• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವಜಾತ ಶಿಶುವಿನ ಜೀವ ಉದಾತ್ತ ದಾನಿಗಳ ಕೈಯಲ್ಲಿದೆ!

By Prasad
|

ಹುಟ್ಟುವ ಮಗು ಗಂಡೇ ಆಗಲಿ ಹೆಣ್ಣೇ ಆಗಲಿ, ಮಗುವಿನ ಜನನ ಮನೆಯಲ್ಲಿ ಸಂಭ್ರಮ ಹೆಚ್ಚಿಸಿರುತ್ತದೆ. ಜೀವನದ ಸಾರ್ಥಕ ಭಾವನೆಯನ್ನು ಮೂಡಿಸುವ ವಿಶೇಷ ಘಳಿಗೆ ಅದು. ಅನಿರ್ವಚನೀಯ ಆನಂದ ಆ ಘಳಿಗೆಯಲ್ಲಿ ಮನೆಮಾಡಿರುತ್ತದೆ. ಆದರೆ ಕೆ. ಶಿವಾ ಮತ್ತು ಸಾಯಿ ಪ್ರಿಯಾ ಎನ್ನುವ ದಂಪತಿಗಳಿಗೆ ಮಗು ಹುಟ್ಟಿರುವ ಸಂಭ್ರಮವನ್ನು ತುಂಬು ಮನಸ್ಸಿನಿಂದ ಆಚರಿಸಲು ಸಾಧ್ಯವಾಗುತ್ತಿಲ್ಲದಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಇದೇ ಏಪ್ರಿಲ್ 18ರಂದು ಸಾಯಿ ಪ್ರಿಯಾ ಅವರು ಅಕಾಲಿಕ ಪ್ರಸವದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಭೂಮಿಗೆ ಬಂದು ತಾಯಿಯ ಬೆಚ್ಚನೆ ಮಡಿಲಲ್ಲಿ ಮಲಗಿ ಎದೆಹಾಲಿನ ಅಮೃತದಾನಂದ ಪಡೆಯಬೇಕಿದ್ದ ಮಗು ಇದೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ.

ಏಳನೇ ತಿಂಗಳಲ್ಲಿಯೇ ಪ್ರಸವ ಆಗಿರುವುದರಿಂದ ಮಗುವಿನ ಬೆಳವಣಿಗೆಯು ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿಯೇ ವೈದ್ಯರು ಶಿಶುವನ್ನು ವೆಂಟಿಲೇಟರ್ ನಲ್ಲಿ ಇರಿಸಿದ್ದಾರೆ. ಆದರೆ ಮಗು ಈವರೆಗೆ ಯಾವುದೇ ರೀತಿಯ ಬೆಳವಣಿಗೆ ಅಥವಾ ತೂಕದಲ್ಲಿ ಹೆಚ್ಚಳವನ್ನು ಕಂಡಿಲ್ಲ. ಇಂದಿಗೂ ಮಗುವಿನ ಆರೋಗ್ಯ ಸುಧಾರಣೆಗಾಗಿ ಶಿವ ಮತ್ತು ಸಾಯಿ ಪ್ರಿಯಾ ಹೈದರಾಬಾದ್‍ನ ಲಿಟ್ಲ್ ಸ್ಟಾರ್ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಇದ್ದಾರೆ. ಮಗು ಆಗಾಗ ವಿವರಿಸಲಾಗದ ನೋವಿನಿಂದ ಅಳುತ್ತಿರುವುದು ಹೃದಯ ಹಿಂಡುವಂತಿರುತ್ತದೆ.

ಗರ್ಭಾವಸ್ಥೆಯಲ್ಲಿ ಇರುವಾಗ ಸಾಯಿ ಪ್ರಿಯಾ ಒಂದು ದಿನ ಗಂಭೀರವಾದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಆಗ ಅವರಿಗೆ ಉಸಿರಾಟದ ತೊಂದರೆಯು ಉಂಟಾಗಿತ್ತು. ಆ ಸಂದರ್ಭದಲ್ಲಿ ಏರ್‍ಸೆಲ್ ಉದ್ಯೋಗಿ ಒಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆ ಸಮಯದಲ್ಲಿ ವೈದ್ಯರು ಮಗುವನ್ನು ಅವಧಿಗೆ ಮುಂಚಿತವಾಗಿಯೇ ಸಿ-ಸೆಕ್ಷನ್ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಇಲ್ಲವಾದರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವುದು ಎಂದು ಹೇಳಿದ್ದರು.

ಮಗುವಿನ ಜನನದ ನಂತರ ಪ್ರಿಯಾ ತನ್ನ ಆರೋಗ್ಯದಲ್ಲಿ ಬಹುಬೇಗ ಚೇತರಿಕೆಯನ್ನು ಕಂಡರು. ಆದರೆ ನಂತರದ ಎರಡು ವಾರದಲ್ಲಿ ತನ್ನ ಮಗುವಿನ ಆರೋಗ್ಯ ಇನ್ನೂ ಸುಧಾರಣೆ ಆಗಿಲ್ಲ ಎನ್ನುವ ಚಿಂತೆ ಪ್ರಿಯಾಗೆ ಪ್ರಾರಂಭವಾಯಿತು. ತಾಯಿಯ ಎದೆಹಾಲು ಕುಡಿದು ಬೆಚ್ಚಗೆ ಮಲಗಬೇಕಿದ್ದ ಮಗು ಇಂದು ವೆಂಟಿಲೇಟರ್ ನಲ್ಲಿ ಮಲಗಿದೆ ಟ್ಯೂಬ್‍ಗಳು ಹಾಗೂ ಸೂಜಿಯಿಂದ ಚುಚ್ಚಿಕೊಂಡು ಚಿಕಿತ್ಸೆ ಪಡೆಯುತ್ತದೆ ಎನ್ನುವ ದೃಶ್ಯ ಕಂಡಾಗ ಆ ಕರುಳಿಗೆ ಹೇಗಾಗಿರಬೇಕು? ಮಾಡುವುದಾದರೂ ಏನು? ಮಗುವನ್ನು ಕಂಡಾಗಲೆಲ್ಲಾ ಅದರ ಸ್ಪರ್ಶವನ್ನು ಪಡೆದು ಅಳುವುದೊಂದೇ ಬಾಕಿ.

ಮಗುವಿಗೆ ಚಿಕಿತ್ಸೆಯನ್ನು ಕೊಡಿಸುತ್ತಿರುವುದರಿಂದ ಆಸ್ಪತ್ರೆಯ ಚಿಕಿತ್ಸೆಯ ಬಿಲ್ ಮೇಲ್ಮುಖವಾಗಿ ಸಾಗುತ್ತಿದೆ. ಶಿವ ಅವರು 15,000 ಮಾಸಿಕ ಆದಾಯವನ್ನು ಪಡೆಯುತ್ತಿದ್ದರು. ಆದರೆ ಇದೀಗ ಆ ಕೆಲಸವನ್ನು ಸಹ ಕಳೆದುಕೊಂಡು ಒಂದು ತಿಂಗಳಾಯಿತು. ಮಗುವಿನ ಆರೋಗ್ಯ ಸುಧಾರಣೆಗೆ ಹಣವನ್ನು ಹೊಂದಿಸಲು ಕಷ್ಟ ಪಡುತ್ತಿದ್ದಾರೆ.

ಮೇ ತಿಂಗಳಲ್ಲಿ 4.5 ಲಕ್ಷ ರುಪಾಯಿ ಆಸ್ಪತ್ರೆಯ ಬಿಲ್ ಅನ್ನು ನೀಡಿತ್ತು. ಅದನ್ನು ಭರಿಸಲು ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಒಡವೆ ಹಾಗೂ ಆಸ್ತಿಯನ್ನು ಮಾರಿದ್ದಾರೆ. ಅಲ್ಲದೆ ಶಿವ ಅವರ ಸ್ನೇಹಿತರು ಹಾಗೂ ಬಂಧುಗಳಿಂದ ಹಣವನ್ನು ಸಾಲಪಡೆದು ಹಣವನ್ನು ಹೊಂದಿಸಿ ನೀಡಿದ್ದರು. ಶಿವ ಮತ್ತು ಪ್ರಿಯಾ "ತಮ್ಮ ಮಗುವಿಗಿಂತ ದೊಡ್ಡ ಆಸ್ತಿ ಯಾವುದೂ ಇಲ್ಲ. ಮೊದಲು ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಆದಷ್ಟು ಬೇಗ ಮನೆಗೆ ಕರೆದೊಯ್ಯಬೇಕು" ಎನ್ನುವ ನಿಲುವನ್ನು ಹೊಂದಿದ್ದಾರೆ.

ಆದರೆ ಇದೀಗ ಮಗುವಿಗೆ ಇನ್ನಷ್ಟು ಚಿಕಿತ್ಸೆ ಕೊಡಿಸಲು 8 ಲಕ್ಷ ರುಪಾಯಿ ಹಣವನ್ನು ಹೊಂದಿಸಬೇಕಿದೆ. ಇದು ಶಿವ ಮತ್ತು ಪ್ರಿಯಾ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾವುದೇ ಆದಾಯದ ಮೂಲವಿಲ್ಲದ ಶಿವ ಅವರಿಗೆ ಹಣವನ್ನು ಹೊಂದಿಸಲು ಕಷ್ಟವಾಗುತ್ತಿದೆ. ಹಣವನ್ನು ಹೊಂದಿಸಲು ಯಾವುದೇ ಚಮತ್ಕಾರ ಅಥವಾ ವಿಶೇಷ ಶಕ್ತಿಯಿಂದ ಪಡೆಯಲು ಸಾಧ್ಯವಿಲ್ಲ.

ಶಿವ ತನ್ನ ಮಗುವಿನ ಚಿಕಿತ್ಸೆಗೆ ಹಣವನ್ನು ಹೊಂದಿಸಲು ನೀವು ಸಹಾಯ ಮಾಡಬೇಕು ಎಂದು ಬಯಸಿದರೆ, ಅವರ ನಿಧಿ ಸಂಗ್ರಹಕ್ಕಾಗಿ ಫೇಸ್‍ಬುಕ್ ಮತ್ತು ವಾಟ್ಸ್ ಆಪ್ ಅಲ್ಲಿ ಈ ಕಥೆಯನ್ನು ಹಂಚಿಕೊಳ್ಳುವುದರ ಮೂಲಕ ಸಹಾಯ ಮಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

lok-sabha-home
English summary
30 days girl child born prematurely and on ventilator needs help from donors to recover fast. The baby of K Shiva and Sai Priya is fighting Pre-mature Birth Defect.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more