• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್- ಏಪ್ರಿಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ರು.3,622 ಕೋಟಿ ಎಲೆಕ್ಟೋರಲ್ ಬಾಂಡ್ ಮಾರಾಟ

|

ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 3,622 ಕೋಟಿ ರುಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್ (ಚುನಾವಣೆ ದೇಣಿಗೆ)ಗಳನ್ನು ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಮಾರಾಟ ಮಾಡಲಾಗಿದೆ ಎಂಬ ಸಂಗತಿ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಯಲ್ಲಿ ಬಯಲಾಗಿದೆ. ಪುಣೆ ಮೂಲದ ವಿಹಾರ ದುರ್ವೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು.

ಎಸ್ ಬಿಐ ನೀಡಿದ ಮಾಹಿತಿ ಪ್ರಕಾರ, 1365.69 ಕೋಟಿ ರುಪಾಯಿಯಷ್ಟು ಬಾಂಡ್ ಮಾರ್ಚ್ ನಲ್ಲಿ ಮಾರಾಟವಾಗಿದೆ. ಅದಕ್ಕಿಂತ 65.21 ಪರ್ಸೆಂಟ್ ಹೆಚ್ಚು, ಅಂದರೆ ಏಪ್ರಿಲ್ ನಲ್ಲಿ 2256.37 ಕೋಟಿ ರುಪಾಯಿಯಷ್ಟು ಬಾಂಡ್ ಮಾರಾಟ ಆಗಿದೆ. ಏಪ್ರಿಲ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಬಾಂಡ್ ಮುಂಬೈನಲ್ಲಿ, ಅಂದರೆ 694 ಕೋಟಿ ರುಪಾಯಿಯಷ್ಟು ಮಾರಲಾಗಿದೆ.

ದೇಣಿಗೆ ವಿವರ ಸಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ಆ ನಂತರ ಕೋಲ್ಕತ್ತಾದಲ್ಲಿ 417.31 ಕೋಟಿ, ನವದೆಹಲಿಯಲ್ಲಿ 408.62 ಕೋಟಿ ಮತ್ತು ಹೈದರಾಬಾದ್ ನಲ್ಲಿ 338.07 ಕೋಟಿ ರುಪಾಯಿಯ ಬಾಂಡ್ ಮಾರಾಟ ಆಗಿದೆ. ಇಂತಿಷ್ಟು ಅವಧಿಗೆ ಬಾಂಡ್ ಮಾರಾಟ ಮಾಡಬಹುದು ಎಂದು ಆರ್ಥಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದ ಮೇಲೆ ಎಸ್ ಬಿಐ ಬಾಂಡ್ ಮಾರಾಟ ಆರಂಭಿಸಿತ್ತು.

ಎಲೆಕ್ಟೋರಲ್ ಬಾಂಡ್ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ ಮೇಲೆ ಅದನ್ನು 2018ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಯಾವ ರಾಜಕೀಯ ಪಕ್ಷವು ಜನ ಪ್ರತಿನಿಧಿಗಳ ಕಾಯ್ದೆ 29A, 1951ರ ಅಡಿಯಲ್ಲಿ ನೋಂದಣಿ ಆಗಿ, ಕಳೆದ ಲೋಕಸಭಾ ಚುನಾವಣೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಒಂದು ಪರ್ಸೆಂಟ್ ಗೆ ಕಡಿಮೆ ಇರದಂತೆ ಮತ ಪಡೆದಿರುತ್ತದೋ ಅವು ಬಾಂಡ್ ಗಳನ್ನು ಪಡೆಯಲು ಅರ್ಹ ಇರುತ್ತವೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನಿಂದ ಈ ಮಾರಾಟಕ್ಕೆ ತಡೆ ಕೋರಲಾಗಿತ್ತು ಇನ್ನು ಈ ಮಾರಾಟವನ್ನು ಪ್ರಶ್ನಿಸಿ, ಸಿಪಿಎಂನಿಂದ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆಗೆ ತಡೆ ನೀಡಬೇಕು ಎಂದು 2018ರಲ್ಲಿ ಎಡಿಆರ್ ನಿಂದ ಸುಪ್ರೀಂನಲ್ಲಿ ಮನವಿ ಕೇಳಿಕೊಳ್ಳಲಾಗಿದೆ.

English summary
3622 crore worth of electoral bond sold by SBI in March-April. This information revealed in the response given to question applied under RTI act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X