IPL 2023: ಐಪಿಎಲ್ 2023 ರ ಸಮಯದಲ್ಲಿ ನಿಮಿಷಕ್ಕೆ 212 ಬಿರಿಯಾನಿ ವಿತರಿಸಿದ ಸ್ವಿಗ್ಗಿ!
ನವದೆಹಲಿ, ಮೇ. 30: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ 2023 ರ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡ ಐದನೇ ಬಾರಿ ಕಪ್ ಹಿಡಿದು ಸಂಭ್ರಮಿಸಿದೆ. ಈ 16 ಸೀಸನ್‌ನ ಕ್ರಿಕೆಟ್ ಉನ್ಮಾದದ ನಡುವೆ ಕ್ರಿಕಿಟ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿ ಬಿರಿಯಾನಿ ಹೊರಹೊಮ್ಮಿದೆ ಎಂದು ಸ್ವಿಗ್ಗಿ ಘೋಷಿಸಿದೆ.
ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿ, ಸೋಮವಾರ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಸೀಸನ್ ವೇಳೆ ಬಿರಿಯಾನಿಯ 12 ಮಿಲಿಯನ್ ಆರ್ಡರ್‌ಗಳನ್ನು ಪಡದಿರುವುದಾಗಿ, ತನ್ನ ಅಪ್ಲಿಕೇಶನ್‌ನಲ್ಲಿ ನಿಮಿಷಕ್ಕೆ 212 ಬಿರಿಯಾನಿಗಳನ್ನು ವಿತರಿಸಿರುವುದಾಗಿದೆ ಎಂದು ಬಹಿರಂಗಪಡಿಸಿದೆ.

"212 BPM (ನಿಮಿಷಕ್ಕೆ ಬಿರಿಯಾನಿಗಳು) ನಲ್ಲಿ 12 ಮಿಲಿಯನ್‌ಗಿಂತಲೂ ಹೆಚ್ಚು ಆರ್ಡರ್‌ಗಳೊಂದಿಗೆ ಈ ಋತುವಿನಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರ ಪದಾರ್ಥಕ್ಕಾಗಿ ಬಿರಿಯಾನಿ ಟ್ರೋಫಿಯನ್ನು ಗೆದ್ದಿದೆ" ಎಂದು ಸ್ವಿಗ್ಗಿ ಕಂಪನಿ ಘೋಷಿಸಿದೆ.
biryani wins the trophy for the most ordered food item this season with over 12 million orders at 212 BPM (biryanis per minute) 🏆
— Swiggy (@Swiggy) May 29, 2023
2020 ರ ಐಪಿಎಲ್ ಸಮಯದಲ್ಲಿ, ಚಿಕನ್ ಬಿರಿಯಾನಿ, ಬಟರ್ ನಾನ್ ಮತ್ತು ಮಸಾಲಾ ದೋಸೆ ಮೊದಲ ಮೂರು ಆದ್ಯತೆಯ ಭಕ್ಷ್ಯಗಳೊಂದಿಗೆ ಆರ್ಡರ್‌ಗಳಲ್ಲಿ ಶೇಕಡಾ 30 ರಷ್ಟು ಏರಿಕೆ ಕಂಡಿದೆ ಎಂದು ಸ್ವಿಗ್ಗಿ ಹೇಳಿದೆ. ಐಪಿಎಲ್ ವಿಶೇಷ ಮೆನುಗಳು, ವಿಶೇಷವಾಗಿ ಕಾಂಬೊಗಳು ಹಿಟ್ ಆಗಿವೆ ಎಂದು ಕಂಪನಿಯು ಹಂಚಿಕೊಂಡಿದೆ.
ಇನ್ನು, 2023 ರ ಹೊಸ ವರ್ಷದ ಮುನ್ನಾದಿನದಂದು, ಸ್ವಿಗ್ಗಿ ಸುಮಾರು 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು 2.5 ಲಕ್ಷಕ್ಕೂ ಹೆಚ್ಚು ಪಿಜ್ಜಾ ಆರ್ಡರ್‌ಗಳನ್ನು ಪಡೆದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆಹಾರ ತಂತ್ರಜ್ಞಾನದ ಬೃಹತ್ ಕಂಪನಿಯ ಟ್ವಿಟರ್ ಸಮೀಕ್ಷೆಯ ಪ್ರಕಾರ, ಹೈದರಾಬಾದಿ ಬಿರಿಯಾನಿಗಾಗಿ ಶೇಕಡಾ 76.2 ರಷ್ಟು ಆರ್ಡರ್‌ಗಳು ಬಂದಿವೆ. ನಂತರ ಲಕ್ನೋವಿ ಬಿರಿಯಾನಿಗಾಗಿ ಶೇಕಡಾ 14 ಮತ್ತು ಕೋಲ್ಕತ್ತಾ ಬಿರಿಯಾನಿಗಾಗಿ ಶೇಕಡಾ 9.8 ರಷ್ಟು ಆರ್ಡರ್‌ಗಳು ಬಂದಿವೆ.

ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟದ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬವರ್ಚಿ 2021 ರ ಹೊಸ ವರ್ಷದ ಮುನ್ನಾದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿತ್ತು. ಡಿಸೆಂಬರ್ 31, 2022 ಕ್ಕೆ ಬೇಡಿಕೆಯನ್ನು ಪೂರೈಸಲು 15 ಟನ್ ಸವಿಯಾದ ಪದಾರ್ಥವನ್ನು ಸಿದ್ಧಪಡಿಸಿದೆ ಎಂದು ವರದಿ ಸೇರಿಸಲಾಗಿದೆ.
2022 ರಲ್ಲಿ ಬಿರಿಯಾನಿಯು ಪ್ರೇಕ್ಷಕರ ನೆಚ್ಚಿನದಾಗಿದೆ, ಸತತವಾಗಿ ಏಳನೇ ವರ್ಷವೂ ಹೆಚ್ಚು ಆರ್ಡರ್ ಮಾಡಿದ ತಿಂಡಿಯಾಗಿದೆ. ಪ್ರತಿ ಸೆಕೆಂಡಿಗೆ 2.28 ಆರ್ಡರ್‌ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ವಿಗ್ಗಿ ಹೇಳಿದೆ.












Click it and Unblock the Notifications