ಪಂಜಾಬ್ ಭೀಕರ ಅಪಘಾತ 20 ಸಾವು

ಗುರುವಾರ ಮುಂಜಾನೆ ಹಿಮಾಚಲ ಪ್ರದೇಶದ ಚಿಂತಪುರ್ನಿಯ ದೇವಾಲಯದಿಂದ ಯಾತ್ರಾರ್ಥಿಗಳು ಮರಳುವಾಗ ಈ ಘಟನೆ ನಡೆದಿದೆ. ಮೃತರಲ್ಲಿ 13 ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ.
ಪಂಜಾಬ್ ನ ಹೊಷಿಯಾರ್ ಪುರ ಜಿಲ್ಲೆಯ ಮಂಗುವಾಲ್ ಬಳಿ ಟ್ರಕ್ ಇನ್ನೊಂದು ಟ್ರಕ್ ಓವರ್ ಟೇಕ್ ಮಾಡಲು ಹೋದಾಗ, ಈ ಅಪಘಾತ ಸಂಭವಿಸಿದೆ. ಹೊಷಿಯಾರ್ ಪುರ ಜಿಲ್ಲೆಯ ಬೆಗೋವಾಲ್ ಪ್ರದೇಶಕ್ಕೆ ತೆರಳುತ್ತಿದ್ದರು.
ಪಂಜಾಬ್-ಹಿಮಾಚಲ ಪ್ರದೇಶದ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಸುಬ್ ಚೈನ್ ಸಿಂಗ್ ಗಿಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅತಿ ವೇಗದಿಂದ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications