ಭೀಕರ ರಸ್ತೆ ಅಪಘಾತ, 28 ಮಂದಿ ಸಾವು

ಅಸ್ಸಾಂ, ಅ.3: ರಾಷ್ಟ್ರೀಯ ಹೆದ್ದಾರಿ 35ರಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 28 ಮಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಗುರುವಾರ(ಅ.3) ಮುಂಜಾನೆ ಎರಡು ಮಿನಿ ಬಸ್ ಗಳಿಗೆ ಟ್ರಕ್ ವೊಂದು ಬಡಿದ ಪರಿಣಾಮ 13 ಮಕ್ಕಳು ಸೇರಿದಂತೆ ಸುಮಾರು 28 ಮಂದಿ ಸಾವನ್ನಪ್ಪಿದ್ದಾರೆ, 10 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಅಸ್ಸಾಂನ ಬರ್ಪೆಟಾ ಜಿಲ್ಲೆಯಲ್ಲಿನರಾಷ್ಟ್ರೀಯ ಹೆದ್ದಾರಿ 35ರಲ್ಲಿ ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಎರಡು ಮಿನಿ ಬಸ್ ಗಳು ಒಂದರ ಹಿಂದೆ ಒಂದು ವೇಗವಾಗಿ ಬರ್ಪೆಟಾ ಜಿಲ್ಲೆಯ ಹೆದ್ದಾರಿ ರಸ್ತೆಯಲ್ಲಿ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಟ್ರಕ್ ವೊಂದು ಮುಂದಿದ್ದ ಮಿನಿ ಬಸ್ ಗೆ ಬಡಿದಿದೆ. ಇದರ ಪರಿಣಾಮ ಹಿಂದೆ ಬರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣವೂ ತಪ್ಪಿದೆ.

28 killed in Assam road accident

ಸೊರ್ಭೊಗ್ ಪೊಲೀಸ್ ಠಾಣೆ ವ್ಯಾಪ್ತಿಯ ದೊಹೊಲಾಪಾರ ಎಂಬಲ್ಲಿ ಗುರುವಾರ ಬೆಳಗ್ಗೆ 4.30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡು ಬಸ್ ಗಳು ಪಲ್ಟಿ ಹೊಡೆದ ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿ ಸಾವನ್ನಪ್ಪಿದ್ದು, 10 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾಮರೂಪಿ ಜಿಲ್ಲೆಯ ರಂಗಿಯಾ ಎಂಬಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಉದ್ಯೋಗ ಅರಸಿ ಧುಬ್ರಿ ಜಿಲ್ಲೆಯ ಖೊಲ್ಖೊಲಿ ಎಂಬ ಊರಿನವರು ಬಸ್ ನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಬರ್ಪೆಟಾ ಮೆಡಿಕಲ್ ಕಾಲೇಜ್ ಆಸ್ಪತ್ರೆ ಹಾಗೂ ಬೊಂಗೈಗಾಂವ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟು ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕ ನಾಪತ್ತೆಯಾಗಿದ್ದು ಆತನಿಗಾಗಿ ಹುಡುಕಾಟ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+