ಮಧ್ಯಪ್ರದೇಶದಲ್ಲಿ ಮೊಬೈಲ್ ನುಂಗಿದ 15 ವರ್ಷದ ಬಾಲಕಿ, ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ವೈದ್ಯರು
ಭೋಪಾಲ್, ಏಪ್ರಿಲ್ .07: 15 ವರ್ಷದ ಬಾಲಕಿಯೊಬ್ಬರು ಮೊಬೈಲ್ ನುಂಗಿದ ಘಟನೆ ನಡೆದಿದ್ದು, ಬಳಿಕ ಗ್ವಾಲಿಯರ್ ಜಿಲ್ಲೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ ಫೋನ್ ಹೊರತೆಗೆದಿದ್ದಾರೆ. ಭಿಂಡ್ ಜಿಲ್ಲೆಯ ಅಮಯಾನ್ ಪ್ರದೇಶದ ನಿವಾಸಿಯಾಗಿರುವ ಬಾಲಕಿ ಯಾವುದೋ ವಿಷಯಕ್ಕೆ ಕೋಪಗೊಂಡು ತನ್ನ ಕೀಪ್ಯಾಡ್ ಮೊಬೈಲ್ ಫೋನ್ ನುಂಗಿದ್ದಾರೆ.
ಸಹೋದರನೊಂದಿಗಿನ ಜಗಳವಾಡಿದ್ದ ಬಾಲಕಿ, ತನ್ನ ಕೀಪ್ಯಾಡ್ ಮೊಬೈಲ್ ಫೋನ್ ನುಂಗಿದ್ದರು. ನಂತರ ಕುಟುಂಬ ಸದಸ್ಯರು ಬಾಲಕಿಯನ್ನು ಭಿಂಡ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪ್ರಕರಣದ ಗಂಭೀರತೆಯನ್ನು ನೋಡಿದ ವೈದ್ಯರು ಬಾಲಕಿಯನ್ನು ಗ್ವಾಲಿಯರ್‌ಗೆ ಕಳುಹಿಸಿದ್ದಾರೆ. ಕುಟುಂಬದವರು ತಕ್ಷಣ ಗ್ವಾಲಿಯರ್‌ನ ಜಯ ಆರೋಗ್ಯ ಆಸ್ಪತ್ರೆಗೆ ತಲುಪಿದ್ದಾರೆ. ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ ಬಾಲಕಿಯ ಹೊಟ್ಟೆಯಲ್ಲಿ ಮೊಬೈಲ್ ಸಿಕ್ಕಿಹಾಕಿಕೊಂಡಿರುವುದು ಪತ್ತೆಯಾಗಿದೆ.

ವೈದ್ಯರು ಮೊಬೈಲ್ ತೆಗೆಯಲು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಸುಮಾರು ಒಂದು ಗಂಟೆಯ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಬಾಲಕಿಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆದರು. ಮೊಬೈಲ್ ನುಂಗಿ ಆಸ್ಪತ್ರೆಗೆ ದಾಖಲಾದ ಮತ್ತು ಶಸ್ತ್ರಚಿಕಿತ್ಸೆ ಮಾಡಿ ಮೊಬೈಲ್ ಹೊರತೆಗೆದ ಮೊದಲ ಪ್ರಕರಣ ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಯ ಆರೋಗ್ಯ ಆಸ್ಪತ್ರೆಯ ಅಧೀಕ್ಷಕ ಡಾ.ಆರ್.ಕೆ.ಎಸ್.ಧಕಡ್ ಮಾತನಾಡಿ, "ಭಿಂಡ್ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಮೊಬೈಲ್ ನುಂಗಿದ ಪ್ರಕರಣ ನಡೆದಿದ್ದು, ಕೂಡಲೇ ಭಿಂಡ್ ವೈದ್ಯರು ಆಕೆಯನ್ನು ಗ್ವಾಲಿಯರ್‌ಗೆ ಕಳುಹಿಸಿದ್ದು ಒಳ್ಳೆಯದಾಯಿತು. ಇಲ್ಲಿನ ವೈದ್ಯರು ಆಪರೇಷನ್ ಮಾಡಿ ಆಕೆಯ ಹೊಟ್ಟೆಯಿಂದ ಮೊಬೈಲ್ ಹೊರತೆಗೆದಿದ್ದಾರೆ. ಹುಡುಗಿ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾಳೆ" ಎಂದು ತಿಳಿಸಿದ್ದಾರೆ.

''ತಕ್ಷಣ ಕ್ರಮ ಕೈಗೊಂಡು ಬಾಲಕಿಯನ್ನು ರಕ್ಷಿಸಿದ್ದು ಆಸ್ಪತ್ರೆಯ ಸಾಧನೆ ಎಂದು ಹೇಳಬಲ್ಲೆ. ಆಪರೇಷನ್ ಮಾಡಿದ ವೈದ್ಯರನ್ನು ನಾನು ಅಭಿನಂದಿಸುತ್ತೇನೆ. ಸಮಯಕ್ಕೆ ಸರಿಯಾಗಿ ರೋಗಿಯನ್ನು ಗ್ವಾಲಿಯರ್‌ಗೆ ಕಳುಹಿಸಿದ ವೈದ್ಯರಿಗೂ ಅಭಿನಂದನೆಗಳು. ನಾವು ತ್ವರಿತವಾಗಿ ಕ್ರಮ ಕೈಗೊಂಡಿದ್ದೇವೆ. ಇದು ಒಂದು ಸಾಧನೆಯಾಗಿದೆ . ಬಾಲಕಿಗೆ ಸುಮಾರು 15 ವರ್ಷ ವಯಸ್ಸು" ಎಂದು ಹೇಳಿದ್ದಾರೆ.












Click it and Unblock the Notifications