ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸುವ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ಆರೋಗ್ಯ ಸಚಿವಾಲಯ

|
Google Oneindia Kannada News

ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆಯ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ. ನಿತ್ಯವೂ ಸಾವಿರಾರು ಜನರು ಈ ವೈರಸ್‌ನ ದಾಳಿಯಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಇಷ್ಟಲ್ಲಾ ಇದ್ದರೂ ಕೊರೊನಾ ವೈರಸ್‌ ಬಗೆಗಿನ ಅಗತ್ಯ ಮುಂಜಾಗ್ರತೆಗಳ ಬಗ್ಗೆ ಜನತೆ ಗಂಭೀರವಾಗಿರುವಂತೆ ತೋರುತ್ತಿಲ್ಲ. ಕೇಂದ್ರ ಆರೋಗ್ಯ ಸಚಿವಾಲಯವೇ ಈ ಬಗ್ಗೆ ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದೆ.

ಕೊರೊನಾ ವೈರಸ್‌ನಿಂದ ದೂರವಿರಲು ಮಾಸ್ಕ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂದು ವೈರಸ್ ಪತ್ತೆಯಾದ ಆರಂಭದಿಂದಲೇ ಘೋಷಿಸಿದ್ದು ಭಾರತದಲ್ಲಿಯೂ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಇನ್ನೂ ಕೂಡ 50 ಶೇಕಡಾಕ್ಕಿಂತ ಹೆಚ್ಚು ಜನರು ಮಾಸ್ಕ್ ಧರಿಸುತ್ತಿಲ್ಲ ಎಂದು ಅಧ್ಯಯನವೊಂದರ ಅಂಕಿಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಹಿರಂಗ ಪಡಿಸಿದೆ.

ಸರಿಯಾಗಿ ಧರಿಸುತ್ತಿಲ್ಲ ಮಾಸ್ಕ್

ಸರಿಯಾಗಿ ಧರಿಸುತ್ತಿಲ್ಲ ಮಾಸ್ಕ್

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ಅಂಶವನ್ನು ಬಹಿರಂಗಗೊಳಿಸಿದ್ದಾರೆ. ಇನ್ನು ಮಾಸ್ ಧರಿಸುವ ಐವತ್ತು ಶೇಕಡಾ ಜನರಲ್ಲಿ 64 ಶೇಕಡಾ ಜನರು ಮೂಗನ್ನು ಸರಿಯಾದ ಕ್ರಮದಲ್ಲಿ ಮುಚ್ಚಿರುವುದಿಲ್ಲ ಎಂದು ಈ ಅಧ್ಯಯನ ಹೇಳುತ್ತಿದೆ ಎಂದು ತಿಳಿಸಿದ್ದಾರೆ.

ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

ಸಾಮಾಜಿಕ ಅಂತರದ ಮಹತ್ವ

ಸಾಮಾಜಿಕ ಅಂತರದ ಮಹತ್ವ

ಇನ್ನು ಸಾಮಾಜಿಕ ಅಂತರದ ಬಗ್ಗೆಯೂ ಅಧ್ಯಯನದ ಫಲಿತಾಂಶವನ್ನು ಅವರು ವಿವರಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ವ್ಯಕ್ತಿಯೊರ್ವ ತಿಂಗಳಿನಲ್ಲಿ 406 ಜನರಿಗೆ ಕೊರೊನಾ ವೈರಸ್‌ಅನ್ನು ತಗುಲಲು ಕಾರಣವಾಗಬಹುದು ಎಂದು ಇದು ತಿಳಿಸುತ್ತದೆ ಎಂದು ಲವ್ ಅಗರ್ವಾಲ್ ತಿಳಿಸಿದ್ದಾರೆ.

ಮಾಸ್ಕ್ ಧರಿಸಿದರೆ ಹರಡುವ ಸಾಧ್ಯತೆ ತೀರಾ ಕಡಿಮೆ

ಮಾಸ್ಕ್ ಧರಿಸಿದರೆ ಹರಡುವ ಸಾಧ್ಯತೆ ತೀರಾ ಕಡಿಮೆ

"ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಅಂತರ ಮಹತ್ವದ ಪಾತ್ರವಹಿಸುತ್ತದೆ. ಅದೇ ರೀತಿ ಮಾಸ್ಕ್ ಕೂಡ ಬಹಳ ಮಹತ್ವ ವಹಿಸುತ್ತದೆ. ಮಾಸ್ಕ್ ಧರಿಸದ ಇಬ್ಬರು ವ್ಯಕ್ತಿಗಳ ಸಂಪರ್ಕದಲ್ಲಿ ಕೊರೊನಾ ವೈರಸ್ ಹರಡುವ ಸಾಧ್ಯತೆ 90 ಶೇಕಡಾ ಇರುತ್ತದೆ. ಆದರೆ ಅದೇ ವ್ಯಕ್ತಿಗಳು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿದ್ದರೆ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆಯಿರುತ್ತದೆ" ಎಂದು ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ವಿವರಿಸಿದ್ದಾರೆ.

ಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆಕೋವಿಡ್ 2ನೇ ಅಲೆ; ಕರ್ನಾಟಕದಲ್ಲಿ ಹೊಸ ಕೇಸ್, ಸಾವಿನಲ್ಲಿ ದಾಖಲೆ

Recommended Video

MIG 21 Crashed, ಪಂಜಾಬ್ ನಲ್ಲಿ ಭಾರತೀಯ ವಾಯುಪಡೆ ಯುದ್ದ ವಿಮಾನ ಅಪಘಾತಕ್ಕೀಡಾಗಿದೆ! | Oneindia Kannada
ಅಧ್ಯಯನದ ಮಾಹಿತಿ

ಅಧ್ಯಯನದ ಮಾಹಿತಿ

"25 ನಗರಗಳಲ್ಲಿ 2000 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ 50 ಶೇಕಡಾ ಜನರು ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸಿದ 50 ಶೇಕಡಾದಲ್ಲಿ 64 ಶೇಕಡಾ ಜನರು ಮೂಗನ್ನು ಸರಿಯಾಗಿ ಮುಚ್ಚಿರಲಿಲ್ಲ. 20 ಶೇಕಡಾ ಜನರು ಗಲ್ಲದಲ್ಲಿ ಮಾಸ್ಕ್ ಧರಿಸಿದ್ದರೆ, 2 ಶೇಕಡಾ ಜನರು ಕುತ್ತಿಗೆ ಭಾಗದಲ್ಲಿ ಮಾಸ್ಕ್ ಹಾಕಿಕೊಂಡಿದ್ದರು. 14 ಶೇಕಡಾ ಜನರು ಮಾತ್ರವೇ ಮೂಗು, ಬಾಯಿ, ಗಲ್ಲವನ್ನು ಮುಚ್ಚಿಕೊಂಡು ಸೂಕ್ತ ರೀತಿಯಲ್ಲಿ ಧರಿಸಿಕೊಂಡಿದ್ದರು" ಎಂದು ಅಧ್ಯಯನದ ವರದಿಯನ್ನು ಬಹಿರಂಗಪಡಿಸಿದ್ದಾರೆ.

English summary
Health Ministry explained a study report, 50 percent people of the country still do not wear masks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X