ಭ್ರಷ್ಟಾಚಾರ ಮುಕ್ತ ಆಡಳಿತ ಒತ್ತು, 22 ಹಿರಿಯ ಅಧಿಕಾರಿಗಳು ಮನೆಗೆ

ನವದೆಹಲಿ, ಆಗಸ್ಟ್ 26: ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡಿರುವ ಮೋದಿ ಸರ್ಕಾರ್ 2.0, ಸರ್ಕಾರದ ಎಲ್ಲಾ ಸ್ತರಗಳಲ್ಲೂ ಭ್ರಷ್ಟಾಚಾರದ ಆರೋಪ ಹೊತ್ತವರನ್ನು ಅಧಿಕಾರದಿಂದ ದೂರ ಇಡುವ ಪ್ರಕ್ರಿಯೆಯನ್ನುಮುಂದುವರೆಸಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ತೆರಿಗೆ ಇಲಾಖೆಯ 22 ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿದೆ.

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸೀಮಾ ಸುಂಕ ಮಂಡಳಿ (ಸಿಬಿಐಸಿ) ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೂಪರಿಟೆಂಡೆಂಟ್​, ಸಹಾಯಕ ಸಿಬ್ಬಂದಿ ದರ್ಜೆಯ 22 ಹಿರಿಯ ಅಧಿಕಾರಿಗಳನ್ನು ಮನೆಗೆ ಕಳಿಸಲಾಗಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಈ ಅಧಿಕಾರಿಗಳ ವಿರುದ್ಧ ಸಿಬಿಐ ಸೇರಿದಂತೆ ಕೇಂದ್ರ ತನಿಖಾ ತಂಡಗಳಿಂದ ತನಿಖೆ ಎದುರಿಸುತ್ತಿದ್ದಾರೆ.

22 senior tax officials facing corruption charges forced to retire by CBIC

ಇದಕ್ಕೂ ಮುನ್ನ ಹಣಕಾಸು ಸಚಿವಾಲಯ ಆದಾಯ ತೆರಿಗೆ ಇಲಾಖೆಯ 12 ಅಧಿಕಾರಿಗಳು ಸೇರಿದಂತೆ ಒಟ್ಟು 27 ಭಾರತೀಯ ಹಣಕಾಸು ಸೇವೆಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿ ಸಿಬಿಐಸಿ ಆದೇಶಿಸಿತ್ತು. ಸಂಕಷ್ಟದಲ್ಲಿರುವ್ಚ ಉದ್ಯಮಿಗಳನ್ನು ಗುರಿಯನ್ನಾಗಿಸಿಕೊಂಡು ಅವರಿಗೆ ನೋಟಿಸ್​ ಅಥವಾ ಸಮನ್ಸ್​ ನೀಡಿ ಅವರಿಂದ ಈ ಭ್ರಷ್ಟ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅಕ್ಟೋಬರ್​ 1 ರಿಂದ ಆದಾಯ ತೆರಿಗೆ ಇಲಾಖೆಯ ಎಲ್ಲಾ ನೋಟಿಸ್​, ಸಮನ್ಸ್​ಗಳು ಮತ್ತು ಆದೇಶಗಳನ್ನು ಕೇಂದ್ರೀಕೃತ ಕಂಪ್ಯೂಟರ್​ ವ್ಯವಸ್ಥೆಯಿಂದ ಜಾರಿ ಮಾಡಲಾಗಿದೆ. ಅಲ್ಲದೆ ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ದಾಖಲೆಗಳು ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿದೆ. ಹೀಗಾಗಿ, ಐಟಿ ಇಲಾಖೆಯಿಂದ ನಕಲಿ ನೋಟಿಸ್ ಜಾರಿಗೆ ಆಸ್ಪದವಿಲ್ಲ ಎಂದು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+