ಮಹಾರಾಷ್ಟ್ರದ ಕಾರ್ಖಾನೆಯಲ್ಲಿ ಬೆಂಕಿ ಅವಘಡ: 3 ಸಾವು
ಪಲ್ಘರ್, ಮಾರ್ಚ್ 9: ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ತಾರಾಪುರ ಎಂಬಲ್ಲಿ ನಡೆದ ಬೆಂಕಿ ಅವಘಡದಲ್ಲಿ 3 ನ ಮೃತರಾಗಿದ್ದು, 12 ಜನ ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರ ಕೈಗಾರಿಕಾಭಿವೃದ್ಧಿ ಕಾರ್ಪೊರೇಶನ್(ಎಂಐಡಿಸಿ) ಪ್ರದೇಶದಲ್ಲಿ ನಿನ್ನೆ(ಮಾ.8) ರಾತ್ರಿಯೇ ಬೆಂಕಿ ಹೊತ್ತಿಕೊಂಡಿದ್ದು, ನಂತರ ಇಲ್ಲಿನ ಕಾರ್ಖಾನೆಯೊಂದಕ್ಕೆ ಬೆಂಕಿ ವ್ಯಾಪಿಸಿದೆ. ಇಲ್ಲಿನ ಆರು ರಾಸಾಯನಿಕ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಹರಸಾಹಸ ನಡೆಯುತ್ತಿದೆ.
#UPDATE Palghar Factory Fire: Death toll rises to three. #Maharashtra pic.twitter.com/1O1XvQxXYe
— ANI (@ANI) March 9, 2018
ರಾತ್ರಿ ಸುಮಾರು 11:30 ರ ಸಮಯದಲ್ಲೇ ಬೆಂಕಿ ಹೊತ್ತಿಕೊಂಡಿದ್ದರೂ, ಕಾರ್ಖಾನೆಗಳು ಇನ್ನೂ ಹೊತ್ತಿ ಉರಿಯುತ್ತಲೇ ಇವೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯೆ ಇದೆ.
ಡಿ.29 ರಂದು ಮುಂಬೈನ ಕಮಲ್ ಮಿಲ್ಸ್ ಹೊಟೇಲ್ ನಲ್ಲಿ ನಡೆದ ಬೆಂಕಿ ಅವಘಡದಲ್ಲಿ 14 ಜನ ಮೃತರಾಗಿದ್ದರು.











Click it and Unblock the Notifications