ಗುಜರಾತ್: ಪಾಕಿಸ್ತಾನ್ ದೋಣಿಯಲ್ಲಿ 300 ಕೋಟಿ ರೂ. ಡ್ರಗ್ಸ್ ವಶಕ್ಕೆ
ಅಹ್ಮದಾಬಾದ್, ಡಿಸೆಂಬರ್ 26: ಗುಜರಾತ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಬಂಧಿಸಿದ ದೋಣಿಯಲ್ಲಿ 300 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 40 ಕೆಜಿ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಭಾರತದ ಜಲಪ್ರದೇಶಕ್ಕೆ ನುಗ್ಗಲು ಯತ್ನಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ಗುಜರಾತ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ (ICG) ಬಂಧಿಸಿದ್ದು, ದೋಣಿಯಲ್ಲಿದ್ದ ಹತ್ತು ಮಂದಿಯನ್ನು ಬಂಧಿಸಲಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದಿಂದ (ATS) ಗುಪ್ತಚರ ಮಾಹಿತಿಯನ್ನು ಪಡೆದುಕೊಂಡಿತು. ಅದರ ಆಧಾರದ ಮೇಲೆ ಡಿಸೆಂಬರ್ 25 ಮತ್ತು 26ರ ಮಧ್ಯರಾತ್ರಿಯಲ್ಲಿ ಐಸಿಜಿಯು ತನ್ನ ವೇಗದ ಗಸ್ತು ವರ್ಗದ ಹಡಗು ಐಸಿಜಿಎಸ್ ಅರಿಂಜಯ್ ಅನ್ನು ಕಾಲ್ಪನಿಕ ಅಂತರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಸಮೀಪವಿರುವ ಪ್ರದೇಶದಲ್ಲಿ ಗಸ್ತು ತಿರುಗಲು ನಿಯೋಜಿಸಲಾಗಿತು.

ಭಾರತದ ಕಡಲ ತೀರದಲ್ಲಿ ಪಾಕ್ ದೋಣಿ:
ಸೋಮವಾರ ಮುಂಜಾನೆ ಭಾರತೀಯ ಕಡಲು ತೀರದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿ 'ಅಲ್ ಸೊಹೆಲಿ' ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿತು. ಭಾರತೀಯ ಕೋಸ್ಟ್ ಗಾರ್ಡ್ ಪಾಕಿಸ್ತಾನಿ ದೋಣಿಯಲ್ಲಿದ್ದವರನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ, ಬೋಟ್ ತಪ್ಪಿಸಿಕೊಳ್ಳುವ ತಂತ್ರವನ್ನು ಪ್ರಾರಂಭಿಸಿತು. ಭಾರತೀಯ ಕೋಸ್ಟ್ ಗಾರ್ಡ್ ಎಚ್ಚರಿಕೆಯ ಗುಂಡು ಹಾರಿಸಿದಾಗಲೂ ದೋಣಿ ನಿಲ್ಲಲಿಲ್ಲ. ಭಾರತೀಯ ಕೋಸ್ಟ್ ಗಾರ್ಡ್ ನ 'ಅರಿಂಜಯ್' ಹಡಗು ಪಾಕಿಸ್ತಾನದ ದೋಣಿಯನ್ನು ತಡೆದಿತ್ತು.
ಭಾರತೀಯ ಕರಾವಳಿ ಕಾವಲು ಪಡೆಗಳು ಪಾಕಿಸ್ತಾನದ ದೋಣಿಯನ್ನು ವಸಕ್ಕೆ ಪಡೆದುಕೊಂಡಾಗ ಸಿಬ್ಬಂದಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುವುದನ್ನು ಕಂಡುಹಿಡಿದರು. ಐಸಿಜಿ ದೋಣಿಯನ್ನು ಶೋಧಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 300 ಕೋಟಿ ಮೌಲ್ಯದ ಸುಮಾರು 40 ಕೆಜಿಯಷ್ಟು ಮಾದಕವಸ್ತುಗಳು ಪತ್ತೆಯಾಗಿವೆ. ತದನಂತರದಲ್ಲಿ ಅಧಿಕಾರಿಗಳು ದೋಣಿಯನ್ನು ವಶಪಡಿಸಿಕೊಂಡು, ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಅವರೆಲ್ಲರನ್ನು ಹೆಚ್ಚಿನ ತನಿಖೆಗಾಗಿ ಗುಜರಾತ್‌ನ ಕರಾವಳಿ ಪಟ್ಟಣ ಓಖಾಗೆ ಕರೆತರಲಾಗುತ್ತಿದೆ.












Click it and Unblock the Notifications