ಒಂದು ಮಾವಿನ ಹಣ್ಣಿನ ಬೆಲೆ 25,000 ರೂ.! ಜಗತ್ತಿನ ಟಾಪ್ 10 ದುಬಾರಿ ಮಾವುಗಳಿವು
ಬೆಚ್ಚಗಿನ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಾವಿನ ಹಣ್ಣುಗಳ ಸೀಸನ್ ಶುರುವಾಗುತ್ತದೆ. ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ತನ್ನ ರುಚಿ, ಪೌಷ್ಟಿಕತೆ ಮತ್ತು ಸಾಂಸ್ಕೃತಿಕ ಮಹತ್ವದಿಂದ ಪ್ರಸಿದ್ಧ. ಆದರೆ ಎಲ್ಲ ಮಾವಿನ ಹಣ್ಣುಗಳ ಬೆಲೆ ಒಂದೇ ಆಗಿರುವುದಿಲ್ಲ. ನೀವು ನಂಬಲಿಕ್ಕಿಲ್ಲ, ಕೆಲವು ವಿಶೇಷ ಜಾತಿಗಳು ತಮ್ಮ ಗುಣಮಟ್ಟ, ಅಪರೂಪವಾದ ಮತ್ತು ಬೇಡಿಕೆಯ ಕಾರಣದಿಂದ ಅತಿ ದುಬಾರಿಯಾಗಿವೆ.
ಇಲ್ಲಿವೆ ಜಗತ್ತಿನ 10 ಅತಿ ದುಬಾರಿ ಮಾವಿನ ಜಾತಿಗಳ ಮಾಹಿತಿ:
1. ಮಿಯಾಜಾಕಿ ಮಾವು (Miyazaki Mango) - ಜಪಾನ್
ಜಪಾನ್‌ನ ಈ ಮಾವು "ಸೂರ್ಯನ ಮೊಟ್ಟೆ" ಎಂದು ಎಂದೂ ಕರೆಯುತ್ತಾರೆ. ಈ ಮಾವು ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಲ್ಲಿ ಒಂದು. ಕೆಂಪು ಬಣ್ಣದ ಈ ಹಣ್ಣು ಅತಿ ಹೆಚ್ಚು ಆಂಟಿ-ಆಕ್ಸಿಡೆಂಟ್ ಹೊಂದಿರುತ್ತವೆ. ಒಂದು ಹಣ್ಣಿಗೆ ಬೆಲೆ ಸುಮಾರು 16,000 ರಿಂದ 25,000 (ಅಂದಾಜು $200 - $300) ಇರುತ್ತದೆ.
2. ತೈಯೋ ನೋ ತಮಾಗೊ (Taiyo no Tamago) - ಜಪಾನ್
ಇದು ಮಿಯಾಝಾಕಿ ಮಾವಿನ ಅತ್ಯಂತ ಪ್ರೀಮಿಯಂ ಆವೃತ್ತಿ. ಹರಾಜಿನಲ್ಲಿ ಇವುಗಳಿಗೆ ಚಿನ್ನದ ಬೆಲೆ ಸಿಗುತ್ತದೆ. ವಿಶೇಷವೆಂದರೆ 2017ರಲ್ಲಿ ಒಂದು ಜೋಡಿ ಹಣ್ಣುಗಳು ಬರೋಬ್ಬರಿ 2.5 ಲಕ್ಷ (ಅಂದಾಜು $3,000 ) ಕ್ಕೆ ಹರಾಜಾಗಿದ್ದವು!

3. ಅಲ್ಫಾನ್ಸೋ (Alphonso Mango) - ಭಾರತ
ಭಾರತದ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬೆಳೆಯುವ ಈ ಮಾವಿಗೆ 'ಹಾಪುಸ್' ಎಂಬ ಹೆಸರೂ ಇದೆ. ಇದರ ಕೇಸರಿ ಬಣ್ಣದ ತಿರುಳು ಮತ್ತು ಅದ್ಭುತ ರುಚಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಬೆಲೆ ಒಂದು ಡಜನ್‌ಗೆ 700 ರಿಂದ 2,000 ವರೆಗೆ ಇರುತ್ತದೆ.
4. ಕೇಸರ್ ಮಾವು (Kesar Mango) - ಭಾರತ
ಗುಜರಾತ್‌ನ ಪ್ರಸಿದ್ಧ ಜಾತಿಯ ಈ ಮಾವಿಗೆ ಕೇಸರಿ ಬಣ್ಣ ಮತ್ತು ಸುವಾಸನೆಯಿಂದ ಈ ಹೆಸರು ಬಂದಿದೆ. ಇದಕ್ಕೆ GI ಟ್ಯಾಗ್ ಕೂಡ ಇದೆ. ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್‌ಗೆ 1,200 ರಿಂದ 2,000 ( $15 - $25 ) ವರೆಗೆ ಬೆಲೆ ಇರುತ್ತದೆ.
5. ನೂರ್ಜಹಾನ್ ಮಾವು (Noorjahan Mango) - ಭಾರತ
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಬೆಳೆಯುವ ಈ ಮಾವು ತನ್ನ ಗಾತ್ರಕ್ಕೆ ಪ್ರಸಿದ್ಧ. ಒಂದು ಹಣ್ಣು ಬರೋಬ್ಬರಿ 2 ರಿಂದ 3 ಕೆಜಿ ತೂಗುತ್ತದೆ. ಬೆಲೆ ಒಂದು ಹಣ್ಣಿಗೆ 500 ರಿಂದ 1,500 ರವರೆಗೆ ಬೆಲೆ ಇರುತ್ತದೆ.
6. ಕೆರಾಬಾವೊ (Carabao Mango) - ಫಿಲಿಪೈನ್ಸ್
ಇದಕ್ಕೆ 'ಮನಿಲಾ ಮ್ಯಾಂಗೊ' ಎಂದೂ ಹೆಸರಿದೆ. ವಿಶ್ವದ ಅತಿ ಸಿಹಿಯಾದ ಮಾವು ಎಂದು ಗಿನ್ನೆಸ್ ದಾಖಲೆ ಕೂಡ ಮಾಡಿದೆ. ಒಂದು ಹಣ್ಣಿನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 800ರಿಂದ 1,600 ($10 - $20) ವರೆಗೆ ಇರುತ್ತದೆ.
7. ಚೌನ್ಸಾ ಮಾವು (Chaunsa Mango) - ಪಾಕಿಸ್ತಾನ
ಅದ್ಭುತ ಪರಿಮಳಕ್ಕೆ ಹೆಸರಾದ ಈ ಮಾವು ಪಾಕಿಸ್ತಾನದ ಮುಲ್ತಾನ್ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ 1,000 ರಿಂದ 1,600 ($12 - $20) ವರೆಗೆ ಇರುತ್ತದೆ.
8. ಸಿಂಧ್ರಿ ಮಾವು (Sindhri Mango) - ಪಾಕಿಸ್ತಾನ
ಇದರ ಹಳದಿ ಬಣ್ಣ ಮತ್ತು ಜ್ಯೂಸಿ ಟೆಕ್ಸ್ಚರ್‌ಗೆ ಹೆಚ್ಚಿನ ಬೇಡಿಕೆಯಿದೆ. ಇದನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತದೆ. ಬೆಲೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಸುಮಾರು 800 ರಿಂದ 1,200 ($10 - $15) ಇರುತ್ತದೆ.
9. ಬಾಂಬೆ ಗ್ರೀನ್ / ಸಫೇದಾ (Bombay Green) - ಭಾರತ
ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಈ ಮಾವು ತನ್ನ ದೊಡ್ಡ ಗಾತ್ರದ ಮತ್ತು ಬೇಗನೆ ಫಸಲು ನೀಡುವುದಕ್ಕೆ ಹೆಸರುವಾಸಿ. ಬೆಲೆ ರಫ್ತು ಮಾಡಲಾದ ಹಣ್ಣುಗಳು ಕೆಜಿಗೆ 800 ರಿಂದ1,200 ($10 - 1,200) ವರೆಗೆ ಮಾರಾಟವಾಗುತ್ತವೆ.
10. ಪಾಲ್ಮರ್ ಮಾವು (Palmer Mango)
ಅಮೆರಿಕದ ಫ್ಲೋರಿಡಾದಲ್ಲಿ ಬೆಳೆಯುವ ಈ ಮಾವು ದೊಡ್ಡ ಗಾತ್ರ ಮತ್ತು ಹೆಚ್ಚು ದಿನಗಳ ಕಾಲ ಕೆಡದೆ ಇರುವ ಗುಣ ಹೊಂದಿದೆ. ಬೆಲೆ ಆರ್ಗ್ಯಾನಿಕ್ ಮಾರುಕಟ್ಟೆಗಳಲ್ಲಿ ಒಂದು ಹಣ್ಣಿಗೆ 650 ರಿಂದ 1,000($8 - $12 ) ವರೆಗೆ ಬೆಲೆ ಇರುತ್ತದೆ.












Click it and Unblock the Notifications