70ನೇ ಸ್ವಾತಂತ್ರ್ಯೋತ್ಸವ : ಮೋದಿ ಭಾಷಣದ ಮುಖ್ಯಾಂಶಗಳು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 15 : 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಅಭಿವೃದ್ಧಿಯ ಮಂತ್ರ ಜಪಿಸಿದರು. [ಚಿತ್ರಗಳು :70ನೇ ಸ್ವಾತಂತ್ರ್ಯೋತ್ಸವ]

ಸೋಮವಾರ ಬೆಳಗ್ಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಬಳಿಕ ಮಾತನಾಡಿದ ಮೋದಿ ಅವರು, 'ಹಣದುಬ್ಬರ ಹೆಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಾವು ಕಡಿವಾಣ ಹಾಕುತ್ತೇವೆ' ಎಂದು ಭರವಸೆ ನೀಡಿದರು.

modi

'ಭಾರತ ದೇಶಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ನಮಗೆ ಸ್ವಾತಂತ್ರ್ಯ ತಂದು ಕೊಡಲು ಹಲವರು ಶ್ರಮಿಸಿದ್ದಾರೆ. ಏಕತೆಯಿಂದ ನಾವೆಲ್ಲರೂ ಮುಂದೆ ಸಾಗೋಣ 'Swaraj (Self-Rule) ಅನ್ನು Su-Raj (Good rule) ಉತ್ತಮ ಆಡಳಿತವನ್ನಾಗಿ ಬದಲಾವಣೆ ಮಾಡೋಣ. ಆಗ ದೇಶ ಅಭಿವೃದ್ಧಿಯಾಗುತ್ತದೆ' ಎಂದು ಹೇಳಿದರು.

ಮೋದಿ ಭಾಷಣದ ಮುಖ್ಯಾಂಶಗಳು

* 'ಮೊದಲು ಉತ್ತಮ ಆಸ್ಪತ್ರೆಗಳಿಗೆ ಹೋಗಲು ಕಾಯಬೇಕಾಗಿತ್ತು. ಈಗ ಆನ್‌ಲೈನ್ ನೋಂದಣಿ ಆರಂಭವಾಗಿದೆ. 40 ದಪಡ್ಡ ಆಸ್ಪತ್ರೆಗಳಲ್ಲಿ ಇದನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ರೈಲ್ವೆ ಟಿಕೆಟ್ ಬುಕ್ ಮಾಡಲು ಜನರು ಪರದಾಡುತ್ತಿದ್ದರು. ಇಂದು ಒಂದು ಸೆಕೆಂಡ್‌ನಲ್ಲಿ 15 ಸಾವಿರ ಟಿಕೆಟ್ ಬುಕ್ ಮಾಡಬಹುದಾಗಿದೆ'

* 'ಆಡಳಿತದಲ್ಲಿ ಪಾರದರ್ಶಕರೆ ಅತೀ ಮುಖ್ಯವಾದದ್ದು. ಮೊದಲು ಆದಾಯ ತೆರಿಗೆ ರಿಟನ್ ಪಡೆಯಲು ಹಲವು ದಿನ ಕಾಯಬೇಕಾಗಿತ್ತು. ಈಗ ಮೂರು ವಾರದೊಳದೆ ಅದು ನಿಮ್ಮ ಕೈ ಸೇರಲಿದೆ. ಪಾಸ್‌ಪೋರ್ಟ್ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಾಗಿತ್ತು. ಈಗ ಕೆಲವೇ ವಾರಗಳಲ್ಲಿ ಪಾಸ್‌ಪೋರ್ಟ್ ಬರುತ್ತದೆ'

* 'ಕೈಗಾರಿಕೆಗಳ ಅಭಿವೃದ್ಧಿಗೆ ನಾವು ಗಮನ ನೀಡಿದ್ದೇವೆ. ಹಿಂದೆ ಕಂಪನಿ ಆರಂಭಿಸಲು ಉದ್ಯಮಿಗಳಿಗೆ ತಿಂಗಳುಗಟ್ಟಲೇ ಸಮಯ ಬೇಕಾಗುತ್ತಿತ್ತು. ಈಗ 24 ಗಂಟೆಗಳಲ್ಲಿ ಅನುಮತಿ ಸಿಗುತ್ತಿದೆ'

* 2014ರಲ್ಲಿ 18 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಸಾವಿರ ದಿನದಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ತೀರ್ಮಾನಿಸಿದೆವು. ಇಂದು 10 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

* 77 ಕೋಟಿ ಎಲ್‌ಇಡಿ ಬಲ್ಪ್ ವಿತರಣೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಎಲ್‌ಇಡಿ ಬಲ್ಪ್ ಬಳಸುವ ಮೂಲಕ ವಿದ್ಯುತ್ ಉಳಿಸಬೇಕು ಎಂದು ನಾನು ಕರೆ ನೋಡುತ್ತಿದ್ದೇನೆ.

ಮೋದಿ ಭಾಷಣದ ವಿಡಿಯೋ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister of India Narendra Modi addresses the nation from Red Fort, New Delhi on India's 70th Independence Day on August 15, 2016. Here are the highlights.
Please Wait while comments are loading...