ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ತಿಂಗಳಿನಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಪೈಕಿ ಯುವಜನತೆ ಪಾಲೆಷ್ಟು?

|
Google Oneindia Kannada News

ನವದೆಹಲಿ, ಮೇ 26: ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಿನ ಸಾವು ನೋವಿಗೆ ಸಾಕ್ಷಿಯಾಗಿದೆ. ಕೊರೊನಾ ಮೊದಲ ಅಲೆಯಲ್ಲಿ ವಯಸ್ಸಾದವರು ಅಧಿಕ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದರು ಹಾಗೂ ಸಾವನ್ನಪ್ಪಿದ್ದರು. ಆದರೆ ಎರಡನೇ ಅಲೆಯಲ್ಲಿ ಯುವಜನತೆ ಹಾಗೂ ಮಧ್ಯವಯಸ್ಕರೇ ಸೋಂಕಿಗೆ ಒಳಗಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

ಇದಕ್ಕೆ ಪುಷ್ಟಿ ಕೊಡುವಂತೆ ಸರ್ಕಾರ ಮತ್ತೊಂದು ಮಾಹಿತಿಯನ್ನು ಬಿಡುಗಡೆ ಮಾಡಿದೆ. ಮೇ ತಿಂಗಳೊಂದರಲ್ಲೇ ಭಾರತದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರಲ್ಲಿ 26% ಮಂದಿ 18-30ರ ವಯೋಮಾನದವರಾಗಿದ್ದಾರೆ ಎಂದು ಸರ್ಕಾರದ ಅಂಕಿ ಅಂಶ ಬುಧವಾರ ತಿಳಿಸಿದೆ. ಕೊರೊನಾ ಸೋಂಕಿಗೆ ರೋಗನಿರೋಧಕ ಶಕ್ತಿ ಹೆಚ್ಚಿರುವ ಯುವಜನತೆಯೇ ತುತ್ತಾಗುತ್ತಿರುವುದು ಪ್ರಶ್ನೆಯನ್ನೂ ಹುಟ್ಟು ಹಾಕಿದೆ. ಮುಂದೆ ಓದಿ...

 ಮೇ ತಿಂಗಳಲ್ಲಿ ಯುವಜನರಲ್ಲಿ ಕೊರೊನಾ ಸೋಂಕು

ಮೇ ತಿಂಗಳಲ್ಲಿ ಯುವಜನರಲ್ಲಿ ಕೊರೊನಾ ಸೋಂಕು

ಮೇ 1ರಿಂದ ಮೇ 7ರ ನಡುವೆ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಶೇ 26.58ರಷ್ಟು ಜನರು 18-30 ವಯಸ್ಸಿನವರಾಗಿದ್ದಾರೆ ಎಂದು ಸರ್ಕಾರದ ಅಂಕಿ ಅಂಶ ವಿವರಿಸಿದೆ. ಮೇ 8ರಿಂದ ಮೇ 14ರ ನಡುವೆ ಈ ಸಂಖ್ಯೆ ಶೇ 25.89 ರಷ್ಟಿದೆ. ಮೇ 15-21ರಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ 25.64 ಮಂದಿ 18-30ರ ವಯೋಮಾನದವರು. ಮೇ 22-25ರವರೆಗೆ ಈ ವಯೋಮಾನದವರ ಶೇಕಡಾವಾರು ಸಂಖ್ಯೆ 25.60 ಆಗಿದೆ ಎಂದು ಮಾಹಿತಿ ನೀಡಿದೆ.

ಎಚ್ಚರ: ಭಾರೀ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಎಚ್ಚರ: ಭಾರೀ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

 ಮಧ್ಯವಯಸ್ಕರ ಪ್ರಮಾಣವೂ ಕಡಿಮೆಯಿಲ್ಲ

ಮಧ್ಯವಯಸ್ಕರ ಪ್ರಮಾಣವೂ ಕಡಿಮೆಯಿಲ್ಲ

ಯುವಜನತೆ ನಂತರ 31-40 ವಯೋಮಾನದವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಮೇ 1ರಿಂದ ಮೇ 7ರವರೆಗೂ ಈ ವಯೋಮಾನದವರ ಸಂಖ್ಯೆ ಶೇ 23.12 ಇದೆ. ಮೇ 8 ರಿಂದ 14ರವರೆಗೆ ಶೇ 22.79, ಮೇ 15-21ರವರೆಗೆ ಶೇ 22.58 ಹಾಗೂ ಮೇ 22ರಿಂದ ಮೇ 24ರವರೆಗೂ ಶೇ 22.24 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

 60 ವರ್ಷ ಮೇಲ್ಪಟ್ಟವರ ಸಂಖ್ಯೆ 13%

60 ವರ್ಷ ಮೇಲ್ಪಟ್ಟವರ ಸಂಖ್ಯೆ 13%

ಮೇ ತಿಂಗಳಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಹಾಗೂ ಮಧ್ಯವಯಸ್ಕರು ಸೋಂಕಿಗೆ ತುತ್ತಾಗಿದ್ದಾರೆ ಎಂಬುದನ್ನು ಈ ಅಂಕಿಅಂಶಗಳು ಸಾಬೀತುಪಡಿಸಿವೆ. ಮೂರನೇ ಅಲೆಯಲ್ಲಿ ಮಕ್ಕಳು ಈ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಬಾರಿ ಸೋಂಕಿಗೆ ತುತ್ತಾದ ಮಕ್ಕಳ ಸಂಖ್ಯೆ ಶೇ 10ರಷ್ಟು ಇದೆ ಎಂದು ತಿಳಿದುಬಂದಿದೆ.

ಲಸಿಕೆಯ ಒಂದು ಡೋಸ್ ಪಡೆದರೂ ಸಾಕು ಈ ದೇಶದಲ್ಲಿ ಮಾಸ್ಕ್ ಧರಿಸಬೇಕಿಲ್ಲಲಸಿಕೆಯ ಒಂದು ಡೋಸ್ ಪಡೆದರೂ ಸಾಕು ಈ ದೇಶದಲ್ಲಿ ಮಾಸ್ಕ್ ಧರಿಸಬೇಕಿಲ್ಲ

ಕೊರೊನಾ ಮೊದಲ ಅಲೆ 60 ವರ್ಷ ಮೇಲ್ಪಟ್ಟವರಿಗೆ ಅತಿ ಅಪಾಯಕಾರಿ ಎನ್ನಲಾಗಿತ್ತು. ಈ ಬಾರಿ ಮೇ ತಿಂಗಳಲ್ಲಿ 60 ವರ್ಷ ಮೇಲ್ಪಟ್ಟ ಶೇ 13 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೂ ಕೊರೊನಾ ಮೂರನೇ ಅಲೆಯನ್ನು ನಿರ್ಲಕ್ಷಿಸುವಂತಿಲ್ಲ. ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳಲೇಬೇಕಿದೆ.

 ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ

ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ

ಭಾರತದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಮಂಗಳವಾರದ ವರದಿಯಲ್ಲಿ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ಕಂಡುಬಂದಿದ್ದವು. ಆದರೆ, ಬುಧವಾರದ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,08,921 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಇದೇ ವೇಳೆ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದ್ದು, 4,157 ಸೋಂಕಿತರು ಮೃತಪಟ್ಟಿದ್ದಾರೆ.

English summary
Nearly 26 percent of all people infected with COVID-19 in India since May 1 are in the 18-30 age group, government data released Wednesday evening revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X