ಚಲಿಸುತ್ತಿದ್ದ ರೈಲಿನಲ್ಲಿ ಸ್ಫೋಟ, 11 ಪ್ರಯಾಣಿಗರಿಗೆ ಗಾಯ, ಓರ್ವ ಗಂಭೀರ

ಗುವಾಹಾತಿ, ಡಿಸೆಂಬರ್ 01 : ಅಸ್ಸಾಂನ ಉಡಲಗುರಿ ಜಿಲ್ಲೆಯಲ್ಲಿ ಇಂಟರ್ ಸಿಟಿ ರೈಲಿನಲ್ಲಿ ಶನಿವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಹನ್ನೊಂದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಾಮಾಕ್ಯ-ದೇಕರಗಾಂವ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ, ಗುವಾಹಾತಿಯಿಂದ 95 ಕಿ.ಮೀ. ದೂರದಲ್ಲಿರುವ ಹರಿಸಿಂಗ ರೈಲ್ವೆ ನಿಲ್ದಾಣದ ಬಳಿ, 7.04 ಗಂಟೆಗೆ ಸ್ಫೋಟ ಸಂಭವಿಸಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆ ವಕ್ತಾರ ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.

11 injured in explosion in Intercity Train In Assam

ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟ ಹೇಗೆ ಸಂಭವಿಸಿದೆ ಎಂದು ತನಿಖೆಯಿಂದ ತಿಳಿದುಬರಬೇಕಿದೆ. ಆದರೆ, ರೈಲು ಚಲಿಸುತ್ತಿದ್ದಾಗಲೇ ಸ್ಫೋಟವಾಗಿದೆ.

11 injured in explosion in Intercity Train In Assam

ಕಳೆದೆರಡು ವಾರಗಳಲ್ಲಿ ಅಸ್ಸಾಂನಲ್ಲಿ ಸಂಭವಿಸಿದ ಎರಡನೇ ರೈಲು ದುರಂತವಿದು. ನವೆಂಬರ್ 21ರಂದು ತೀತಾಬಾರ್ ಮತ್ತು ಮರಿಯಾನಾ ರೈಲ್ವೆ ನಿಲ್ದಾಣದ ನಡುವೆ ಆನೆಯೊಂದಕ್ಕೆ ಡಿಕ್ಕಿ ಹೊಡೆದ ನಂತರ ಗುವಾಹಾತಿ ಮತ್ತು ಲಿಡೋ ಇಂಟರ್ ಸಿಟಿ ಎಕ್ಸ್ ಪ್ರೆಸ್ ಹಳಿತಪ್ಪಿತ್ತು. ಆ ಅಪಘಾತದಲ್ಲಿ ಯಾರಿಗೂ ಗಾಯವಾಗದಿದ್ದರೂ, ಅಪಘಾತಕ್ಕೊಳಗಾಗಿದ್ದ ಆನೆ ಸಾವನ್ನಪ್ಪಿತ್ತು.

ಅಸ್ಸಾಂ ಶಿವಸಾಗರ್ ಜಿಲ್ಲೆಯಲ್ಲಿ ನವೆಂಬರ್ 22ರಂದು ಜನನಿಬಿಡ ಮಾರುಕಟ್ಟೆಯಲ್ಲಿ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಅಸುನೀಗಿದ್ದರು. ಆ ಘಟನೆಯ ಹಿಂದ ಉಲ್ಫಾ ಉಗ್ರರ ಕೈವಾಡ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+