ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ, ವಾಂಟೆಡ್ ಲಷ್ಕರ್ ಉಗ್ರ ಸಾವು
ಶನಿವಾರ ಕುಲ್ಗಾಮ್ ನಲ್ಲಿ ನಡೆದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ಮೂವರು ನಾಗರಿಕರು ಹಾಗೂ ವಾಂಟೆಡ್ ಉಗ್ರನೊಬ್ಬ ಅಸುನೀಗಿದ್ದ. ಕುಲ್ಗಾಮ್ ಜಿಲ್ಲೆಯ ಮೀರ್ ಬಜಾರ್ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು.
ಕುಲ್ಗಾಮ್(ಕಾಶ್ಮೀರ), ಮೇ 7: ಕಾಶ್ಮೀರದ ಕುಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 5 ಜನ ಅಸುನೀಗಿದ್ದಾರೆ. ಸಾವಿಗೀಡಾದವರಲ್ಲಿ ಲಷ್ಕರ್ ಇ ತಯ್ಯಾಬಾದ ಓರ್ವ ಉಗ್ರ, ಪೊಲೀಸ್ ಅಧಿಕಾರಿ ಹಾಗೂ ಸಾರ್ವಜನಿಕರೂ ಸೇರಿದ್ದಾರೆ.
ಶನಿವಾರ ನಡೆದ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ಇಬ್ಬರು ನಾಗರಿಕರು ಹಾಗೂ ವಾಂಟೆಡ್ ಉಗ್ರನೊಬ್ಬ ಅಸುನೀಗಿದ್ದ. ಕುಲ್ಗಾಮ್ ಜಿಲ್ಲೆಯ ಮೀರ್ ಬಜಾರ್ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಇದೀಗ ಘಟನೆಯಲ್ಲಿ ಮತ್ತೊಬ್ಬರು ನಾಗರೀಕರು ಸಾವನ್ನಪ್ಪಿದ್ದು ಒಟ್ಟು 5 ಜನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಓರ್ವ ಉಗ್ರ ಘಟನೆಯಲ್ಲಿ ಗಾಯಗೊಂಡಿದ್ದು ತಲೆ ಮರೆಸಿಕೊಂಡಿದ್ದಾನೆ.

ಘಟನೆಯಲ್ಲಿ ಸಾವನ್ನಪ್ಪಿರುವ ಫಯಾಜ್ ಅಹ್ಮದ್ ಅಶ್ವರ್ ಅಲಿಯಾಸ್ ಸೀತಾನಿಗಾಗಿ ಪೊಲೀಸರು 2015ರಿಂದ ಹುಡುಕಾಡುತ್ತಿದ್ದರು. ಇತ್ತೀಚೆಗೆ ನಡೆದ ಉಧಂಪುರ ದಾಳಿಯಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಈತನ ತಲೆಗೆ ಎನ್ಐಎ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಇದೀಗ ಆತನೂ ಈ ದಾಳಿಯಲ್ಲಿ ಸತ್ತಿದ್ದಾನೆ.
ಘಟನೆ ನಡೆದಿದ್ದು ಹೀಗೆ
ಪೊಲೀಸರ ತಂಡವೊಂದು ಶನಿವಾರ ಸಂಜೆ ಮೀರ್ ಬಜಾರ್ ಕಡೆ ಪ್ರಯಾಣ ಬೆಳೆಸಿತ್ತು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಉಗ್ರರ ತಂಡವೊಂದು ಗುಂಡಿನ ಮಳೆಗರೆಯಲು ಆರಂಭಿಸಿತ್ತು.
ಈ ಸಂದರ್ಭದಲ್ಲಿ ಮುನ್ನುಗ್ಗಿ ಪೊಲೀಸ್ ಅಧಿಕಾರಿಯೊಬ್ಬರು ಉಗ್ರನ ಕೈಯಿಂದ ಪಿಸ್ತೂಲ್ ಎಳೆದುಕೊಂಡರು. ಇದರಿಂದ ಘಟನೆಯಲ್ಲಿ ಹೆಚ್ಚಿನ ದುರಂತ ಸಂಭವಿಸಿಲ್ಲ. ನಂತರ ಆ ಉಗ್ರನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.












Click it and Unblock the Notifications