ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಕೋಟಿಗೆ ಗವರ್ನರ್‌ಗರಿ, ರಾಜ್ಯಸಭೆ ಸೀಟು ಮಾರಾಟ ದಂಧೆ ಬಯಲಿಗೆ!

|
Google Oneindia Kannada News

ನವದೆಹಲಿ,ಜುಲೈ. 25: 100 ಕೋಟಿ ರೂಪಾಯಿ ಮೊತ್ತದ ಹಣ ನೀಡಿದರೆ ರಾಜ್ಯಸಭೆಯಲ್ಲಿ ಸ್ಥಾನ ಕೊಡಿಸುವ ಹಾಗೂ ಗವರ್ನರ್‌ ಆಗಿ ನೇಮಕ ಮಾಡುವ ಭರವಸೆ ನೀಡಿ ವಂಚಿಸಿದ್ದ ನಾಲ್ವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ಬಂಧಿಸಿದೆ.

ಬಂಧಿತವಾಗಿರುವ ಆರೋಪಿಗಳನ್ನು ಕಮಲಾಕರ್ ಪ್ರೇಮಕುಮಾರ್ ಬಂಡಗಾರ್, ಅಭಿಷೇಕ್ ಬೂರಾ, ಮೊಹಮ್ಮದ್ ಐಜಾಜ್ ಖಾನ್, ರವೀಂದ್ರ ವಿಠಲ್ ನಾಯ್ಕ್ ಮತ್ತು ಇತರರು ಎಂದು ಗುರುತಿಸಲಾಗಿದೆ.

ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನವದೆಹಲಿ: ಜೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಎಫ್‌ಐಆರ್‌ನಲ್ಲಿ ಹೇಳಿರುವ ಪ್ರಕಾರ, ಮಹಾರಾಷ್ಟ್ರದ ಕಮಲಾಕರ್ ಪ್ರೇಮಕುಮಾರ್ ಬಂಡಗರ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬರು ವಂಚನೆಯ ಏಕೈಕ ಉದ್ದೇಶದಿಂದ ತಾನು ನವದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ನಿಯೋಜಿಸಲಾದ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ರಾಜ್ಯಸಭಾ ಸ್ಥಾನ ಕೊಡಿಸುವ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂಬ ಸುಳಿವು ಸಿಕ್ಕಿದೆ ಎಂದು ಸಿಬಿಐ ಉಲ್ಲೇಖಿಸಿದೆ.

ಖಾಸಗಿ ವ್ಯಕ್ತಿಗಳಿಗೆ ರಾಜ್ಯಸಭೆಯಲ್ಲಿ ಸೀಟುಗಳ ವ್ಯವಸ್ಥೆ, ರಾಜ್ಯಪಾಲರ ನೇಮಕ, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಅಡಿಯಲ್ಲಿ ಸರ್ಕಾರ ನಡೆಸುವ ವಿವಿಧ ಸಂಸ್ಥೆಗಳಲ್ಲಿ ಭಾರಿ ಹಣ ನೀಡಿದರೆ ಅಧ್ಯಕ್ಷಗಿರಿ ಕೊಡಿಸುವ ಸುಳ್ಳು ಭರವಸೆ ನೀಡುವ ಮೂಲಕ ವಂಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕಮಲಾಕರ್ ತನ್ನ ಸಂಗಡಿಗರೊಂದಿಗೆ ಸೇರಿ ರಾಜ್ಯಸಭೆಗೆ ಸ್ಥಾನ ಕೊಡಿಸುವ ಭರವಸೆಯೊಂದಿಗೆ ಕೆಲವು ವ್ಯಕ್ತಿಗಳಿಗೆ 100 ಕೋಟಿ ರೂಪಾಯಿ ಮೊತ್ತದ ದೊಡ್ಡ ಹಣ ಪಡೆದು ವಂಚಿಸುವ ಪ್ರಯತ್ನಗಳನ್ನು ಮಾಡುತ್ತಿದ್ದನು ಎಂದು ಮೂಲಗಳು ತಿಳಿಸಿವೆ.

ಕೆಲವು ಕೆಲಸಗಳಿಗಾಗಿ ನೇರವಾಗಿ ಅಥವಾ ಅಭಿಷೇಕ್ ಬೂರಾ, ಕಮಲಾಕರ್ ಪ್ರೇಮಕುಮಾರ್ ಬಂಡಗಾರ್ ಅವರಂತಹ ಮಧ್ಯವರ್ತಿಗಳ ಮೂಲಕ ತಮ್ಮ ಬಳಿಗೆ ಬರುವವರ ಮೇಲೆ ಪ್ರಭಾವ ಬೀರಲು ಈ ದಂಧೆ ಆಗಾಗ್ಗೆ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರ ಹೆಸರನ್ನು ಉಲ್ಲೇಖಿಸಿತ್ತು ಎಂದು ಮೂಲಗಳು ತಿಳಿಸಿವೆ.

ಉನ್ನತ ನೇಮಕಾತಿಗಳಲ್ಲಿ ಪ್ರಮುಖ ಪಾತ್ರ

ಉನ್ನತ ನೇಮಕಾತಿಗಳಲ್ಲಿ ಪ್ರಮುಖ ಪಾತ್ರ

ಅಭಿಷೇಕ್ ಬೂರಾ, ಕಮಲಾಕರ್, ಪ್ರೇಮ್‌ಕುಮಾರ್ ಬಂಡಗರ್ ಕೆಲವು ಜನರೊಂದಿಗೆ ತಮ್ಮ ಸಂಪರ್ಕಗಳನ್ನು ಬಳಸಲು ಮತ್ತು ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳನ್ನು ಸಂಯೋಜಿಸಲು ಸಂಚು ರೂಪಿಸಿದ್ದರು. ಉನ್ನತ ನೇಮಕಾತಿಗಳಲ್ಲಿ ಪ್ರಮುಖ ಪಾತ್ರ ವಹಿಸಲು ಮುಂದಾಗಿದ್ದರು ಎಂದು ತನಿಖೆಗೆ ಸಂಬಂಧಿಸಿರುವ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ವಂಚನೆ ಮಾಡುವ ಕೆಲಸ ತರಲು ಸೂಚನೆ

ವಂಚನೆ ಮಾಡುವ ಕೆಲಸ ತರಲು ಸೂಚನೆ

ಹಿರಿಯ ಸಿಬಿಐ ಅಧಿಕಾರಿಯಂತೆ ಸೋಗು ಹಾಕೊಕೊಂಡು ಬಂಡಗಾರ್, ಮೊಹಮ್ಮದ್ ಐಜಾಜ್ ಖಾನ್ ಸೇರಿದಂತೆ ಇತರ ಆರೋಪಿಗಳಿಗೆ ಅವರು ಬೃಹತ್ ಮೊತ್ತಕ್ಕೆ ಪ್ರತಿಯಾಗಿ ವಂಚನೆ ಮಾಡಬಹುದಾದ ಯಾವುದೇ ರೀತಿಯ ಕೆಲಸವನ್ನು ತರಲು ಹೇಳಿದರು ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಕಾರ್ಯಕರ್ತರ ಹೆಸರು ಬಳಕೆ

ರಾಜಕೀಯ ಕಾರ್ಯಕರ್ತರ ಹೆಸರು ಬಳಕೆ

ಕಮಲಾಕರ್ ಪ್ರೇಮಕುಮಾರ್ ಬಂಡಗರ್, ಮಹೇಂದ್ರ ಪಾಲ್ ಅರೋರಾ, ಎಂ.ಡಿ. ಅಲಾಜ್ ಖಾನ್ ಮತ್ತು ರವೀಂದ್ರ ವಿಠಲ್ ನಾಯ್ಕ್ ಅವರು ನೇರವಾಗಿ ಅಥವಾ ಅಭಿಷೇಕ್ ಬೂರಾ ಅವರಂತಹ ಮಧ್ಯವರ್ತಿ ಮೂಲಕ ಕೆಲವು ಕೆಲಸಗಳಿಗಾಗಿ ಜನರು ತಮ್ಮ ಬಳಿಗೆ ಬರುವಂತೆ ಮಾಡಲು ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರ ಹೆಸರನ್ನು ಆಗಾಗ್ಗೆ ಹೇಳುತ್ತಿದ್ದರು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಿದೆ.

ಪೊಲೀಸ್‌ ಅಧಿಕಾರಿಗಳಿಗೆ ಬೆದರಿಕೆ

ಪೊಲೀಸ್‌ ಅಧಿಕಾರಿಗಳಿಗೆ ಬೆದರಿಕೆ

ಕರ್ಮಲಾಕರ್ ಪ್ರೇಮಕುಮಾರ್ ಬಂಡಗಾರ್ ಎಂಬಾತ ಸಿಬಿಐನ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿಕೆ ನೀಡಿದ್ದು, ತನಗೆ ತಿಳಿದಿರುವ ಕೆಲವರ ಪರ ಒಲವು ತೋರಿ, ಚಾಲ್ತಿಯಲ್ಲಿರುವ ಪ್ರಕರಣಗಳ ತನಿಖೆಯ ಮೇಲೆ ಪ್ರಭಾವ ಬೀರಿ ಪೊಲೀಸ್ ಠಾಣೆಗಳಲ್ಲಿ ನಿಯೋಜನೆಗೊಂಡ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Recommended Video

ಆಸ್ಟ್ರೇಲಿಯಾ ಕ್ರಿಕೆಟ್ ಲೋಕಕ್ಕೆ ಸಾವಿರ ಕೋಟಿ ಲಾಭ ಮಾಡಿಕೊಟ್ಟ ಪಂತ್!! | Oneindia Kannada

English summary
The Central Bureau of Investigation (CBI) on Monday arrested four people who cheated by promising to give them a seat in the Rajya Sabha and to be appointed as the governor on payment of Rs 100 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X