ಹಿಮಾಚಲ ಪ್ರದೇಶದಲ್ಲಿ ಬಸ್ ಅಪಘಾತ: 10 ಭಕ್ತರು ಬಲಿ
ಕಂಗ್ರಾ (ಹಿಮಾಚಲ ಪ್ರದೇಶ), ಜೂನ್ 15: ಹಿಮಾಚಲ ಪ್ರದೇಶದ ಕಂಗ್ರಾ ಎಂಬಲ್ಲಿ ಇಂದು (ಜೂನ್ 15) ಸಂಭವಿಸಿದ ಭೀಕರ ವಾಹನಾಪಘಾತದಲ್ಲಿ 10 ಜನ ಮೃತರಾಗಿದ್ದು, 30 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ಸಿನ ತುಂಬ ಪಂಜಾಬಿನಿಂದ ಬಂದಿದ್ದ ಭಕ್ತರೇ ತುಂಬಿದ್ದರು ಎಂಬ ಮಾಹಿತಿ ದೊರಕಿದೆ. ಹಿಮಾಚಲ ಪ್ರದೇಶದ ತೀರ್ಥಕ್ಷೇತ್ರಗಳಿಗೆ ಸುತ್ತುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ವಾಲಿಬಿದ್ದ ಕಾರಣ ಈ ಅಪಘಾತ ಸಂಭವಿಸಿದೆ.

ಈ ದುರಂತಕ್ಕೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications