Get Updates
Get notified of breaking news, exclusive insights, and must-see stories!

ಇಂಡೋನೇಷ್ಯಾದ ಈ ಸಲಿಂಗ ಕಾಮಿಗಳಿಗೆ ಸಿಕ್ಕ ಶಿಕ್ಷೆಯೇನು?

ನವದೆಹಲಿ, ಮೇ 10: ಮಲೇಷ್ಯಾದ ಪ್ರಮುಖ ನಗರಗಳಲ್ಲೊಂದಾದ ಬಂಡಾ ಏಚ್ ನ ಹಾಸ್ಟೆಲೊಂದರಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಪುರುಷ ಸಲಿಂಗಿಗಳಿಗೆ ಅಲ್ಲಿನ ನ್ಯಾಯಾಲಯ ತಲಾ 80 ಛಡಿಯೇಟುಗಳ ಶಿಕ್ಷೆಯನ್ನು ವಿಧಿಸಿದೆ.

ಆದರೆ, ಆ ಶಿಕ್ಷೆಯು ಜಾರಿಯಾಗುವ ಮೊದಲೇ ಆಕ್ರೋಶ ಭರಿತ ಜನರ ಗುಂಪೊಂದು ಆ ಇಬ್ಬರನ್ನೂ ಹಣ್ಣುಗಾಯಿ ನೀರುಗಾಯಿ ಮಾಡಿದೆ.

2 gay men trashed by mob, to face 80 strokes of cane in Indonesia

20 ಹರೆಯದ ಈ ವಿದ್ಯಾರ್ಥಿಗಳು ತಾವಿದ್ದ ಹಾಸ್ಟೆಲ್ ನ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಮಾರ್ಚ್ ತಿಂಗಳ ಅಂತ್ಯದಲ್ಲಿ ಹಾಸ್ಟೆಲ್ ನ ಭದ್ರತಾ ಮಂಡಳಿಗಳು ರಾತ್ರಿ ವೇಳೆ ಹಾಸ್ಟೆಲ್ ನ ಪರಿವೀಕ್ಷಣೆಯಲ್ಲಿದ್ದಾಗ ಈ ವಿದ್ಯಾರ್ಥಿಗಳ ಪರಸ್ಪರ ಲೈಂಗಿಕತೆಯಲ್ಲಿ ತೊಡಗಿಕೊಂಡಿದ್ದನ್ನು ನೋಡಿ ತಕ್ಷಣವೇ ಅವರನ್ನು ಹಿಡಿದಿದ್ದರು.

ಇವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಸಲಿಂಗ ಕಾಮವು ಮಲೇಷ್ಯಾದಲ್ಲಿ ಚಾಲ್ತಿಯಲ್ಲಿರುವ ಶೆರಿಯಾ ಕಾನೂನಿನ ವಿರುದ್ಧವಾಗಿರುವುದರಿಂದ ಆ ಇಬ್ಬರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿತ್ತು.

ಮೇ 10ರಂದು ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸಲಿಂಗ ಕಾಮಿಗಳಿಗೆ ತಲಾ 80 ಛಡಿಯೇಟಿನ ಶಿಕ್ಷೆ ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+