ಗುಜರಾತ್‌ನಲ್ಲಿ ಶೇ. 10ರಷ್ಟು ಸಿಎನ್‌ಜಿ, ಪಿಎನ್‌ಜಿ ವ್ಯಾಟ್ ಕಡಿತ
ಗಾಂಧಿನಗರ, ಅಕ್ಟೋಬರ್ 17: ಗುಜರಾತ್ ಸರ್ಕಾರವು ನೈಸರ್ಗಿಕ ಅನಿಲ (ಸಿಎನ್‌ಜಿ) ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.
ರಾಜ್ಯ ಸಚಿವ ಜಿತು ವಘಾನಿ ಈ ಘೋಷಣೆ ಮಾಡಿದ್ದು, ಇದು 2022 ರ ಅಂತ್ಯದ ವೇಳೆಗೆ ನಡೆಯಲಿರುವ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಅನ್ವಯವಾಗಲಿದೆ. ಸಿಎನ್‌ಜಿ ಮೇಲಿನ ವ್ಯಾಟ್ ಕಡಿತದ ನಂತರ, ಗ್ರಾಹಕರು ಪ್ರತಿ ಕೆಜಿಗೆ 6 ರಿಂದ 7 ರುಪಾಯಿವರೆಗೆ ಪ್ರಯೋಜನ ಪಡೆಯುತ್ತಾರೆ. ಹಾಗೆಯೇ ಪಿಎನ್‌ಜಿ ಗ್ರಾಹಕರು ಪ್ರತಿ ಕೆಜಿಗೆ 5 ರಿಂದ 6 ರೂವರೆಗೂ ಪ್ರಯೋಜನ ಪಡೆಯುತ್ತಾರೆ. ಸೋಮವಾರ ಅಹಮದಾಬಾದ್‌ನಲ್ಲಿ ಸರಾಸರಿ ಸಿಎನ್‌ಜಿ ಬೆಲೆ 83.9 ರೂ, ಗಾಂಧಿನಗರದಲ್ಲಿ ರೂ 82.16 ಮತ್ತು ವಡೋದ್ರಾದಲ್ಲಿ ರೂ 81.15 ಆಗಿತ್ತು.

ಒಂದು ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಸುಮಾರು 38 ಲಕ್ಷ ಗೃಹಿಣಿಯರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಜಿತು ವಘಾನಿ ಹೇಳಿದರು. ಈ ಹಿಂದೆ ಅಮುಲ್ ಮಿಲ್ಕ್ ತನ್ನ ಸಂಪೂರ್ಣ ಕೆನೆ ಹಾಲು ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಗುಜರಾತ್ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ 2 ರೂ. ಹೆಚ್ಚಿಸಿತ್ತು. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಈ ವರ್ಷ ನವೆಂಬರ್ 12 ರಂದು ಚುನಾವಣೆ ನಡೆಯಲಿದೆ. ಏತನ್ಮಧ್ಯೆ, ಸೋಮವಾರ (ಅಕ್ಟೋಬರ್ 17) ಸತತ 149 ನೇ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ.
ಈ ಯೋಜನೆಗೆ ₹ 650 ಕೋಟಿಯಷ್ಟು ಪರಿಹಾರವನ್ನು ನಿರ್ಧರಿಸಿದರೆ, ₹ 1,700 ವರೆಗಿನ ಮೊತ್ತವು ಸಾರ್ವಜನಿಕರ ಮನೆ ಅಥವಾ ಜೇಬಿಗೆ ತಲುಪಬಹುದು ಎಂದು ಸಚಿವರು ಹೇಳಿದರು.












Click it and Unblock the Notifications