ಮೇ-ಜೂನ್‌ನಲ್ಲಿ 2 ಮಿಲಿಯನ್ ಭಾರತೀಯರ ವಾಟ್ಸಾಪ್ ಖಾತೆಗಳು ಬ್ಯಾನ್
ನವದೆಹಲಿ, ಜು. 16: ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಾನಿಕಾರಕ ನಡವಳಿಕೆ ಮತ್ತು ಸ್ಪ್ಯಾಮ್ ತಡೆಗಟ್ಟಲು "ಮೇ 15 ಮತ್ತು ಜೂನ್ 15 ರ ನಡುವೆ ವಾಟ್ಸಾಪ್ 2 ಮಿಲಿಯನ್ ಭಾರತೀಯ ಖಾತೆಗಳನ್ನು ನಿಷೇಧಿಸಿದೆ," ಎಂದು ಕಂಪನಿಯ ಮೊದಲ ಮಾಸಿಕ ವರದಿಯಲ್ಲಿ ತಿಳಿಸಿದೆ.
"ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವುದರತ್ತ ನಾವು ಹೆಚ್ಚು ಗಮನ ಹರಿಸಿದ್ದೇವೆ. ಹೆಚ್ಚಿನ ಅಥವಾ ಅಸಹಜವಾದ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ನಾವು ಸುಧಾರಿತ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಈ ರೀತಿಯ ದುರುಪಯೋಗಕ್ಕೆ ಪ್ರಯತ್ನಿದ ಹಿನ್ನೆಲೆ ಮೇ 15 ರಿಂದ ಜೂನ್ 15 ರವರೆಗೆ ಭಾರತದಲ್ಲಿಯೇ 2 ಮಿಲಿಯನ್ ಖಾತೆಗಳನ್ನು ನಿಷೇಧಿಸಿದ್ದೇವೆ," ಎಂದು ವಾಟ್ಸಾಪ್ ತಿಳಿಸಿದೆ.
"ಹೆಚ್ಚಾಗಿ ನಾವು ನಿಷೇಧಿಸಿದ ಖಾತೆಗಳು ಯಾವುದೇ ಬಳಕೆದಾರರ ದೂರಿನ ಆಧಾರದಿಂದ ಅಲ್ಲ. ಬದಲಾಗಿ ನಾವಾಗಿಯೇ ಹೆಚ್ಚು ಖಾತೆಗಳನ್ನು ನಿಷೇಧಿಸಿದ್ದೇವೆ," ಎಂದು ಫೇಸ್‌ಬುಕ್ ಒಡೆತನದ ಸಂಸ್ಥೆ ಹೇಳಿದೆ.

"ಕಂಪನಿಯು ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸುತ್ತದೆ. ಶೇ.95 ಕ್ಕಿಂತ ಹೆಚ್ಚು ಖಾತೆಗಳ ನಿಷೇಧವು, ಸ್ವಯಂಚಾಲಿತ ಅಥವಾ ಬೃಹತ್ ಸಂದೇಶ ಕಳುಹಿಸುವ ಅನಧಿಕೃತ ಬಳಕೆಯ ಕಾರಣಕ್ಕೆ ಮಾಡಲಾಗಿದೆ. ಕಂಪನಿಯು 2019 ರಿಂದ ಈ ಸಂಖ್ಯೆಗಳು ಗಣನೀಯವಾಗಿ ಹೆಚ್ಚಾಗಿದೆ. ಏಕೆಂದರೆ ಅದರ ವ್ಯವಸ್ಥೆಗಳು ಅತ್ಯಾಧುನಿಕತೆಯನ್ನು ಹೆಚ್ಚಿಸಿವೆ. ನಿಷೇಧಕ್ಕೆ ಒಳಪಟ್ಟ ಖಾತೆಗಳ ಪೈಕಿ ಹೆಚ್ಚಾಗಿ ಬೃಹತ್ ಅಥವಾ ಸ್ವಯಂಚಾಲಿತ ಸಂದೇಶಗಳನ್ನು ಕಳುಹಿಸಲು ಪ್ರಯತ್ನ ಮಾಡಿದ ಖಾತೆಗಳು ಆಗಿದೆ," ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಜಾಗತಿಕವಾಗಿ, ಪ್ಲಾಟ್‌ಫಾರ್ಮ್‌ನಲ್ಲಿ ನಿಷೇಧಿತ ಅಥವಾ ನಿಷ್ಕ್ರಿಯಗೊಳಿಸಿದ ಖಾತೆಗಳ ಮಾಸಿಕ ಸರಾಸರಿ ಸುಮಾರು 8 ಮಿಲಿಯನ್. ನಿಷೇಧ ಮೇಲ್ಮನವಿ, ಉತ್ಪನ್ನ ಬೆಂಬಲ, ಖಾತೆ ಬೆಂಬಲ, ಸುರಕ್ಷತಾ ಬೆಂಬಲ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದ ಅವಧಿಯಲ್ಲಿ ಕಂಪನಿಯು ಬಳಕೆದಾರರಿಂದ 345 ಕುಂದುಕೊರತೆಗಳನ್ನು ಸ್ವೀಕರಿಸಿದೆ. ಈ ಪೈಕಿ ಕಂಪನಿಯು 63 ನಿದರ್ಶನಗಳಲ್ಲಿ ಪರಿಹಾರ ಕ್ರಮ ಕೈಗೊಂಡಿದೆ.
ಖಾತೆಯನ್ನು ನಿಷೇಧ ಮಾಡಿದ ಬಳಿಕ ಅಧಿಕ ಮಂದಿ ವಾಟ್ಸಾಪ್ ಬಳಕೆದಾರರು ವಾಟ್ಸಾಪ್ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ. ಉತ್ಪನ್ನ ಅಥವಾ ಖಾತೆ ಬೆಂಬಲವನ್ನು ತಲುಪುವ ಮೂಲಕ ತಮ್ಮ ಖಾತೆಯನ್ನು ಪುನಃಸ್ಥಾಪಿಸುವ ಪ್ರಯತ್ನ ಬಳಕೆದಾರರು ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications