• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?

|

ನವದೆಹಲಿ, ಫೆಬ್ರವರಿ.09: ಕೊರೊನಾ ವೈರಸ್ ಎಂಬ ಮಾರಕ ರೋಗ ಇದೀಗ ಚೀನಾದ ಮಟ್ಟಿಗೆ ಸೀಮಿತವಾಗಿ ಉಳಿದಿಲ್ಲ. ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಮಾರಕ ರೋಗ ಹರಡುತ್ತಿದ್ದು, ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ.

ಭಾರತವು ಸೇರಿದಂತೆ 25ಕ್ಕೂ ಅಧಿಕ ದೇಶಗಳು ಚೀನಾದಿಂದ ಕೊರೊನಾ ವೈರಸ್ ಎಂಬ ರೋಗವನ್ನು ಆಮದು ಮಾಡಿಕೊಳ್ಳಿತ್ತಿವೆಯಾ ಎಂಬ ಅನುಮಾನ ಹುಟ್ಟುಕೊಳ್ಳಿತ್ತಿದೆ. ಮಾರ್ಗ ಬದಲಾವಣೆ ಕೇಂದ್ರಗಳೇ ರೋಗ ಹರಡುವಿಕೆಗೆ ಮುಖ್ಯ ಕಾರಣವಾಗುತ್ತಿವೆ ಎಂದು ಜರ್ಮನಿಯ ಹ್ಯೂಬೋಲ್ಟ್ ವಿಶ್ವವಿದ್ಯಾಲಯದ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ ತಿಳಿಸಲಾಗಿದೆ.

CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!

ಕೊರೊನಾ ವೈರಸ್ ಹುಟ್ಟಿಕೊಂಡ ಚೀನಾ ದೇಶ ಒಂದರಲ್ಲೇ ಈವರೆಗೆ ಮಾರಕ ರೋಗಕ್ಕೆ 811ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. 40 ಸಾವಿರಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ತಗಲಿದೆ ಎಂದು ಹೇಳಲಾಗುತ್ತಿದೆ. ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ ಕೊರೊನಾ ವೈರಸ್ ಈ ಹಿಂದಿನ ಸಾರ್ಸ್ ರೋಗಕ್ಕಿಂತ ಹೆಚ್ಚು ಅಪಾಯಕಾರಿ ಹಾಗೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮಾರಕ ರೋಗ ಎಂದು ಅಧ್ಯಯನಗಳ ಪ್ರಕಾರ ಹೇಳಲಾಗುತ್ತಿದೆ.

ಚೀನಾದ ಅಕ್ಕಪಕ್ಕದ ರಾಷ್ಟ್ರಗಳಿಗೆ ಗಂಡಾಂತರ

ಚೀನಾದ ಅಕ್ಕಪಕ್ಕದ ರಾಷ್ಟ್ರಗಳಿಗೆ ಗಂಡಾಂತರ

ಚೀನಾದ ನೆರೆಹೊರೆ ರಾಷ್ಟ್ರಗಳಿಗೆ ಕೊರೊನಾ ವೈರಸ್ ನಿಂದ ಹೆಚ್ಚಿನ ಅಪಾಯವಿದೆ ಎಂದು ಜರ್ಮನಿಯ ಹ್ಯೂಬೋಲ್ಟ್ ವಿಶ್ವವಿದ್ಯಾಲಯದ ರಾಬರ್ಟ್ ಕೋಚ್ ಇನ್ಸ್ ಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಥೈಲ್ಯಾಂಡ್ ಮತ್ತು ಜಪಾನ್ ರಾಷ್ಟ್ರಗಳಲ್ಲಿ ಈವರೆಗೆ 25ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಇದರ ಜೊತೆಗೆ ದಕ್ಷಿಣ ಕೊರಿಯಾ ಕೂಡಾ ಕೊರೊನಾ ವೈರಸ್ ದಾಳಿಗೆ ನಲುಗಿ ಹೋಗುವ ಅಪಾಯವಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ವೈರಸ್ ಆಮದು ಮಾಡಿಕೊಳ್ಳುವುದರಲ್ಲಿ 17ನೇ ಸ್ಥಾನ

ವೈರಸ್ ಆಮದು ಮಾಡಿಕೊಳ್ಳುವುದರಲ್ಲಿ 17ನೇ ಸ್ಥಾನ

ಕೊರೊನಾ ವೈರಸ್ ಅನ್ನು ಆಮದು ಮಾಡಿಕೊಳ್ಳಲು ಆಗುವುದೇ ಎಂಬ ಪ್ರಶ್ನೆ ಮೂಡಬಹುದು. ಆದರೆ ನೇರವಾಗಿ ಅಲ್ಲ, ಪರೋಕ್ಷವಾಗಿ ಕೊರೊನಾ ವೈರಸ್ ಚೀನಾದಿಂದ ವಿಶ್ವದೆಲ್ಲಡೆ ರಫ್ತು ಆಗುತ್ತಿದೆ ಎಂದು ಅಧ್ಯಯನವು ತಿಳಿಸಿದೆ. ಏರ್ ಪೋರ್ಟ್ ಗಳ ಮೂಲಕ ಪ್ರಯಾಣಿಸುವ ಜನರಿಂದ ಜನರಿಗೆ ಸೋಂಕು ತಗಲುತ್ತಿದ್ದು, ಈ ಪಟ್ಟಿಯಲ್ಲಿ ಭಾರತಕ್ಕೆ 17ನೇ ಸ್ಥಾನ ನೀಡಲಾಗಿದೆ.

CoronaVirus Effect: ಬೆಂಗಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಸ್ಥಗಿತ!

ದೇಶದ ಏರ್ ಪೋರ್ಟ್ ಗೆ ಆಮದಾಗುತ್ತಿರುವ ಅಪಾಯ

ದೇಶದ ಏರ್ ಪೋರ್ಟ್ ಗೆ ಆಮದಾಗುತ್ತಿರುವ ಅಪಾಯ

ವಿಶ್ವದಲ್ಲೇ 4 ಸಾವಿರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಸಾವಿರಾರು ವಿಮಾನಗಳು ದಿನನಿತ್ಯ ಸಂಚರಿಸುತ್ತವೆ. ಈ 4 ಸಾವಿರ ವಿಮಾನ ನಿಲ್ದಾಣಗಳು ಪರೋಕ್ಷವಾಗಿ 25 ಸಾವಿರ ವಿಮಾನ ನಿಲ್ದಾಣಗಳ ಮಾರ್ಗ ಬದಲಾವಣೆ ಕೇಂದ್ರಗಳಾಗಿವೆ. ಈ ಕೇಂದ್ರಗಳ ಮೂಲಕವೇ ದೇಶಕ್ಕೆ ಕೊರೊನಾ ವೈರಸ್ ಆಮದು ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂಥ ಮಾರ್ಗ ಬದಲಾವಣೆ ಕೇಂದ್ರಗಳಂತೆ ಕೆಲಸ ಮಾಡುವ ಏರ್ ಪೋರ್ಟ್ ಗಳ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಭಾರತವು ಈ ಪ್ರಮಾಣವು ಶೇ.0.219 ರಷ್ಟಿದೆ.

ದೇಶದಲ್ಲಿರುವ ಈ ವಿಮಾನ ನಿಲ್ದಾಣಗಳಲ್ಲೇ ಅಪಾಯ!

ದೇಶದಲ್ಲಿರುವ ಈ ವಿಮಾನ ನಿಲ್ದಾಣಗಳಲ್ಲೇ ಅಪಾಯ!

ಭಾರತದ ಹಲವು ವಿಮಾನ ನಿಲ್ದಾಣಗಳು ಪ್ರಯಾಣಿಕರ ಮಾರ್ಗ ಬದಲಾವಣಾ ಕೇಂದ್ರಗಳಾಗಿವೆ. ಬೇರೆ ಬೇರೆ ದೇಶಗಳಿಗೆ ತೆರಳುವ ಪ್ರಯಾಣಿಕರು ಈ ಏರ್ ಪೋರ್ಟ್ ಗಳಲ್ಲಿ ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಇಂಥ ಸಂದರ್ಭಗಳಲ್ಲೇ ಸೋಂಕಿತರು ಭಾರತದಲ್ಲಿ ಕೊರೊನಾ ವೈರಸ್ ಹರಡುವಂತಾ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಬಂದು ಹಾಗೆ ಹೋಗುವ ಪ್ರಯಾಣಿಕರ ಉಸಿರಾಟ, ಕೆಮ್ಮು, ಶೀತ, ಸ್ಪರ್ಶದಿಂದ ಸಹ ಪ್ರಯಾಣಿಕರಿಗೂ ಸೋಂಕು ಹರಡುತ್ತಿದೆ.

ಕೊರೊನಾ ವೈರಸ್ ಹುಟ್ಟು ಮತ್ತು ಸಾವಿನ ಸರಣಿ ಸುತ್ತ ಒಂದು ವರದಿ

ದೇಶದಲ್ಲೂ ಮಾರ್ಗ ಬದಲಾವಣೆಯ ಏರ್ ಪೋರ್ಟ್ ಗಳಿವೆ

ದೇಶದಲ್ಲೂ ಮಾರ್ಗ ಬದಲಾವಣೆಯ ಏರ್ ಪೋರ್ಟ್ ಗಳಿವೆ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಕೂಡಾ ವಿದೇಶಿ ಪ್ರಯಾಣಿಕರ ಮಾರ್ಗ ಬದಲಾವಣೆ ಕೇಂದ್ರಗಳಲ್ಲಿ ಒಂದಾಗಿದೆ. ವಿಮಾನ ನಿಲ್ದಾಣದಲ್ಲಿ ಶೇ.0.066ರಷ್ಟು ಮಾರ್ಗ ಬದಲಿಸುವ ಪ್ರಯಾಣಿಕರು ಸಂಚರಿಸುತ್ತಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಅಪಾಯಕಾರಿ ಏರ್ ಪೋರ್ಟ್ ಪಟ್ಟಿಯಲ್ಲಿದ್ದು, ಶೇ.0.034ರಷ್ಟು ಪ್ರಯಾಣಿಕರು ಇಲ್ಲಿ ಮಾರ್ಗ ಬದಲಾವಣೆ ಮಾಡುತ್ತಾರೆ. ಇನ್ನು, ಇದರ ಪ್ರಮಾಣವು ಕೋಲ್ಕತ್ತಾದ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇ.0.020ರಷ್ಟಿದೆ. ಈ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈ, ಹೈದ್ರಾಬಾದ್, ಕೊಚ್ಚಿ ವಿಮಾನ ನಿಲ್ದಾಣಗಳೂ ಕೂಡಾ ಇವೆ.

ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?

ಭಾರತದಲ್ಲೂ ಕಾಣಿಸಿಕೊಂಡ ಮಾರಕ ಸೋಕು

ಭಾರತದಲ್ಲೂ ಕಾಣಿಸಿಕೊಂಡ ಮಾರಕ ಸೋಕು

ಜಗತ್ತಿನಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ನಿಂದ ಭಾರತವೂ ಕೂಡಾ ಮುಕ್ತವಾಗಿಲ್ಲ. ಕೇರಳದ ವಿವಿಧ ಕಡೆಗಳಲ್ಲಿ ಮೂರು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಸೋಂಕಿತರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಭಾರತಕ್ಕೆ ಕೊರೊನಾ ವೈರಸ್ ಹೊತ್ತು ತಂದವರು 150 ಮಂದಿ!

ವಿಶೇಷ ವಿಮಾನದ ಮೂಲಕ ಭಾರತಕ್ಕೆ ಆಗಮನ

ವಿಶೇಷ ವಿಮಾನದ ಮೂಲಕ ಭಾರತಕ್ಕೆ ಆಗಮನ

ಚೀನಾದಲ್ಲಿ ಕೊರೊನಾ ವೈರಸ್ ಪೀಡಿತ ನಗರದಲ್ಲಿ ನರಕ ಅನುಭವಿಸುತ್ತಿದ್ದ 647ಕ್ಕೂ ಅಧಿಕ ಭಾರತೀಯರನ್ನು ಕಳೆದ ವಾರ ವಿಶೇಷ ವಿಮಾನಗಳಲ್ಲಿ ದೇಶಕ್ಕೆ ವಾಪಸ್ ಕರೆ ತರಲಾಯಿತು. ದೆಹಲಿ ಹೊರವಲಯದ ಮಣಿಸರ್ ನಲ್ಲಿ ನಿರ್ಮಿಸಿರುವ ವಿಶೇಷ ವೈದ್ಯಕೀಯ ಶಿಬಿರದಲ್ಲಿ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!

ಕಳೆದ ವಾರ ವೀಸಾ ವಿತರಣೆಗೆ ನಿರ್ಬಂಧಿಸಿದ ಸರ್ಕಾರ

ಕಳೆದ ವಾರ ವೀಸಾ ವಿತರಣೆಗೆ ನಿರ್ಬಂಧಿಸಿದ ಸರ್ಕಾರ

ಚೀನಾದಲ್ಲಿ ಕೊರೊನಾ ವೈರಸ್ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶಿಸ್ತುಕ್ರಮವನ್ನು ಜಾರಿಗೊಳಿಸಿತ್ತು. ಚೀನಾ ಪ್ರಜೆಗಳಿಗೆ ಆನ್ ಲೈನ್ ನಲ್ಲಿ ವೀಸಾ ನೀಡುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇನ್ನು, ಭಾರತೀಯರು ಚೀನಾಗೆ ತೆರಳುವುದಕ್ಕೂ ಅನುಮತಿಯನ್ನು ನಿರಾಕರಿಸಲಾಗಿತ್ತು.

ಕೊರೊನಾ ವೈರಸ್‌ ಹರಡಲು ಪ್ಯಾಂಗೋಲಿನ್ ಕಾರಣ?

English summary
20 Countries Including India Import The Dangerous Coronavirus From China. Germany's Humboldt University And Robert Koch Institute Study Says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X