ಭಾರತದಲ್ಲಿ ಒಂದೇ ದಿನ 671 ಸಾವು, 34,884 ಮಂದಿಗೆ ಕೊರೊನಾ ಸೋಂಕು

ನವದೆಹಲಿ, ಜುಲೈ 18: ಭಾರತದಲ್ಲಿ ಒಂದೇ ದಿನ 34,884 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 671 ಮಂದಿ ಸಾವನ್ನಪ್ಪಿದ್ದಾರೆ.

ಒಟ್ಟು 10,38,716 ಕೊರೊನಾ ಸೋಂಕಿತ ಪ್ರಕರಣಗಳಿವೆ. 3,58,692 ಪ್ರಕರಣಗಳು ಸಕ್ರಿಯವಾಗಿವೆ. 6,53,751 ಮಂದಿ ಗುಣಮುಖರಾಗಿದ್ದಾರೆ. 26,273 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.

34,884 New COVID-19 cases reported in last 24 hours in India

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹತ್ತು ಲಕ್ಷ ಗಡಿ ದಾಟಿದೆ. ನಿನ್ನೆ ಒಂದೇ ದಿನ 34,956 ಜನರಿಗೆ ಕೊವಿಡ್ ತಗುಲಿತ್ತು. ಈ ಮೂಲಕ ಜಗತ್ತಿನಲ್ಲಿ ಹತ್ತು ಲಕ್ಷ ಕೊರೊನಾ ವೈರಸ್ ಕೇಸ್‌ಗಳನ್ನು ದಾಖಲಿಸಿದ ಮೂರನೇ ದೇಶ ಭಾರತ. ಇದಕ್ಕೂ ಮುಂಚೆ ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ 10 ಲಕ್ಷಕ್ಕೂ ಅಧಿಕ ಕೊವಿಡ್ ಪ್ರಕರಣಗಳು ವರದಿಯಾಗಿವೆ.

ವರದಿಗಳ ಪ್ರಕಾರ ಭಾರತದಲ್ಲಿ ಇನ್ನು 8,944 ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನುಳಿದಂತೆ ನಿನ್ನೆ ಮಹಾರಾಷ್ಟ್ರದಲ್ಲಿ 8641 ಕೇಸ್ ಪತ್ತೆಯಾಗಿತ್ತು. ತಮಿಳುನಾಡಿನಲ್ಲಿ 4549 ಕೇಸ್ ಹಾಗೂ ಕರ್ನಾಟಕದಲ್ಲಿ 4169 ಪ್ರಕರಣಗಳು ವರದಯಾಗಿತ್ತು..

ಶುಕ್ರವಾರ 24 ಗಂಟೆಯಲ್ಲಿ 34,956 ಮಂದಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. 686 ಜನರು ಕೊರೊನಾದಿಂದ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+