ದೇಶದಲ್ಲಿ 781 ಓಮಿಕ್ರಾನ್‌: ಕೋವಿಡ್‌ ಪ್ರಕರಣಗಳ ಸಂಖ್ಯೆ ಶೇ.44 ಏರಿಕೆ

ನವದೆಹಲಿ, ಡಿಸೆಂಬರ್‌ 29: ಹೆಚ್ಚು ಸಾಂಕ್ರಾಮಿಕವಾದ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ದೇಶದಲ್ಲಿ ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 781 ಕ್ಕೆ ಏರಿಕೆ ಕಂಡಿದೆ. ಈ ನಡುವೆ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಸಂಖ್ಯೆಯಲ್ಲೂ ಕೂಡಾ ಏರಿಕೆ ಕಂಡು ಬಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಈಗ ವಿಶ್ವದ ಹಲವಾರು ದೇಶಗಳಲ್ಲಿ ಹರಡಿದೆ. ಭಾರತ ದೇಶದ ಒಟ್ಟು 21 ರಾಜ್ಯಗಳಲ್ಲಿ ಈ ಹೊಸ ರೂಪಾಂತರವು ಕಾಣಿಸಿಕೊಂಡಿದೆ. ಇನ್ನು ಈ ನಡುವೆ ದೇಶದಲ್ಲಿ ಅಧಿಕವಾಗಿ ದೆಹಲಿಯಲ್ಲಿ ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗಿದೆ. ದೇಶದಲ್ಲಿ ಈವರೆಗೆ ದಾಖಲಾದ ಒಟ್ಟು 781 ಓಮಿಕ್ರಾನ್ ಪ್ರಕರಣಗಳ ಪೈಕಿ 238 ಪ್ರಕರಣಗಳು ದೆಹಲಿಯಲ್ಲೇ ದಾಖಲು ಆಗಿದೆ. ಇನ್ನು ಮಹಾರಾಷ್ಟ್ರದಲ್ಲಿ 167 ಓಮಿಕ್ರಾನ್‌ ಪ್ರಕರಣಗಳು ದಾಖಲು ಆಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,195 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲು ಆಗಿದೆ. ನಿನ್ನೆ ದೇಶದಲ್ಲಿ 6,358 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲು ಆಗಿದ್ದು, ಇಂದು 9,195 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲು ಆಗುವ ಮೂಲಕ ದೇಶದಲ್ಲಿ ನಿನ್ನೆಯಿಂದ ಇಂದಿಗೆ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆಯು ಶೇಕಡ 44 ಏರಿಕೆ ಆಗಿದೆ.

 ದೇಶದಲ್ಲಿ ಕೋವಿಡ್‌ ಲಸಿಕೆ

ದೇಶದಲ್ಲಿ ಕೋವಿಡ್‌ ಲಸಿಕೆ

ದೇಶದಲ್ಲಿ ಒಟ್ಟು 143 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದು ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟಕ್ಕೆ ಅತೀ ದೊಡ್ಡ ಮೈಲಿಗಲ್ಲು ಆಗಿದೆ. ಇನ್ನು ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣವು 98.40 ಶೇಕಡ ಆಗಿದೆ. ಇದು 2020 ಮಾರ್ಚ್‌ಗಿಂತ ತೀವ್ರ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ ಸರಿಸುಮಾರು 7,347 ಮಂದಿ ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯು 3,42,51,292 ಕ್ಕೆ ಏರಿಕೆ ಕಂಡಿದೆ.

 ಶೇಕಡ ಒಂದಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ

ಶೇಕಡ ಒಂದಕ್ಕಿಂತ ಕಡಿಮೆ ಸಕ್ರಿಯ ಪ್ರಕರಣ

ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆ ಆಗುತ್ತಿರುವ ನಡುವೆಯೇ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಕೆ ಆಗುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣವು ಅಧಿಕವಾಗುತ್ತಿದೆ. ಪ್ರಸ್ತುತ ಶೇಕಡ ಒಂದಕ್ಕಿಂತ ಕಡಿಮೆ ಸಕ್ರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಇದೆ. ಅಂದರೆ ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣವು ಶೇಕಡ 0.22 ಆಗಿದೆ. ಇದು ಕಳೆದ 2020 ಮಾರ್ಚ್‌ಗಿಂತ ಅತೀ ಕಡಿಮೆ ಸಕ್ರಿಯ ಪ್ರಕರಣವಾಗಿದೆ.

 ಪಾಸಿಟಿವಿಟಿ ದರ ಇಳಿಕೆ

ಪಾಸಿಟಿವಿಟಿ ದರ ಇಳಿಕೆ

ದೇಶದಲ್ಲಿ ಪ್ರಸ್ತುತ ಸಕ್ರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆಯು 77,002 ಆಗಿದೆ. ಈ ವಾರದ ಪಾಸಿಟಿವಿಟಿ ಪ್ರಮಾಣವು 0.68 ಆಗಿದೆ. ಕಳೆದ 45 ದಿನಗಳಿಂದ ಪಾಸಿಟಿವಿಟಿ ಪ್ರಮಾಣವು ಶೇಕಡ 1 ಕ್ಕಿಂತ ಕಡಿಮೆ ಆಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇಕಡ 0.79 ಆಗಿದೆ. ಕಳೆದ 86 ದಿನಗಳಿಂದ ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇಕಡ ಎರಡಕ್ಕಿಂತ ಕಡಿಮೆ ಆಗಿದೆ.

 ದೆಹಲಿ, ಮುಂಬೈನಲ್ಲಿ ಕೋವಿಡ್‌ ಏರಿಕೆ

ದೆಹಲಿ, ಮುಂಬೈನಲ್ಲಿ ಕೋವಿಡ್‌ ಏರಿಕೆ

ಮುಂಬೈ ಮತ್ತು ನವದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮುಂಬೈನಲ್ಲಿ ಶೇ 70 ಮತ್ತು ದೆಹಲಿಯಲ್ಲಿ ಶೇ 50ರಷ್ಟು ಏರಿಕೆ ದಾಖಲಾಗಿದೆ. ಮುಂಬೈನಲ್ಲಿ ಸೋಮವಾರ 809 ಹೊಸ ಪ್ರಕರಣಗಳು ದಾಖಲಾಗಿದ್ದವು. ಭಾನುವಾರ 809 ಪ್ರಕರಣ ದಾಖಲಾಗಿತ್ತು. ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕಣಗಳ ಸಂಖ್ಯೆ ಶೇ 50ರಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+