ಶಿಮ್ಲಾದಲ್ಲಿ ಬಸ್ ಕಣಿವೆಗೆ ಉರುಳಿ 28 ಜನ ದಾರುಣ ಸಾವು
ಶಿಮ್ಲಾ, ಜುಲೈ 20: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಭೀಕರ್ ರಸ್ತೆ ಅಪಘಾತವೊಂದು ಸಂಭವಿಸಿದೆ.
ಪ್ರಯಾಣಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಶಿಮ್ಲಾದ ರಾಯಪುರದಲ್ಲಿ ಕಣಿವೆಗೆ ಉರುಳಿದೆ. ಪರಿಣಾಮ 28 ಜನ ಸಾವನ್ನಪ್ಪಿದ್ದಾರೆ. 9 ಜನ ಗಾಯಗೊಂಡಿದ್ದಾರೆ.

ಬಸ್ಸು ಸೋಲನ್ ಗೆ ಕಿಣ್ಣೌರ್ ನಿಂದ ಪ್ರಯಾಣಿಸುತ್ತಿತ್ತು. ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು ಆ್ಯಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.
ಘಟನೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು ತಕ್ಷಣ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಹಿಮಾಚಲ ಪ್ರದೇಶ ಸರಕಾರಕ್ಕೆ ಸೂಚಿಸಿದ್ದಾರೆ.












Click it and Unblock the Notifications