2019ರ ಲೋಕಸಭಾ ಚುನಾವಣೆ ನಮ್ಮ ಸೈನಿಕರ ಶವಗಳ ಮೇಲೆ ನಡೆದವು!: ಸ್ಫೋಟಕ ಹೇಳಿಕೆ ನೀಡಿದ ಮಾಜಿ ಗವರ್ನರ್
ನವದೆಹಲಿ, ಮೇ. 22: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ದಾಳಿಯ ವಿಷಯದ ಬಗ್ಗೆ ಮತ್ತೊಮ್ಮೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2019 ರ ಲೋಕಸಭೆ ಚುನಾವಣೆಯು "ನಮ್ಮ ಸೈನಿಕರ ಮೃತದೇಹಗಳ ಮೇಲೆ ನಡೆಸಲಾಗಿದೆ. ಘಟನೆ ಬಗ್ಗೆ ತನಿಖೆಯಾಗಿದ್ದರೆ ಆಗಿನ ಗೃಹ ಸಚಿವರು ರಾಜೀನಾಮೆ ನೀಡಬೇಕಾಗುತ್ತಿತ್ತು ಎಂದು ಹೇಳಿದ್ದಾರೆ.
ಘಟನೆಯ ನಂತರ ದಾಳಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದೆ ಆದರೆ ಅವರು ನನಗೆ ಮೌನವಾಗಿರಲು ಹೇಳಿದರು ಎಂದು ಪ್ರಧಾನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

"2019ರ ಲೋಕಸಭೆ ಚುನಾವಣೆಗಳು ನಮ್ಮ ಸೈನಿಕರ ಮೃತದೇಹದ ಮೇಲೆ ನಡೆದಿವೆ. ಘಟನೆ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ. ಒಂದು ವೇಳೆ ತನಿಖೆ ನಡೆದಿದ್ದರೆ ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆ ನೀಡಬೇಕಿತ್ತು. ಅನೇಕ ಅಧಿಕಾರಿಗಳು ಜೈಲು ಪಾಲಾಗುತ್ತಿದ್ದರು ಮತ್ತು ದೊಡ್ಡ ವಿವಾದ ಉಂಟಾಗುತ್ತಿತ್ತು" ಎಂದು ಅಲ್ವಾರ್ ಜಿಲ್ಲೆಯ ಬನ್ಸೂರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮೊದಲು ರಾಜ್ಯಪಾಲರಾಗಿದ್ದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸತ್ಯಪಾಲ್ ಮಲಿಕ್ ಧ್ವನಿ ಎತ್ತಿದ್ದಾರೆ. ಫೆಬ್ರವರಿ 14, 2019 ರಂದು ಪುಲ್ವಾಮಾ ದಾಳಿ ನಡೆದಾಗ, ಪ್ರಧಾನಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಣದಲ್ಲಿದ್ದರು ಎಂದು ಅವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ಅವರು ಅಲ್ಲಿಂದ ಹೊರಗೆ ಬಂದಾಗ ನನಗೆ ಕರೆ ಮಾಡಿದರು. ನಮ್ಮ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಅವರು ನಮ್ಮ ತಪ್ಪಿನಿಂದ ಸತ್ತರು ಎಂದು ನಾನು ಅವರಿಗೆ ಹೇಳಿದೆ. ಅವರು ನನಗೆ ಮೌನವಾಗಿರಲು ಹೇಳಿದರು" ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಆಗಸ್ಟ್ 23, 2018 ಮತ್ತು ಅಕ್ಟೋಬರ್ 30, 2019 ರ ನಡುವೆ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ವಿಮಾ ಯೋಜನೆಗೆ ಸಂಬಂಧಿಸಿದ ಫೈಲ್‌ಗಳನ್ನು ತೆರವುಗೊಳಿಸಲು 300 ಕೋಟಿ ರೂಪಾಯಿಗಳನ್ನು ಲಂಚವಾಗಿ ನೀಡಲಾಯಿತು ಎಂಬ ಆರೋಪದ ಮೇಲೆ ಸತ್ಯಪಾಲ್ ಮಲಿಕ್ ಅವರನ್ನು ಇತ್ತೀಚೆಗೆ ಸಿಬಿಐ ಪ್ರಶ್ನಿಸಿದೆ.
ಅದಾನಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅದಾನಿ 20,000 ಕೋಟಿ ಪಡೆದಿದ್ದಾರೆ ಎಂದು ಹೇಳಿದರು ಮತ್ತು ಅದು ಎಲ್ಲಿಂದ ಬಂತು ಎಂದು ಸರ್ಕಾರವನ್ನು ಪ್ರಶ್ನಿಸಿದರು. ಪ್ರಧಾನಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಅವರು ಎರಡು ದಿನಗಳ ಕಾಲ ಮಾತನಾಡಿದರು. ಆದರೆ ಒಂದು ವಿಷಯಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರ ಬಳಿ ಉತ್ತರವಿಲ್ಲ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.












Click it and Unblock the Notifications