ಬೆಂಗಳೂರು -ಚೆನ್ನೈ expressway ಸೇರಿ ಹೊಸ ಹೆದ್ದಾರಿ ಪಟ್ಟಿ

ಬೆಂಗಳೂರು, ಆ. 14: ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ವು ಬೆಂಗಳೂರು -ಚೆನ್ನೈ expressway ಸೇರಿದಂತೆ ಹೊಸ ಆರ್ಥಿಕ ಕಾರಿಡಾರ್, ಎಕ್ಸ್ ಪ್ರೆಸ್ ವೇಗಳ ಟೈಮ್ ಲೈನ್ ಘೋಷಿಸಿದೆ. ಯಾವ ಯಾವ ನಗರಗಳಲ್ಲಿ ಯಾವ ಯಾವ ಹೆದ್ದಾರಿ ಯಾವಾಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಈಗ ಲಭ್ಯವಿದೆ.

ಬಹುತೇಕ ಮಾರ್ಚ್ 2023ರಿಂದ ಆರಂಭಗೊಂಡು ಮಾರ್ಚ್ 2025ರ ವೇಳೆಗೆ ಸುಮಾರು 23ಕ್ಕೂ ಅಧಿಕ ಎಕ್ಸ್ ಪ್ರೆಸ್ ವೇಗಳನ್ನು ಭಾರತ ಹೊಂದಲಿದೆ ಎಂದು ಎನ್ಎಚ್ಎಐ ಹೇಳಿದೆ.

ಸರಿ ಸುಮಾರು 7800 ಕಿ.ಮೀಗಳ ಕಾಮಗಾರಿ ಇದಾಗಿದ್ದು, ಎಲ್ಲವೂ ಮಾರ್ಚ್ 2025ರೊಳಗೆ ಪೂರ್ಣಗೊಳ್ಳಲಿದೆ. ಕೊರೊನಾವೈರಸ್ ದೆಸೆಯಿಂದ ಕಾಮಗಾರಿ ವಿಳಂಬಗೊಂಡಿದ್ದು, ಈಗ ಮತ್ತೆ ವೇಗ ಪಡೆದುಕೊಂಡಿದೆ. ಸುಮಾರು 3.3 ಲಕ್ಷ ಕೋಟಿ ರುಗಳ ಯೋಜನೆ ಇದಾಗಿದೆ.

23 new expressways and highways in next 5 years: NHAI

ಸೂರತ್, ಸೋಲಾಪುರ್, ಲಕ್ನೋ, ವೈಜಾಗ್, ಬೆಂಗಳೂರು, ಚೆನ್ನೈ, ರಾಯ್ ಪುರ್, ವಿಜಯವಾಡ, ಕೋಟ, ಖರಗ್ ಪುರ್, ಸಿಲಿಗುರಿ ಮೂಲಕ ಈ ಹೊಸ ಎಕ್ಸ್ ಪ್ರೆಸ್ ವೇಗಳು ಹಾದು ಹೋಗಲಿವೆ.

ಹೊಸ ಎಕ್ಸ್ ಪ್ರೆಸ್ ವೇಗಳು, ಕಿಲೋ ಮೀಟರ್ ಹಾಗೂ ಕಾಮಗಾರಿ ಪೂರ್ಣವಾಗುವ ವರ್ಷ:

ಹೊಸ ಎಕ್ಸ್ ಪ್ರೆಸ್ ವೇ, ಆರ್ಥಿಕ ಕಾರಿಡಾರ್
ಹೊಸ ಎಕ್ಸ್ ಪ್ರೆಸ್ ವೇಗಳು ಕಿಲೋ ಮೀಟರ್ ಕಾಮಗಾರಿ ಪೂರ್ಣವಾಗುವ ವರ್ಷ
ದೆಹಲಿ-ಮುಂಬೈ 1,350 ಕಿ.ಮೀ ಮಾರ್ಚ್ 2023
ಅಹಮದಾಬಾದ್-ಧೋಲೆರಾ 110 ಮಾರ್ಚ್ 2023
ದೆಹಲಿ- ಅಮೃತಸರ್-ಕತ್ರಾ 600 ಕಿ.ಮೀ ಮಾರ್ಚ್ 2024
ಬೆಂಗಳೂರು-ಚೆನ್ನೈ 272 ಕಿ. ಮೀ ಮಾರ್ಚ್ 2024
ಕಾನ್ಪುರ್-ಲಕ್ನೋ 63 ಕಿ. ಮೀ ಮಾರ್ಚ್ 2024
ಅಂಬಾಲ-ಕೊಟ್ಪುಟ್ಲಿ 310 ಕಿ.ಮೀ ಮಾರ್ಚ್ 2023
ಅಮೃತ್ ಸರ್-ಜಾಮ್ನಗರ್ 762 ಕಿ.ಮೀ ಮಾರ್ಚ್ 2023
ಯುಇಆರ್ II ದೆಹಲಿ 75 ಕಿ. ಮೀ ಮಾರ್ಚ್ 2024
ರಾಯ್ ಪುರ್- ವೈಜಾಗ್ 464 ಕಿ. ಮೀ ಮಾರ್ಚ್ 2024
ದೆಹಲಿ-ಸಹರನ್ ಪುರ್- ಡೆಹ್ರಾಡೂನ್ 169 ಕಿ.ಮೀ ಮಾರ್ಚ್ 2024
ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ 281 ಕಿ. ಮೀ ಮಾರ್ಚ್ 2024
ಸೂರತ್ -ಸೋಲಾಪುರ್ 464 ಕಿ. ಮೀ ಮಾರ್ಚ್ 2025
ಚೆನ್ನೈ -ಸೇಲಂ 277 ಕಿ.ಮೀ ಮಾರ್ಚ್ 2025
ದುರ್ಗ್- ರಾಯ್ ಪುರ್- ಅರಂಗ್ 92 ಕಿ.ಮೀ ಮಾರ್ಚ್ 2024
ಚಿತ್ತೂರು-ಥಾಚೂರ್ 125 ಕಿ.ಮೀ ಮಾರ್ಚ್ 2024
ಖರಗ್ ಪುರ್-ಸಿಲಿಗುರಿ 235 ಕಿ.ಮೀ ಮಾರ್ಚ್ 2025
ಸೋಲಾಪುರ್-ಕರ್ನೂಲು 318 ಕಿ. ಮೀ ಮಾರ್ಚ್ 2025
ಇಂದೋರ್- ಹೈದರಾಬಾದ್ 713 ಕಿ. ಮೀ ಮಾರ್ಚ್ 2025
ಹೈದರಾಬಾದ್-ವಿಶಾಖಪಟ್ಟಣಂ 221 ಕಿ.ಮೀ ಮಾರ್ಚ್ 2025
ಕೋಟಾ-ಇಂದೋರ್ 136 ಕಿ. ಮೀ ಮಾರ್ಚ್ 2024
ಹೈದರಾಬಾದ್-ರಾಯಪುರ್ 330 ಕಿ.ಮೀ ಮಾರ್ಚ್ 2025
ನಾಗ್ಪುರ್-ವಿಜಯವಾಡ 457 ಕಿ. ಮೀ ಮಾರ್ಚ್ 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+