ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕಲ್ಪದಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಆಸ್ತಿ ಹಾಗೂ ಪ್ರಾಣಹಾನಿಯಾಗಿರುವ ವರದಿಯಾಗಿಲ್ಲ
ಬೆಂಗಳೂರು, ಮಾರ್ಚ್ 14:ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕಲ್ಪದಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಆಸ್ತಿ ಹಾಗೂ ಪ್ರಾಣಹಾನಿಯಾಗಿರುವ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 5.9ರಷ್ಟು ಭೂಕಂಪನದ ಪ್ರಮಾಣ ದಾಖಲಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಗರ್ಭ ಅಧ್ಯಯನ ಕೇಂದ್ರ ತಿಳಿಸಿದೆ.
ಭೂಕಂಪನವು ಯಾವುದೇ ಸುನಾಮಿ ಮುನ್ಸೂಚನೆ ನೀಡಿಲ್ಲವಾದರೂ ಇದರ ಬಗ್ಗೆ ಭಾರತ ಸುನಾಮಿ ಮುನ್ಸೂಚನಾ ಕೇಂದ್ರವು ರಾಜ್ಯಗಳಿಗೆ ಹಾಗೂ ನೆರೆಯ ರಾಷ್ಟ್ರಗಳಿಗೆ ಎಚ್ಚರದಿಂದಿರಲು ತಿಳಿಸಿದೆ.

ಜಮ್ಮು-ಕಾಶ್ಮೀರದ ಕತುವಾ ಬಳಿ ಕೂಡಾ3.6ರ ಪ್ರಮಾಣದಲ್ಲಿ ಇಂದು ಮುಂಜಾನೆ 5.48ರಲ್ಲಿ ಲಘು ಭೂಕಂಪನವಾಗಿದೆ.












Click it and Unblock the Notifications