7th Pay Commission: ಸಿಹಿ ಸುದ್ದಿ: ಬುಧವಾರ ಕೇಂದ್ರ ಸಂಚಿವ ಸಂಪುಟ ಸಭೆ, ಡಿಎ ಹೆಚ್ಚಳ ಬಗ್ಗೆ ತೀರ್ಮಾನ, ಅಧಿಕೃತ ಮಾಹಿತಿ
ನವದೆಹಲಿ, ಮಾರ್ಚ್ 14: ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಏಳನೇ ವೇತನ ಆಯೋಗದಡಿ ತುಟ್ಟಿ ಭತ್ಯೆ (DA) ಹೆಚ್ಚಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬುಧವಾರ ಅಧಿಕೃತ ಮಾಹಿತಿ ಪ್ರಕಟಗೊಳ್ಳಲಿದೆ.
7ನೇ ವೇತನ ಆಯೋಗದಡಿ ತುಟ್ಟಿ ಭತ್ಯೆ (ಡಿಎ) ಏರಿಕೆಯ ಜನವರಿ ತಿಂಗಳ ಪರಿಷ್ಕರಣೆ ಕುರಿತು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಇದೇ ಮಾರ್ಚ್ 15 ರಂದು ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಅದರಲ್ಲಿ ಬಗ್ಗೆ ನಿರ್ಧರಿಸಲಿದೆ. ಆ ಬಳಿಕವೇ ಒಂದಷ್ಟು ಅಧಿಕೃತ ಮಾಹಿತಿಯು ಬಹಿರಂಗಗೊಳ್ಳಲಿವೆ ಎಂದು ತಿಳಿದು ಬಂದಿದೆ.

ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ದ ಸಂಖ್ಯೆ ಕಳೆದ ಜನವರಿಗೆ (2023) 132.8ಗೆ ಪಾಯಿಂಟ್ಸ್ ಏರಿಕೆ ಆಗಿದೆ. ಅದಾಗಿ ಒಂದು ತಿಂಗಳ ಅಂತರದಲ್ಲಿ ಆದ ಬದಲಾವಣೆಯಿಂದ ಎಐಸಿಪಿಐ 0.38 ಪ್ರತಿಶತದಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಇದೆಲ್ಲದರೆ ಜೊತೆಗೆ ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಸಂಖ್ಯೆಗಳು ನಿರೀಕ್ಷಿತ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನು ಸೂಚಿಸುತ್ತದೆ.
ಸದ್ಯ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯಾದ ಡಿಎ ಏರಿಕೆ ಸಮಸ್ಯೆಗೆ ಪರಿಹಾರ ಸಿಗಿದ್ದರೆ ಮತ್ತೆ ಇದೇ ತಿಂಗಳ ಮಾರ್ಚ್ 31 ಫೆಬ್ರವರಿ ತಿಂಗಳಿಗೆ ಸರಿಹೊಂದುವಂತೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI)ದ ಸಂಖ್ಯೆ ಪ್ರಕಟಗೊಳ್ಳಲಿದೆ ಎಂದ ವರದಿಗಳು ತಿಳಿಸಿವೆ.
ತುಟ್ಟಿಭತ್ಯೆ ಶೇ.3ರಷ್ಟು ಏರಿಕೆಯಾಗಲಿದೆ ಎಂದು ವರದಿ ಆಗಿದೆ. ಅದರಂತೆ ಹೆಚ್ಚಳವಾದ್ಲಲಿ ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 38 ರಿಂದ ಶೇಕಡಾ 41ಕ್ಕೆ ಹೆಚ್ಚಾಗುತ್ತದೆ. ಈ ಕುರಿತು ಅಂಶಗಳು ಮುಂದಿವೆ.

ಡಿಎ, ಮೂಲ ವೇತನ ಹೆಚ್ಚಳದ ಮಾಹಿತಿ
ಸರ್ಕಾರವು ಡಿಎ ಅನ್ನು 3% ರಿಂದ 41% ರವರೆಗೆ ಹೆಚ್ಚಿಸಿದರೆ ಮೂಲ ಬೇಸಿಕ ವೇತನದ ಆಧಾರದಡಿ ತುಟ್ಟಿ ಭತ್ಯೆ ಹೆಚ್ಚಾಗುತ್ತದೆ. ಉದಾಹರಣೆಗೆ ನೌಕರರೊಬ್ಬರ ಕನಿಷ್ಠ ರೂ. 18,000 ಎಂದಾದರೆ ತುಟ್ಟಿಭತ್ಯೆ (ಮಾಸಿಕ 7,380ರೂ.) ಹೆಚ್ಚಾಗುತ್ತದೆ. ಶೇಕಡಾ 38ರಷ್ಟು ಡಿಎ ಹೆಚ್ಚಾದರೆ ಮಾಸಿಕ 6,840 ರೂ, ಡಿಎಯಲ್ಲಿ 41% ಹೆಚ್ಚಳವಾದರೆ ಮಾಸಿಕ ವೇತನ 23,329 ರೂ. ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications