ಹೈದರಾಬಾದ್ ಟು ಆಸ್ಟ್ರೇಲಿಯಾಗೆ ನಾಯಿ ಕೊಂಡೊಯ್ಯಲು 15 ಲಕ್ಷ ಖರ್ಚು ಮಾಡಿದ ದಂಪತಿ: ಸೋಷಿಯಲ್ ಮೀಡಿಯಾ ಟ್ರೆಂಡ್
ನಾಯಿ ಅಂದ್ರೆ ನಮ್ಮ ಪ್ರಾಣ ಅಂತಾರೆ ಕೆಲವರು, ಇನ್ನೂ ಕೆಲವರು ತಾವು ಸಾಕಿದ ನಾಯಿಗಳಿಗಾಗಿ ಹಣ ನೀರಿನಂತೆ ಖರ್ಚು ಮಾಡುತ್ತಾರೆ. ಹೊರ ದೇಶಗಳಲ್ಲಿ ಮಾತ್ರ ಅಲ್ಲ ಭಾರತದಲ್ಲಿ ಕೂಡ ಇದೇ ರೀತಿ ಸಂಸ್ಕೃತಿ ಬೆಳೆದು ಬರುತ್ತಿದೆ, ಶ್ವಾನಗಳಿಗೆ ಐಷಾರಾಮಿ ಜೀವನ ಕೊಡುತ್ತಾರೆ ಮಾಲೀಕರು. ಹೀಗೆ ಇದ್ದಾಗ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಇನ್ನೂ ವಿಚಿತ್ರ ಘಟನೆಯೊಂದು ಈಗ ನಡೆದಿದೆ. ಈ ಘಟನೆ ಕೂಡ ಪ್ರೀತಿಯ ಶ್ವಾನಕ್ಕೆ ಸಂಬಂಧಿಸಿದೆ, ತಾವು ಸಾಕಿದ ನಾಯಿಗಾಗಿ ಒಂದೇ ಬಾರಿಗೆ 15 ಲಕ್ಷ ರೂಪಾಯಿ ಖರ್ಚು ಮಾಡಿ ಗಂಡ & ಹೆಂಡತಿ ಫುಲ್ ಫೇಮಸ್ ಆಗಿದ್ದಾರೆ.
ಪ್ರೀತಿಗೆ ಯಾವುದೇ ಗಡಿ ಇರುವುದಿಲ್ಲ ಹಾಗೂ ಮಿತಿ ಕೂಡ ಇರುವುದಿಲ್ಲ ಎನ್ನಬಹುದು. ಅದರಲ್ಲೂ ಮನುಷ್ಯರು ಮತ್ತು ನಾಯಿಗಳ ನಡುವೆ ಸುಮಾರು 30,000 ವರ್ಷಗಳಿಂದ ಕೂಡ ಈ ಅನುಬಂಧವು ಬೆಳೆದು ಬಂದಿದೆ ಎನ್ನುತ್ತಾರೆ ಇತಿಹಾಸಕಾರರು. ಹೀಗಿದ್ದಾಗ ನಾಯಿ ಮಾತ್ರವಲ್ಲ ಜನ ತಾವು ಸಾಕಿರುವ ಎಲ್ಲಾ ರೀತಿಯ ಸಾಕುಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಾರೆ. ಅಲ್ಲದೆ ತಮ್ಮ ಶ್ವಾನಕ್ಕೆ ಏನು ಬೇಕೋ ಎಲ್ಲವನ್ನೂ ಮಾಡುತ್ತಾರೆ. ಹೀಗಿದ್ದಾಗ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಸಾಕು ನಾಯಿಗೆ ಗಂಡ ಮತ್ತು ಹೆಂಡತಿ 15 ಲಕ್ಷ ರೂಪಾಯಿ ಖರ್ಚು ಮಾಡಿರುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

15 ಲಕ್ಷ ರೂಪಾಯಿ ಖರ್ಚು ಯಾಕೆ?
ಹೌದು, ಹೈದರಾಬಾದ್ ಮೂಲದ ಗಂಡ & ಹೆಂಡತಿ ದೂರದ ದೇಶ ಆಸ್ಟ್ರೇಲಿಯಾಗೆ ವಲಸೆ ಹೋಗಿ ಸೆಟಲ್ ಆಗಿದ್ದಾರೆ. ಹೀಗಿದ್ದಾಗ ಗಂಡ & ಹೆಂಡತಿಗೆ ತಮ್ಮ ಸಾಕು ನಾಯಿ ಬಗ್ಗೆ ವಿಪರೀತ ಚಿಂತೆಯೇ ಶುರುವಾಗಿತ್ತಂತೆ. ಕೊನೆಗೆ ತಾವು ಸಾಕಿದ್ದ ಶ್ವಾನ ಬಿಟ್ಟು ಇರಲು ಆಗದೆ ಒದ್ದಾಡಿದ್ದಾರೆ ಈ ಗಂಡ & ಹೆಂಡತಿ. ಹೇಗಾದರೂ ಮಾಡಿ ತಮ್ಮ ಪ್ರೀತಿಯ ನಾಯಿಯನ್ನು ತಾವು ಇರುವ ಆಸ್ಟ್ರೇಲಿಯಾಗೆ ತಂದು ಸಾಕಬೇಕು ಎಂದು ನಿರ್ಧಾರ ಮಾಡಿದ್ದರಂತೆ.
ಆದರೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ, ಯಾಕೆ ಅಂದ್ರೆ ಭಾರತದಿಂದ ಆಸ್ಟ್ರೇಲಿಯಾಗೆ ನಾಯಿ ಶಿಫ್ಟ್ ಮಾಡುವ ಕೆಲಸ ದುಡ್ಡಿನ ಜೊತೆಗೆ ಸವಾಲು ಕೂಡ ಹುಟ್ಟುಹಾಕಿತ್ತು. ಹೀಗಿದ್ದರೂ ಈ ದಂಪತಿ 15 ಲಕ್ಷ ರೂಪಾಯಿ ಖರ್ಚು ಮಾಡಿ, ತಮ್ಮ ಪ್ರೀತಿಯ ಆ ನಾಯಿಯನ್ನ ಆಸ್ಟ್ರೇಲಿಯಾಗೆ ಕರೆತಂದು ಕುಣಿದಾಡಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ವಿಡಿಯೋ ಕೂಡ ಪೋಸ್ಟ್ ಮಾಡಿ ಖುಷಿಪಟ್ಟಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುವ ಜೊತೆಗೆ ಭಾರಿ ಚರ್ಚೆ ಹುಟ್ಟುಹಾಕಿದೆ.
15 ಲಕ್ಷ ರೂಪಾಯಿ ಬಗ್ಗೆ ಚರ್ಚೆ
'ಕಹಾನಿ ಆಫ್ ಟೇಲ್ಸ್' ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ನಾಯಿ ಸ್ಟೋರಿ ಈಗ ಫುಲ್ ವೈರಲ್ ಆಗುತ್ತಿದೆ. ಆಸ್ಟ್ರೇಲಿಯಾ ದೇಶವು ಭಾರತದಿಂದ ನಾಯಿಗಳನ್ನ ನೇರ ಆಮದು ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ. ಏಕೆಂದರೆ ರೇಬೀಸ್ ಮುಕ್ತ ದೇಶದಲ್ಲಿ 6 ತಿಂಗಳ ಕಾಲ ಕಾಯುವ ಅವಧಿಯು ಇರುತ್ತದೆ. ಇದೇ ಕಾರಣಕ್ಕೆ ಹೈದರಾಬಾದ್ ಮೂಲದ ಗಂಡ & ಹೆಂಡತಿ ಭಾರತದಿಂದ ಆಸ್ಟ್ರೇಲಿಯಾ ದೇಶಕ್ಕೆ ತಮ್ಮ ಪ್ರೀತಿಯ ನಾಯಿ ಕರೆತರಲು ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ವೇದಿಕೆಯನ್ನು ಕೂಡ ಒದಗಿಸಿದೆ. ಹಾಗೇ ವರೈಟಿ ವೆರೈಟಿ ಆಗಿ ಜನರು ಕಾಲು ಎಳೆಯುತ್ತಿದ್ದು, ನಾಯಿಗಾಗಿ ಇಷ್ಟು ಖರ್ಚು ಬೇಕಿತ್ತಾ? ಅಂತಾ ಪ್ರಶ್ನೆ ಕೇಳುವವರು ಕೂಡ ಹೆಚ್ಚಾಗಿದ್ದಾರೆ.












Click it and Unblock the Notifications