ವಿಕಲ ಮಹಿಳೆಯರ ಮಕ್ಕಳ ಪಾಲನೆಯ ಭತ್ಯೆ ದುಪ್ಪಟ್ಟು: ಕೇಂದ್ರ
ಅಂಗವಿಲಕ ಮಹಿಳೆಯರ ಮಕ್ಕಳ ಪಾಲನೆಗೆ ನೀಡಲಾಗುತ್ತಿದ್ದ ಭತ್ಯೆ ದುಪ್ಪಟ್ಟು. ಈ ಮೊದಲು ಪ್ರತಿ ಮಗುವಿಗೆ ಸಿಗುತ್ತಿದ್ದ 1500 ರು. ಮಾಸಿಕ ಭತ್ಯೆ, 3 ಸಾವಿರ ರು.ಗಳಿಗೆ ಏರಿಕೆ.
ನವದೆಹಲಿ, ಆಗಸ್ಟ್ 19: ಅಂಗವಿಕಲ ಮಹಿಳೆಯರ ಮಕ್ಕಳ ಪಾಲನೆಗೆ ನೀಡಲಾಗುವ ಭತ್ಯೆಯನ್ನು 7ನೇ ವೇತನ ಆಯೋಗದ ಶಿಫಾರಸಿನಂತೆ ದುಪ್ಪಟ್ಟು ಹೆಚ್ಚಿಸಲಾಗಿದೆ. ಸದ್ಯಕ್ಕೆ ಮಾಸಿಕ 1500 ರು. ಸಿಗುತ್ತಿದ್ದ ಈ ಅನುದಾನ 7ನೇ ವೇತನ ಆಯೋಗದಲ್ಲಿ 3000 ರು. ಏರಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಹೇಳಿದೆ.
ಇದರ ಜತೆಯಲ್ಲೇ, ಅಂಗವೈಕಲ್ಯದ ಬಗ್ಗೆಯೂ ವ್ಯಾಖ್ಯಾನ ಕೊಟ್ಟಿರುವ ಡಿಒಪಿಟಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಬಿಡುಗಡೆ ಮಾಡಿರುವ 2001ರ ಜೂನ್ 1ರ ಅಧಿಸೂಚನೆಯಂತೆ (ಸಂಖ್ಯೆ 1 16-18/97- ಎನ್ಐಎಲ್) ಶೇ. 40ರಷ್ಟು ಅಂಗವೈಕಲ್ಯ ಇದ್ದವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಅಲ್ಲದೆ, ಕಾಲಕ್ಕೆ ತಕ್ಕಂತೆ ಕೇಂದ್ರ ಸರ್ಕಾರದಿಂದ ವೇತನಗಳಲ್ಲಿ ಏರಿಕೆಯಾಗುವಂತೆ ತುಟ್ಟಿ ಭತ್ಯೆಯಂತೆ ಮಕ್ಕಳ ಪಾಲನೆಗೆ ನೀಡಲಾಗುವ ಅನುದಾನದಲ್ಲೂ ಏರಿಕೆ ಮಾಡಲಾಗುತ್ತದೆ ಎಂದು ಡಿಒಪಿಟಿ ತಿಳಿಸಿದೆ.












Click it and Unblock the Notifications