Get Updates
Get notified of breaking news, exclusive insights, and must-see stories!

2025ರಲ್ಲಿ ವಿಶ್ವವೇ ನಿಬ್ಬೆರಗಾಗುವ 5 ಪ್ರಮುಖ ಸಾಧನೆ ಮಾಡಿದ ನಮ್ಮ ಇಸ್ರೋ

ISRO Successes: 2025 ವರ್ಷ ಇನ್ನೇನು ಮುಕ್ತಾಯವಾಗುತ್ತಿದೆ. ಈ ವರ್ಷದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಸ್ರೋ ಹಲವು ಮಹತ್ವದ ಸಾಧನಗಳನ್ನು ಮಾಡಿದೆ. ಹಲವು ಹೊಸ ಮೈಲಿಗಲ್ಲುಗಳನ್ನು ಇಸ್ರೋ ಸೃಷ್ಟಿಸಿದೆ.

ಇದರಲ್ಲಿ ಯಶಸ್ವಿ SPADEX ಡಾಕಿಂಗ್ (ಭಾರತವನ್ನು ಬಾಹ್ಯಾಕಾಶದಲ್ಲಿ ಡಾಕಿಂಗ್ ಸಾಧನೆ ಮಾಡಿದ 4 ನೇ ರಾಷ್ಟ್ರವನ್ನಾಗಿ ಮಾಡಿತು). ಕಕ್ಷೆಯಲ್ಲಿರುವ ಎರಡು ಉಪಗ್ರಹಗಳನ್ನು (ಒಂದು 'ಟಾರ್ಗೆಟ್' ಮತ್ತು ಇನ್ನೊಂದು 'ಚೇಸರ್') ಯಶಸ್ವಿಯಾಗಿ ಜೋಡಿಸುವುದೇ ಈ ಯೋಜನೆ ಆಗಿದೆ. NASAದೊಂದಿಗೆ ನಿರ್ಣಾಯಕ NISAR ಭೂ ವೀಕ್ಷಣಾ ಉಪಗ್ರಹವನ್ನು ಉಡಾಯಿಸುವುದು, ಅದರ 100 ನೇ GSLV ಉಡಾವಣೆಯನ್ನು ಗುರುತಿಸುವುದು ಮತ್ತು ಎರಡನೇ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ISS (ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ)ಗೆ ಕಳುಹಿಸಿದ Axiom-4 ಕಾರ್ಯಾಚರಣೆಯನ್ನು ಸುಗಮಗೊಳಿಸುವುದು ಸೇರಿದಂತೆ ಹಲವು ಮಹತ್ವದ ಸಾಧನೆಗಳನ್ನು ಇಸ್ರೋ ಈ ವರ್ಷ ಮಾಡಿದೆ. ಪ್ರಮುಖ ಸಾಧನೆಗಳ ವಿವರ ನೋಡೋಣ.

5 Incredible ISRO Successes in 2025 That Stunned World

2025ರಲ್ಲಿ ಇಸ್ರೋ ಪ್ರಮುಖ ಮತ್ತು ವಿಶೇಷ ಸಾಧನೆಗಳು

ಬಾಹ್ಯಾಕಾಶ ಡಾಕಿಂಗ್ ಪ್ರಗತಿ (SPADEX): 2025ನೇ ಸಾಲಿನ ಜನವರಿಯಲ್ಲಿ ಭಾರತವು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಎರಡು ಉಪಗ್ರಹಗಳ (SPADEX) ಕಕ್ಷೆಯಲ್ಲಿ ಡಾಕಿಂಗ್ ಅನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಭವಿಷ್ಯದಲ್ಲಿ ತಂತ್ರಜ್ಞರ ಕಾರ್ಯಾಚರಣೆ ಮತ್ತು ಬಾಹ್ಯಾಕಾಶ ಕೇಂದ್ರಗಳಲ್ಲಿ ಹೊಸ ಸಂಶೋಧನೆಗೆ ಪ್ರಮುಖ ಹೆಜ್ಜೆಯಾಗಿದೆ.

NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಡಾವಣೆ: ಇನ್ನು 2025ನೇ ಸಾಲಿನಲ್ಲಿ ಇಸ್ರೋ ಮಾಡಿದ ಮತ್ತೊಂದು ಸಾಧನೆ ಎಂದರೆ ಅದು NISAR ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು. ಇದು ಭಾರತ ಮತ್ತು ಅಮೇರಿಕಾದ ಸಹಯೋಗದಲ್ಲಿ ನಡೆಯಿತು. ಜುಲೈ 30 ರಂದು ಇಸ್ರೋ ಮತ್ತು ನಾಸಾ, ಭಾರತ ಮತ್ತು ಅಮೇರಿಕಾ ಉಭಯ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂ ವೀಕ್ಷಣಾ ಉಪಗ್ರಹ ನಿಖರವಾದ ಕಕ್ಷೆ ಸೇರಿತ್ತು.

ಇದನ್ನು ಭೂಮಿಯ ಅಧಿಕ ರೆಸಲ್ಯೂಶನ್ ಹಗಲು ಮತ್ತು ರಾತ್ರಿ ಚಿತ್ರಣವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲದೇ NISAR ಅನ್ನು ಹೊತ್ತ GSLV-F16 ಅನ್ನು ಉಡಾಯಿಸಲಾಗಿತ್ತು. ಇದು ಭಾರತ - ಯುಎಸ್‌ನ ಮಹತ್ವದ ಸಹಯೋಗಗಳಲ್ಲಿ ಒಂದೂ ಎನ್ನುವ ಖ್ಯಾತಿಯನ್ನೂ ಗಳಿಸಿದೆ.

ಆಕ್ಸಿಯಮ್-4 / Axiom-4: ಭಾರತೀಯ ಗಗನಯಾತ್ರಿ ಹಾಗೂ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಹೋಗಿ ಬಂದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಶುಭಾಂಶು ಶುಕ್ಲಾ. ಭಾರತ, ಹಂಗೇರಿ, ಪೋಲೆಂಡ್ ಮತ್ತು ಅಮೇರಿಕದಿಂದ ಗಗನಯಾತ್ರಿಗಳನ್ನು ಹೊತ್ತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನದ ಯಶಸ್ವಿ ಉಡಾವಣೆ ನಡೆದಿತ್ತು.

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಕ್ಸಿಯಮ್-4 ನಲ್ಲಿ ಭಾರತೀಯ ನೇತೃತ್ವದ ಪ್ರಯೋಗಗಳನ್ನು ನಡೆಸಿದ್ದರು. ಇದು ದೇಶವೇ ಹೆಮ್ಮೆ ಪಡುವ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆ ಇವರದ್ದು. ಇದು ಭಾರತದ ಬೆಳೆಯುತ್ತಿರುವ ಮಾನವ ಬಾಹ್ಯಾಕಾಶ ಹಾರಾಟದ ಪ್ರಗತಿಗೆ ಸಂಕೇತವಾಗಿತ್ತು.

100 ನೇ GSLV ಉಡಾವಣೆ: ಉಪಗ್ರಹದ ಕಕ್ಷೆಯಲ್ಲಿ ಉಡಾವಣಾ ನಂತರದ ಕೆಲವು ಸಮಸ್ಯೆಗಳ ಹೊರತಾಗಿಯೂ, GSLV-F16 NVS-02 ನ್ಯಾವಿಗೇಷನ್ ಉಪಗ್ರಹವನ್ನು ಹೊತ್ತೊಯ್ಯುವ ಮೂಲಕ ಇಸ್ರೋ ಜನವರಿ 29, 2025 ರಂದು ಶ್ರೀಹರಿಕೋಟಾದಿಂದ ತನ್ನ 100ನೇ ಯಶಸ್ವಿ ಉಡಾವಣೆಯನ್ನು ಮಾಡಿತು. ಇದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಕ್ಷಣವಾಗಿತ್ತು.

LVM3 ವಾಣಿಜ್ಯ ಯಶಸ್ಸು: ವರ್ಷಾಂತ್ಯದಲ್ಲಿ ಇಸ್ರೋ ಮತ್ತೊಂದು ಪ್ರಮುಖ ಸಾಧನೆಯನ್ನು ಮಾಡಿದೆ. ಡಿಸೆಂಬರ್‌ 24ರಂದು ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ LVM3-M6 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅಮೇರಿಕ ಮೂಲದ ಸಂಸ್ಥೆಯ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದು, ಇದು ಮತ್ತೊಂದು ಹೊಸ ಸಾಧನೆ ಆಗಿದೆ. AST SpaceMobile ಸಂಸ್ಥೆಯ ವಾಣಿಜ್ಯ ಉದ್ದೇಶಗಳಿಗಾಗಿ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ. ಈ ಮೂಲಕ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಇಸ್ರೋ ಹೊಸ ಇತಿಹಾಸ ಸೃಷ್ಟಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+