Breaking: ಅಮೃತಸರದಿಂದ ಕತ್ರಾಕ್ಕೆ ತೆರಳುತ್ತಿದ್ದ ಬಸ್ ಕಂದರಕ್ಕೆ ಬಿದ್ದು ಎಂಟು ಸಾವು
ಶ್ರೀನಗರ, ಮೇ. 30: ಜಮ್ಮು ಮತ್ತು ಕಾಶ್ಮೀರದಲ್ಲಿ ವೈಷ್ಣೋ ದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಸೇತುವೆಯಿಂದ ಆಯತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನು 16 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾದ ಗಾಯಾಳಿಗಳಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಬಸ್ ಅಮೃತಸರದಿಂದ ತೆರಳುತ್ತಿದ್ದಾಗ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಜ್ಜರ್ ಕೋಟ್ಲಿ ಪ್ರದೇಶದ ಬಳಿ ಈ ಘಟನೆ ಸಂಭವಿಸಿದ್ದು, ರಿಯಾಸಿ ಜಿಲ್ಲೆಯ ಕತ್ರಾದಿಂದ ಸುಮಾರು 15 ಕಿ.ಮೀ. ದೂರದದಲ್ಲಿದೆ. ಕತ್ರಾ ವೈಷ್ಣೋ ದೇವಿ ಯಾತ್ರಾರ್ಥಿಗಳಿಗೆ ಮೂಲ ಶಿಬಿರವಾಗಿದೆ.
#WATCH | J&K | A bus from Amritsar to Katra fell into a gorge in Jammu. As per Jammu DC, 7 peopled died and 4 critically injured; 12 others also sustained injuries.
— ANI (@ANI) May 30, 2023
Visuals from the spot. pic.twitter.com/iSse58ovos

"ಎಂಟು ಜನರು ಮಾರಣಾಂತಿಕವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 20 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೊಹ್ಲಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.












Click it and Unblock the Notifications