Year End Special 2024: 2024ರಲ್ಲಿ ಜನ ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಿದ್ದು ಇವರನ್ನೇ, ಕಿಂಗ್ ಕೊಹ್ಲಿ & ಧೋನಿ ರೆಕಾರ್ಡ್!
2024 ಈಗಷ್ಟೇ ಪ್ರಾರಂಭವಾದಂತೆ ಇದೆ. ಆದರೆ, ಈಗಾಗಲೇ 2024 ಮುಕ್ತಾಯವಾಗಿ 2025 ಹೊಸ ವರ್ಷ ಪ್ರಾರಂಭವಾಗುವ ಹಂತದಲ್ಲಿ ಇದೆ. ಇನ್ನೊಂದು 20 ದಿನಗಳು ಕಳೆದರೆ 2025 ಹೊಸ ವರ್ಷ ಪ್ರಾರಂಭವಾಗಲಿದೆ. ಈ ನಡುವೆ ಗೂಗಲ್‌ನಲ್ಲಿ ಈ ವರ್ಷ ಹೆಚ್ಚು ಜನ ಯಾರನ್ನು ಹುಡುಕಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. IMDBಯು ಈ ವರ್ಷ ಯಾರನ್ನು ಗೂಗಲ್‌ನಲ್ಲಿ ಹೆಚ್ಚು ಸರ್ಚ್ ಮಾಡಲಾಗಿದೆ ಎನ್ನುವುದನ್ನು ವರದಿ ಮಾಡಿದೆ. ಈ ವರ್ಷ ಜನ ಗೂಗಲ್‌ನಲ್ಲಿ ಜನ ಹೆಚ್ಚು ಸರ್ಚ್ ಮಾಡಿದವರಲ್ಲಿ ಟಾಪ್‌ನಲ್ಲಿ ಯಾರಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಜನ ಸರ್ಚ್ ಮಾಡಿದವರಲ್ಲಿ ಟಾಪ್ 10ರಲ್ಲಿ ಕಿಂಗ್‌ವಿರಾಟ್ ಕೊಹ್ಲಿ ಇದ್ದಾರೆ. ಹಲವು ಕಾರಣಕ್ಕೆ ಗೂಗಲ್ ಸರ್ಚ್‌ನಲ್ಲಿ ಜನ ಇವರನ್ನು ಹುಡುಕಿದ್ದಾರೆ.
ವಿರಾಟ್ ಕೊಹ್ಲಿ: ದೇಶದಲ್ಲಿ ಅತ್ಯಂತ ಹೆಚ್ಚು ಸರ್ಚ್ ಮಾಡಿದವರಲ್ಲಿ ಕಿಂಗ್ ಕೊಹ್ಲಿಯೇ ಪ್ರಥಮ ಸ್ಥಾನದಲ್ಲಿ ಇದ್ದಾರೆ. ವಿರಾಟ್ ಕೊಹ್ಲಿಯನ್ನು ಬರೋಬ್ಬರಿ 17.62 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದು ಹಲವು ಸಾಧನೆಗಳನ್ನು ಮಾಡಿದ್ದಾರೆ. ವಿರಾಟ್ ರಾಷ್ಟ್ರ ರಾಜಧಾನಿ ದೆಹಲಿಯ ನಿವಾಸಿಯಾಗಿದ್ದಾರೆ. ಇವರು ಆರ್‌ಸಿಬಿಯ ಕ್ಯಾಪ್ಟನ್ ಆಗಿಯೂ ಮಿಂಚಿದ್ದು, ಕನ್ನಡಿಗರಿಗೂ ಇವರು ಅಚ್ಚುಮೆಚ್ಚು.

ನರೇಂದ್ರ ಮೋದಿ: ಇನ್ನು ದೇಶದಲ್ಲಿ ಅತ್ಯಂತ ಹೆಚ್ಚು ಜನ ಸರ್ಚ್ ಮಾಡಿದವರಲ್ಲಿ ಪ್ರಧಾನಿ ನರೇಂದ್ರ ಅವರು ಎರಡನೇ ಸ್ಥಾನದಲ್ಲಿ ಇದ್ದಾರೆ. ನರೇಂದ್ರ ಮೋದಿ ಅವರ ಬಗ್ಗೆ 15.34 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಗಮನವನ್ನು ಸೆಳೆದಿದ್ದಾರೆ. ಮೂರನೇ ಬಾರಿ ದೇಶದ ಪ್ರಧಾನಿಯಾಗಿದ್ದಾರೆ. 2014,2019 ಹಾಗೂ 2024ನೇ ಸಾಲಿನಲ್ಲಿ ಸತತವಾಗಿ ಮೂರು ಬಾರಿ ಅವರು ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದಕ್ಕೂ ಮೊದಲು ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಸಲ್ಮಾನ್ ಖಾನ್: ಬಾಲಿವುಡ್ ನಟ ಹಾಗೂ ನಿರ್ಮಾಪಕ ಸಲ್ಮಾನ್ ಖಾನ್ ಅವರು ಹಲವು ಕಾರಣಕ್ಕೆ ಈ ವರ್ಷ ಸುದ್ದಿಯಲ್ಲಿ ಇದ್ದರು. ಈ ವರ್ಷ ಅವರ ಹತ್ಯೆಯ ಸಂಚು ನಡೆದಿತ್ತು. ಇನ್ನು ಇವರನ್ನು ಗೂಗಲ್‌ನಲ್ಲಿ ಬರೋಬ್ಬರಿ 12.66 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ಸಲ್ಮಾನ್ ಖಾನ್‌ಗೆ ಒಳ್ಳೆಯ ಹೆಸರು ಇದೆ. ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿದ ಸಂದರ್ಭದಲ್ಲೇ ಇವರು ಕೆಲವು ವಿವಾದಗಳಿಗೆ ಗುರಿಯಾಗಿದ್ದು ಸಹ ಇದೆ.
ಕೃತಿ ಸನೊನ್: ಬಾಲಿವುಡ್ ನಟಿ ಕೃತಿ ಸನೊನ್ ಅವರನ್ನು ಜನ ಹೆಚ್ಚು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಗೂಗಲ್‌ನಲ್ಲಿ ಇವರ ಬಗ್ಗೆ 12.48 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಇವರು ಬಹುಬೇಡಿಕೆಯ ನಟಿಯಾಗಿದ್ದಾರೆ. ದಿಲ್ವಾಲೆ ಹಾಗೂ ಹೀರೋಪಂತಿ ಎನ್ನುವ ಸಿನಿಮಾಗಳ ಮೂಲಕ ಹೆಚ್ಚು ಫೇಮಸ್ ಆಗಿದ್ದಾರೆ.

ಅರಿಜಿತ್ ಸಿಂಗ್: ಅರಿಜಿತ್ ಗಾಯಕರಾಗಿದ್ದು, ಇವರ ಹಲವು ಹಾಡುಗಳಿಗೆ ಭಾರತೀಯರು ಪಿಧಾ ಆಗಿದ್ದಾರೆ. ಇವರ ಬಗ್ಗೆ 12.28 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಸಾಲು ಸಾಲು ಹಿಟ್ ಮೂವಿಗಳಲ್ಲಿ ಹಾಡಿದ್ದಾರೆ. ಅಲ್ಲದೇ ಇವರು ಅವರ ಸಿಂಪ್ಲಿಸಿಟಿಯಿಂದ ಹಾಗೂ ಹಾಸ್ಯಪ್ರಜ್ಞೆಯಿಂದ ಫೇಮಸ್. ಮುಂಬೈನಲ್ಲಿ ನಾನು ಕಟಿಂಗ್ & ಶೇವಿಂಗ್ ಮಾಡಿಸಲ್ಲ ಇಲ್ಲಿನ ಸಲೂಲ್‌ಗಳಲ್ಲಿ ಬೆಲೆ ಜಾಸ್ತಿ ಎಂದು ಇವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ರಾಮ್ ಚರಣ್: ಇನ್ನು ಆರನೇ ಸ್ಥಾನದಲ್ಲಿ ದಕ್ಷಿಣ ಭಾರತದ ಹಾಗೂ ತೆಲುಗು ಚಿತ್ರರಂಗದ ನಟ ರಾಮ್ ಚರಣ್ ಅವರು ಇದ್ದಾರೆ. ಇವರನ್ನು ಬರೋಬ್ಬರಿ 11.64 ಮಿಲಿಯನ್ ಜನ ಸರ್ಚ್ ಮಾಡಿದ್ದಾರೆ. RRR ಸಿನಿಮಾದ ಮೂಲಕ ಇವರು ವಿಶ್ವದಾದ್ಯಂತ ಸುದ್ದಿಯಾದರು. ಪೋಲೋ ಕ್ಲಬ್ ಮತ್ತು ಏರ್‌ಲೈನ್ ಸೇರಿದಂತೆ ವಿವಿಧ ಉದ್ದಿಮೆಗಳನ್ನು ಸಹ ಹೊಂದಿದ್ದಾರೆ. ರಾಮ್ ಚರಣ್ ಅವರ ತಂದೆ ತೆಲುಗು ಚಿತ್ರರಂಗದ ಮೇರು ನಟ ಚಿರಂಜೀವಿ. ನಯ ವಿನಯದಿಂದ ಚರಣ್ ಚಿತ್ರರಂಗದಲ್ಲಿ ಎಲ್ಲರ ಪ್ರೀತಿ ಪಾತ್ರಕ್ಕೆ ಕಾರಣರಾಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ: ಮಹೇಂದ್ರ ಸಿಂಗ್ ಧೋನಿ ಅವರಿಗೂ ಏಳನೇ ಸಂಖ್ಯೆಗೂ ತುಂಬಾನೇ ಅಟ್ಯಾಚ್‌ಮೆಂಟ್ ಇದೆ. (ತಲೈವಾ Thala for Reason) ಅನ್ನುವುದು ಸಹ ಇದೆ. ಅವರ ಜರ್ಸಿ ಸಂಖ್ಯೆ, ಅವರ ಜನ್ಮ ದಿನ ಈ ರೀತಿ ಹಲವು 7 ಆಗಿದೆ. ಇದೀಗ 2024ನೇ ಸಾಲಿನಲ್ಲಿ ಧೋನಿ 7ನೇ ಸ್ಥಾನದಲ್ಲಿ ಇದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರನ್ನು ಗೂಗಲ್‌ನಲ್ಲಿ 10.78 ಮಿಲಿಯನ್ ಜನ ಹುಡುಕಿದ್ದಾರೆ. ಧೋನಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ. ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಅವರು ಗುರುತಿಸಿಕೊಂಡಿದ್ದಾರೆ.
ಎನ್.ಟಿ ರಾಮರಾವ್ ಜೂ.: ಎನ್.ಟಿ ರಾಮರಾವ್ ಜೂ ಅವರು ಜೂನಿಯರ್ ಎನ್‌ಟಿಆರ್ ಅಂತಲೇ ಫೇಮಸ್ ತೆಲುಗು ಚಿತ್ರರಂಗದ ಪ್ರಮುಖ ನಟ. ಎನ್.ಟಿ ರಾಮರಾವ್ ಅವರು ಸ್ವಚ್ಛಂದವಾಗಿ ಕನ್ನಡ ಮಾತನಾಡುತ್ತಾರೆ. ಕರ್ನಾಟಕಕ್ಕೆ ಬಂದಾಗೆಲ್ಲ ಅವರು ಕನ್ನಡದಲ್ಲಿ ಮಾತನಾಡುತ್ತಾರೆ ಇವರನ್ನು ಗೂಗಲ್‌ನಲ್ಲಿ 10.04 ಮಿಲಿಯನ್ ಜನ ಹುಡುಕಿದ್ದಾರೆ.












Click it and Unblock the Notifications