Temple Tragedy: ಉತ್ಸವ ವೇಳೆ ದೇವಸ್ಥಾನ ಬೃಹತ್ ಗೋಡೆ ಕುಸಿತ: 7 ಸಾವು, ಹಲವರಿಗೆ ಗಂಭೀರ ಗಾಯ..
ಆಂಧ್ರ ಪ್ರದೇಶ, ಏಪ್ರಿಲ್ 30: ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ಉತ್ಸವದಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ 20 ಅಡಿ ಉದ್ದದ ಬೃಹತ್ ಗುಮ್ಮಟದ ಗೋಡೆ ಕುಸಿದು ಬಿದ್ದ ಪರಿಣಾಮ ಕನಿಷ್ಠ 07 ಮಂದಿ ಮೃತಪಟ್ಟಿದ್ದಾರೆ. ಹಲವಾರು ಜನರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿ ನಡೆದಿದೆ. ಸದ್ಯ ರಕ್ಷಾಣ ಸಿಬ್ಬಂದಿಯಿಂದ ಜನರ ರಕ್ಷಣೆ ಕಾರ್ಯ ನಡೆದಿದೆ.
ವಿಶಾಖಪಟ್ಟಣಂನ ಶ್ರೀ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ಕಾರ್ಯಕ್ರಮ ನಡೆಯತ್ತಿತ್ತು. ಈ ಸಂದರ್ಭದಲ್ಲಿ 20 ಅಡಿ ಉದ್ದದ ಗುಮ್ಮಟ ಕುಸಿದು ಬಿದ್ದಿದಿದೆ. ಸ್ಥಳೀಯರು ಸೇರಿದಂತೆ ಉತ್ಸವಕ್ಕೆ ಬಂದಿದ್ದ ಅನೇಕ ಭಕ್ತರು ರಸ್ತೆಯ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಈ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಜನ ಆತಂಕಗೊಂಡಿದ್ದಾರೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆಂಧ್ರ ಪ್ರದೇಶದ ರಾಜ್ಯ ವಿಪತ್ತು ರಕ್ಷಣಾ ಸಿಬ್ಬಂದಿ (SDRF) ಹಾಗೂ ರಾಷ್ಟ್ರೀಯ ನೈಸರ್ಗಿಕ ರಕ್ಷಣಾ ಸಿಬ್ಬಂದಿ (NDRF) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿಗಳು ಹರೇಂದ್ರ ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಂಧ್ರಪ್ರದೇಶದ ಗೃಹ ಸಚಿವೆ ಮತ್ತು ವಿಪತ್ತು ನಿರ್ವಹಣಾ ಸಚಿವೆ ವಂಗಲಪುಡಿ ಅನಿತಾ ಇಂದು ಬೆಳಗ್ಗೆ ಭೇಟಿ ನೀಡಿದ್ದಾರೆ. ಈ ಘಟನೆ ದುರದೃಷ್ಟಕರ ಘಟನೆ ನಡೆಯಬಾರದಿತ್ತು. ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೃತರ ಕುಟುಂಬಸ್ಥರು ಸ್ಥಳದಲ್ಲಿ ಕಣ್ಣೀರಿಟ್ಟಿದ್ದಾರೆ.
ರಕ್ಷಣಾ ಕಾರ್ಯ ಮುಕ್ತಾಯ: ಎಂಟು ಸಾವು
ರಾಜ್ಯದ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿನಯ್ ಚಾನ್ ಅವರು ಪ್ರತಿಕ್ರಿಯಿಸಿದ್ದು, ಈ ಅವಘಡಕ್ಕೆ ಕೂಡಲೇ ನಾವು ಕಾರಣಗಳನ್ನು ತೀರ್ಮಾನಿಸಲು ಆಗದು. ಪ್ರಾಥಮಿಕವಾಗಿ ಬೆಳಗಿನ ಜಾವ 2.30 ರಿಂದ 3.30 ರ ನಡುವೆ ಘಟನೆ ಸಂಭವಿಸಿದೆ. ಇದರಲ್ಲಿ ಸುಮಾರು ಸುಮಾರು 8 ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಗುಮ್ಮಟದ ಎಲ್ಲಾ ಅವಶೇಷಗಳನ್ನು ತೆರವುಗೊಳಿಸಲಾಗಿದೆ, ರಕ್ಷಣಾ ಕಾರ್ಯ ಮುಕ್ತಾಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
25 ಲಕ್ಷ ರೂಪಾಯಿ ಪರಿಹಾರ ಘೋಷಣೆ
ದೇವಸ್ಥಾನ ಗುಮ್ಮಟ ಕುಸಿದ ಮೃತಪಟ್ಟ ಎಂಟು ಮಂದಿಗೆ ಆಂಧ್ರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಇನ್ನು ಗಾಯಾಳುಗಳಿಗೆ ತಲಾ 03 ಲಕ್ಷ ರೂಪಾಯಿ ಘೋಷಣೆ ಆಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕರು, ರಾಜಕೀಯ ಮುಖಂಡರು ಬಂದು ನಾಗರಿಕರಿಗೆ ಸಾಂತ್ವನ ಹೇಳಿದ್ದಾರೆ.












Click it and Unblock the Notifications