ್ರಹವಾಗುವ ಮುಖದ ಮಾಹಿತಿಯನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ 'ಡೀಪ್‌ಫೇಕ್' ವಿಡಿಯೋಗಳು ಅಥವಾ ಫೋಟೋಗಳನ್ನು ಸೃಷ್ಟಿಸುವ ಅಪಾಯವಿರುತ್ತದೆ. ಅಂದರೆ, ನಿಮ್ಮ ಮುಖವನ್ನು ಬಳಸಿ ಬೇರೊಬ್ಬರ ದೇಹಕ್ಕೆ ಜೋಡಿಸಿ ಅಶ್ಲೀಲ ಅಥವಾ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ವೈಯಕ್ತಿಕ ಮಾಹಿತಿ ಸೋರಿಕೆ ಸಾಧ್ಯತೆ

ಪ್ರಸ್ತುತ ದಿನಗಳಲ್ಲಿ ಬ್ಯಾಂಕಿಂಗ್, ಸ್ಮಾರ್ಟ್‌ಫೋನ್ ಅನ್‌ಲಾಕ್ ಹಾಗೂ ಪ್ರಮುಖ ಆನ್‌ಲೈನ್ ಸೇವೆಗಳಿಗೆ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಭದ್ರತೆಯಾಗಿ ಬಳಸಲಾಗುತ್ತಿದೆ. ನಿಮ್ಮ ಉನ್ನತ ಗುಣಮಟ್ಟದ ಫೋಟೋಗಳು ಥರ್ಡ್-ಪಾರ್ಟಿ ಆ್ಯಪ್‌ಗಳ ಮೂಲಕ ಲಭ್ಯವಾದಾಗ, ಹ್ಯಾಕರ್‌ಗಳು ಇವುಗಳನ್ನು ದುರುಪಯೋಗಪಡಿಸಿಕೊಂಡು ನಿಮ್ಮ ಡಿಜಿಟಲ್ ಗುರುತನ್ನು ಕದಿಯಬಹುದು. ಇದು ನಿಮ್ಮ ಬ್ಯಾಂಕ್ ಖಾತೆಗಳು ಹಾಗೂ ವೈಯಕ್ತಿಕ ಮಾಹಿತಿ ಸೋರಿಕೆಗೂ ದಾರಿ ಮಾಡಿಕೊಡುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.

ಸೈಬರ್ ತಜ್ಞರಿಂದ ಮಹತ್ವದ ಸಲಹೆಗಳು

* ಯಾವುದೇ ಆ್ಯಪ್ ಡೌನ್‌ಲೋಡ್ ಮಾಡುವ ಮುನ್ನ ಅಥವಾ ಫೋಟೋ ಅಪ್‌ಲೋಡ್ ಮಾಡುವ ಮುನ್ನ ಅದರ 'ಟರ್ಮ್ಸ್ ಅಂಡ್ ಕಂಡಿಷನ್ಸ್' ಹಾಗೂ 'ಪ್ರೈವಸಿ ಪಾಲಿಸಿ'ಯನ್ನು ಕಡ್ಡಾಯವಾಗಿ ಪರಿಶೀಲಿಸಿ. ಆ್ಯಪ್ ನಿಮ್ಮ ಫೋಟೋಗಳನ್ನು ಸರ್ವರ್‌ನಲ್ಲಿ ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ತಿಳಿಯಿರಿ.

* ಆ್ಯಪ್‌ಗಳು ನಿಮ್ಮ ಫೋನ್‌ನ ಗ್ಯಾಲರಿ, ಕ್ಯಾಮೆರಾ ಅಥವಾ ಕಾಂಟ್ಯಾಕ್ಟ್‌ಗಳಿಗೆ ಪ್ರವೇಶ ಕೋರಿದಾಗ ಎಚ್ಚರಿಕೆಯಿಂದ ಅನುಮತಿ ನೀಡಿ.

* ಪ್ಲೇಸ್ಟೋರ್ ಅಥವಾ ಆಪ್‌ಸ್ಟೋರ್‌ನಲ್ಲಿ ವಿಶ್ವಾಸಾರ್ಹವಲ್ಲದ, ಅನಧಿಕೃತ ಆ್ಯಪ್‌ಗಳಿಗೆ ನಿಮ್ಮ ಫೋಟೋಗಳನ್ನು ನೀಡಬೇಡಿ.

* ಆದಷ್ಟು ನಿಮ್ಮ ಮುಖ ಅತ್ಯಂತ ಸ್ಪಷ್ಟವಾಗಿ ಕಾಣುವ ಅಥವಾ ಹತ್ತಿರದಿಂದ ತೆಗೆದ ಹೆಚ್‌ಡಿ ಫೋಟೋಗಳನ್ನು ಎಐ ಆ್ಯಪ್‌ಗಳಿಗೆ ಅಪ್‌ಲೋಡ್ ಮಾಡದಿರುವುದು ಸೂಕ್ತ.

ಯಾವುದೇ ಒಂದು ವೈರಲ್ ಟ್ರೆಂಡ್ ಬಂದಾಗ ತಾತ್ಕಾಲಿಕ ಮೋಜಿಗಾಗಿ ನಮ್ಮ ವೈಯಕ್ತಿಕ ಭದ್ರತೆಯನ್ನು ಒತ್ತೆಯಿಡುವುದು ಬುದ್ಧಿವಂತಿಕೆಯಲ್ಲ. ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳ ಹಿಂದಿರುವ ಸೈಬರ್ ಅಪಾಯಗಳನ್ನು ಅರ್ಥಮಾಡಿಕೊಂಡು ಜಾಗರೂಕರಾಗಿರುವುದು ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಗತ್ಯವಾಗಿದೆ ಎಂದು ಹೇಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+