2ಜಿ ಸ್ಪೆಕ್ಟ್ರಂ ಹಗರಣ, ಅ.25ರಂದು ಅಂತಿಮ ತೀರ್ಪಿನ ದಿನಾಂಕ ನಿಗದಿ
ನವದೆಹಲಿ, ಸೆಪ್ಟೆಂಬರ್ 20 : ಹಲವು ವರ್ಷಗಳ ಹಿಂದಿನ 2ಜಿ ಸ್ಪೆಕ್ಟ್ರಂ ಹಗರಣ ಕೊನೆಗೂ ಸುಖಾಂತ್ಯ ಕಾಣುವ ಕಾಲ ಕೂಡಿ ಬಂದಿದೆ.
ಮಾಜಿ ಟೆಲೆಕಾಂ ಸಚಿವ ಎ ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರ ವಿರುದ್ಧದ 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ವಿಚಾರಣೆಯನ್ನು ಸಿಬಿಐ ವಿಶೇಷ ಕೋರ್ಟ್ ಅಕ್ಟೋಬರ್ 25ಕ್ಕೆ ಮುಂದೂಡಿದ್ದು, ಅಕ್ಟೋಬರ್ 25ರಂದು ನಡೆಯುವ ವಿಚಾರಣೆ ವೇಳೆ ತೀರ್ಪಿನ ದಿನಾಂಕ ನಿಗದಿಪಡಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ನ ನ್ಯಾಯಾಧೀಶ ಒ. ಪಿ. ಸೈನಿ ಅವರು ತಿಳಿಸಿದ್ದಾರೆ.

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಎರಡು ಪ್ರತ್ಯೇಕ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದು, ಒಂದು ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದರೆ, ಮತ್ತೊಂದು ಪ್ರಕರಣವನ್ನು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಜಾರಿ ನಿರ್ದೇಶನಾಲಯವು 2014 ಏಪ್ರಿಲ್ ನಲ್ಲಿ ಈ ಪ್ರಕರಣದಲ್ಲಿ ಎ ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಸೇರಿದಂತೆ ಒಟ್ಟು 19 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.












Click it and Unblock the Notifications