ಈ ವರ್ಷ ದೇಶ ಬಿಡಲಿದ್ದಾರೆ 6,500 ಶ್ರೀಮಂತ ಭಾರತೀಯರು?
ನವದೆಹಲಿ, ಜೂನ್ 14: ಭಾರತವು 2023ರಲ್ಲಿ 6,500 ಶ್ರೀಮಂತ ವ್ಯಕ್ತಿಗಳನ್ನು ಕಳೆದುಕೊಳ್ಳಬಹುದು ಎಂದು ಹೆನ್ಲಿ ಖಾಸಗಿ ಸಂಪತ್ತು ವಲಸೆ (ಎಚ್‌ಎನ್‌ಡಬ್ಲ್ಯುಐ ) 2023ರ ವರದಿ ತಿಳಿಸಿದೆ. ಇದು ವಿಶ್ವಾದ್ಯಂತ ಸಂಪತ್ತು ಮತ್ತು ಹೂಡಿಕೆ ವಲಸೆಯ ಪ್ರವೃತ್ತಿಯನ್ನು ಟ್ರ್ಯಾಕ್ ಮಾಡುತ್ತದೆ.
ಈ ವರ್ಷ ಮಿಲಿಯನೇರ್‌ಗಳು ದೇಶದಿಂದ ಹೊರಹೂಗುವ ವಿಷಯದಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಇದು 13,500 ಶ್ರೀಮಂತ ವ್ಯಕ್ತಿಗಳನ್ನು ಕಳೆದುಕೊಳ್ಳುತ್ತದೆ ಎಂದು ಊಹಿಸಲಾಗಿದೆ. ನಂತರ ಭಾರತವು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ವರದಿಯಲ್ಲಿ ಭಾರತ ಎರಡನೇ ಅತಿ ದೊಡ್ಡ ನಿರ್ಗಮನ ಸಂಖ್ಯೆಗಳನ್ನು ಹೊಂದಿದ್ದರೂ ಕಳೆದ ವರ್ಷ ಮಿಲಿಯನೇರ್‌ಗಳ ಹೊರಹರಿವು 7,500 ಇದು ಈ ವರ್ಷ ಭಾರತದ ಸ್ಥಾನವು ಸುಧಾರಿಸುವ ಸಾಧ್ಯತೆಯಿದೆ.

ನ್ಯೂ ವರ್ಲ್ಡ್ ವೆಲ್ತ್‌ನ ಸಂಶೋಧನಾ ಮುಖ್ಯಸ್ಥರಾದ ಆಂಡ್ರ್ಯೂ ಅಮೊಯಿಲ್ಸ್, ಭಾರತವು ವಲಸೆಯಿಂದ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ಹೊಸ ಮಿಲಿಯನೇರ್‌ಗಳನ್ನು ಉತ್ಪಾದಿಸುವುದರಿಂದ ಈ ಹೊರಹರಿವು ವಿಶೇಷವಾಗಿ ಕಂಡು ಬರಲ್ಲ ಎಂದಿದ್ದಾರೆ. ಹೆನ್ಲಿ ಮತ್ತು ಪಾಲುದಾರರ ಪ್ರಕಾರ, ಮಿಲಿಯನೇರ್‌ಗಳು $1 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಸಂಪತ್ತನ್ನು ಹೊಂದಿರುವ ಜನರಾಗಿದ್ದಾರೆ.
2023 ಮತ್ತು 2024 ರಲ್ಲಿ ಜಾಗತಿಕವಾಗಿ ಸುಮಾರು 1,22,000 ಮತ್ತು 1,28,000 ಮಿಲಿಯನೇರ್‌ಗಳು ವಲಸೆ ಹೋಗುವ ನಿರೀಕ್ಷೆಇದೆ. ಕಳೆದ ದಶಕದಲ್ಲಿ ಮಿಲಿಯನೇರ್ ವಲಸೆಯು ಬೆಳೆದಿದೆ ಎಂದು Henley & Partners ನ CEO ಡಾ. ಜುರ್ಗ್ ಸ್ಟೆಫೆನ್ ಹೇಳಿದ್ದಾರೆ.
ದುಬೈ ಮತ್ತು ಸಿಂಗಾಪುರ ಶ್ರೀಮಂತ ಭಾರತೀಯ ಕುಟುಂಬಗಳಿಗೆ ಆದ್ಯತೆಯ ತಾಣಗಳಾಗಿವೆ. ಭಾರತದ 5ನೇ ನಗರ ಎಂದೂ ಕರೆಯಲ್ಪಡುವ ಸರ್ಕಾರಿ-ಆಡಳಿತದ ಜಾಗತಿಕ ಹೂಡಿಕೆದಾರ ಗೋಲ್ಡನ್ ವೀಸಾ ಕಾರ್ಯಕ್ರಮ, ಅನುಕೂಲಕರ ತೆರಿಗೆ ಪರಿಸರ, ದೃಢವಾದ ವ್ಯಾಪಾರ ಪರಿಸರ ವ್ಯವಸ್ಥೆ ಮತ್ತು ಸುರಕ್ಷಿತ, ಶಾಂತಿಯುತ ವಾತಾವರಣಕ್ಕೆ ವಿಶೇಷವಾಗಿ ಆಕರ್ಷಕವಾಗಿದೆ.
2023ರಲ್ಲಿ 5,200 ಮಿಲಿಯನೇರ್‌ಗಳು ಆಸ್ಟ್ರೇಲಿಯಕ್ಕೆ ವಲಸೆ ಹೋಗಲಿದ್ದಾರೆ ಎಂದು ವರದಿ ಭವಿಷ್ಯ ನುಡಿದಿದೆ. 2022ರಲ್ಲಿ ಮಿಲಿಯನೇರ್‌ಗಳು ದುಬೈಗೆ ವಲಸೆ ಹೋಗಿದ್ದರು. ಈ ವರ್ಷ ಅಲ್ಲಿಗೆ 4,500 ಹೊಸ ಮಿಲಿಯನೇರ್‌ಗಳು ಹೋಗಲಿದ್ದಾರೆ. ಸಿಂಗಾಪುರಕ್ಕೆ ಶ್ರೀಮಂತರ ವಲಸೆಯು 2023ರಲ್ಲಿ 3,200 ಆಗುವ ನಿರೀಕ್ಷೆಯಿದೆ. ಹಾಗೆಯೇ ಅಮೆರಿಕಾಕ್ಕೆ 2,100 ಶ್ರೀಮಂತರು ವಲಸೆ ಹೋಗಲಿದ್ದಾರೆ. ಶ್ರೀಮಂತರು ವಲಸೆ ಹೋಗುವ ಟಾಪ್ 10 ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ ಸ್ವಿಟ್ಜರ್ಲೆಂಡ್, ಕೆನಡಾ, ಗ್ರೀಸ್, ಫ್ರಾನ್ಸ್, ಪೋರ್ಚುಗಲ್ ಮತ್ತು ನ್ಯೂಜಿಲೆಂಡ್ ಆಗಿದೆ.












Click it and Unblock the Notifications