ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆಹಾರ, ಪೆಟ್ರೋಲ್, ಡೀಸೆಲ್ ದುಬಾರಿ: ಚಿಲ್ಲರೇ ಹಣದುಬ್ಬರ ಶೇ.7.79ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಮೇ 13: ಭಾರತದಲ್ಲಿ ಆಹಾರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಿಲ್ಲರೇ ಹಣದುಬ್ಬರದ ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ ಶೇ.7.79ಕ್ಕೆ ಏರಿಕೆಯಾಗಿದ್ದು, 8 ವರ್ಷಗಳ ಗರಿಷ್ಠ ದಾಖಲೆಯ ಹೆಚ್ಚಳವಾಗಿದೆ.

ದೇಶದಲ್ಲಿನ ಚಿಲ್ಲರೇ ಹಣದುಬ್ಬರದಿಂದ ಮುಂದಿನ ತಿಂಗಳ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಸುತ್ತಿನ ಬಡ್ಡಿದರ ಹೆಚ್ಚಳಕ್ಕೆ ಪ್ರೇರೇಪಿಸಿದಂತಾಗಿದೆ. ಏರುತ್ತಿರುವ ಹಣದುಬ್ಬರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಆರ್‌ಬಿಐ, ಕಳೆದ ವಾರ ರೆಪೊ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಶೇಕಡಾ 4.40 ಕ್ಕೆ ಏರಿಸಿತ್ತು.

ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಸರಕುಗಳ ಬೆಲೆಗಳ ಮೇಲೆ ಪ್ರಭಾವ ಬೀರಿದ ಕಾರಣ ಹಣದುಬ್ಬರವು ಸತತವಾಗಿ ನಾಲ್ಕು ತಿಂಗಳ ಕಾಲ ರಿಸರ್ವ್ ಬ್ಯಾಂಕ್ ಸೌಕರ್ಯ ವಲಯದಲ್ಲಿ ಶೇ.6ಕ್ಕಿಂತ ಹೆಚ್ಚಾಗಿದೆ. ಇಂಧನ ಬೆಲೆಗಳ ಏರಿಕೆಗೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಿನಲ್ಲಿ ಪಂಚರಾಜ್ಯ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರವು ಕಾದು ನೋಡುವ ತಂತ್ರವನ್ನು ಅನುಸರಿಸಿತು. ತದನಂತರ ಹಣದುಬ್ಬರ ಪ್ರಮಾಣದಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು. ಮತ್ತೊಂದೆಡೆ, ಫೆಬ್ರವರಿ ಅಂತ್ಯದಲ್ಲಿ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳು ಸಹ ಹೆಚ್ಚಾಗಿತ್ತು.

8-Year Record: India’s Retail Inflation Surges To High Of 7.79% In April as Food, Fuel Prices Spike

ಸರ್ಕಾರದ ಅಂಕಿಅಂಶಗಳ ಪ್ರಕಾರ, ಕೈಗಾರಿಕಾ ಉತ್ಪಾದನೆಯು ಮಾರ್ಚ್‌ನಲ್ಲಿ ವರ್ಷಕ್ಕೆ ಶೇ.1.9ರಷ್ಟು ನೀರಸವಾಗಿ ಬೆಳೆದಿದೆ, ಪ್ರತಿಕೂಲವಾದ ಮೂಲ ಪರಿಣಾಮ ಮತ್ತು ಬೆಲೆ ಏರಿಕೆಯಿಂದ ಕೆಳಗೆ ಎಳೆಯಲ್ಪಟ್ಟಿದೆ. ಫೆಬ್ರವರಿಯಲ್ಲಿ ಕೈಗಾರಿಕಾ ಉತ್ಪಾದನೆಯು 1.7ರಷ್ಟು ಬೆಳವಣಿಗೆ ಕಂಡಿದೆ. ಆದಾಗ್ಯೂ, ಕಳೆದ ವರ್ಷ ಮಾರ್ಚ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ.24.2ರಷ್ಟು ಏರಿಕೆಯಾಗಿತ್ತು. ಚಿಲ್ಲರೆ ಹಣದುಬ್ಬರವು ಸತತ ನಾಲ್ಕನೇ ತಿಂಗಳು ಕೇಂದ್ರ ಬ್ಯಾಂಕ್‌ನ ಸಹಿಷ್ಣುತೆಯ ಮಿತಿಗಿಂತ ಹೆಚ್ಚಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತೋರಿಸಿವೆ.

ವಾರ್ಷಿಕ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಶೇ.2 ರಿಂದ ಶೇ.6ರ ಗುರಿಯ ಮೇಲಿನ ಮಿತಿಗಿಂತ ಹೆಚ್ಚಿರುವ ಶೇ.7.50 ಅನ್ನು ಮುಟ್ಟಬಹುದು. ಮಾರ್ಚ್‌ನಲ್ಲಿ ಶೇ.6.95ಕ್ಕಿಂತ ಹೆಚ್ಚಿರಬಹುದು ಎಂದು ವಿಶ್ಲೇಷಕರು ಮೊದಲೇ ಊಹಿಸಿದ್ದರು.

ಏಪ್ರಿಲ್‌ನಲ್ಲಿ ಆಹಾರ ಮಾರುಕಟ್ಟೆಯಲ್ಲಿ ಹಣದುಬ್ಬರವು ಶೇಕಡಾ 8.38ಕ್ಕೆ ಏರಿದೆ. ಹಿಂದಿನ ತಿಂಗಳಲ್ಲಿ ಶೇ.7.68 ರಿಂದ ಮತ್ತು ಹಿಂದಿನ ವರ್ಷದಲ್ಲಿ ಶೇ.1.96 ರಷ್ಟಿತ್ತು ಎಂದು ಗುರುವಾರ ರಾಷ್ಟ್ರೀಯ ಅಂಕಿ-ಅಂಶ ಕಚೇರಿ ಬಿಡುಗಡೆ ಮಾಡಿದೆ.

8-Year Record: India’s Retail Inflation Surges To High Of 7.79% In April as Food, Fuel Prices Spike

ಚಿಲ್ಲರೆ ಹಣದುಬ್ಬರದ ವಲಯದಲ್ಲಿ 'ಇಂಧನ ಮತ್ತು ಬೆಳಕು' ವಿಭಾಗದ ಬೆಲೆ ಏರಿಕೆ ದರವು ಹಿಂದಿನ ತಿಂಗಳಿಗಿಂತ ಶೇ. 7.52ಕ್ಕೆ ಹೆಚ್ಚಳವಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಶೇಕಡಾ 10.80ಕ್ಕೆ ಅದು ತ್ವರಿತಗೊಂಡಿದೆ.

ಉಕ್ರೇನ್ ವಿಶ್ವದ ಪ್ರಮುಖ ಸೂರ್ಯಕಾಂತಿ ಎಣ್ಣೆ ಉತ್ಪಾದಕರಲ್ಲಿ ಒಂದಾಗಿದೆ. ಅದರಲ್ಲಿ ಭಾರತವು ಪ್ರಮುಖ ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ, ಹಣದುಬ್ಬರವು ತಿಂಗಳ ಅವಧಿಯಲ್ಲಿ ಶೇ.17.28ರಷ್ಟು ಹೆಚ್ಚಳವಾಗಲಿದೆ.

ಇದಲ್ಲದೆ, ಉಕ್ರೇನ್ ಭಾರತಕ್ಕೆ ರಸಗೊಬ್ಬರದ ಪ್ರಮುಖ ಪೂರೈಕೆದಾರ. ಮಾರ್ಚ್‌ನಲ್ಲಿ ಶೇಕಡಾ 11.64 ರಷ್ಟಿದ್ದ ತರಕಾರಿಗಳು ಈ ತಿಂಗಳಿನಲ್ಲಿ ಶೇಕಡಾ 15.41ರ ಹಣದುಬ್ಬರ ಮಟ್ಟಕ್ಕೆ ತಲುಪಿರುವುದನ್ನು ಅಂಕಿಅಂಶಗಳು ತೋರಿಸಿವೆ.

ಗಮನಾರ್ಹವಾಗಿ ಕಳೆದ ಜನವರಿ 2022 ರಿಂದ ಚಿಲ್ಲರೆ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚಿದೆ. ಹಣದುಬ್ಬರವು ಎರಡೂ ಕಡೆಗಳಲ್ಲಿ ಶೇ.2 ರ ಅಂತರದಲ್ಲಿ ಶೇ.4 ರಷ್ಟಿದೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ವರದಿಗಳ ಪ್ರಕಾರ, ಮುಂದಿನ ತಿಂಗಳು ನಡೆಯಲಿರುವ MPC ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್ ಹಣದುಬ್ಬರ ಪ್ರಕ್ಷೇಪಣಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಈ ತಿಂಗಳ ಆರಂಭದಲ್ಲಿ, ಹೆಚ್ಚುತ್ತಿರುವ ಹಣದುಬ್ಬರವನ್ನು ಪಳಗಿಸುವ ಉದ್ದೇಶದಿಂದ MPC ಪ್ರಮುಖ ನೀತಿ ದರವನ್ನು (ರೆಪೊ) 40 ಮೂಲಾಂಶಗಳಿಂದ ಹೆಚ್ಚಿಸಿತು. ಇದು ಆಗಸ್ಟ್ 2018 ರ ನಂತರ ಮೊದಲ ದರ ಏರಿಕೆಯಾಗಿದೆ.

English summary
8-Year Record: India’s Retail Inflation Surges To High Of 7.79% In April as Food, Fuel Prices Spike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X