ಹಿಮಾಚಲ ಪ್ರದೇಶ : ಹಿಮಕುಸಿತದಲ್ಲಿ ಒಬ್ಬ ಯೋಧ ಸಾವು

ನವದೆಹಲಿ, ಫೆಬ್ರವರಿ 20 : ಹಿಮಾಚಲ ಪ್ರದೇಶದ ನಮ್ಗ್ಯಾ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಒಬ್ಬ ಯೋಧ ಮೃತಪಟ್ಟಿದ್ದಾನೆ. ಪಹರೆ ಕಾಯುತ್ತಿದ್ದ ಐವರು ಹಿಮದಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಿನ್ನೂರು ಜಿಲ್ಲೆಯಲ್ಲಿ ಬರುವ ನಮ್ಗ್ಯಾ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಮಕುಸಿತವಾಗಿದೆ. ಒಟ್ಟು ಆರು ಯೋಧರು ಹಿಮದಡಿ ಸಿಲುಕಿದ್ದರು. ಒಬ್ಬನನ್ನು ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟರು.

ಭಾರತ-ಚೀನಾ ಗಡಿ ಪ್ರದೇಶದ ಶಿಪ್ಕಿ ಸೆಕ್ಟರ್‌ನ ಭದ್ರತೆಗೆ 16 ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಪಹರೆ ಕಾಯುತ್ತಿದ್ದಾಗ ದಿಢೀರ್ ಹಿಮಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಿಮಕುಸಿತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

1 Armyman Killed, 5 Trapped after avalanche in Himachal Pradesh

ಹಿಮದಡಿಯಲ್ಲಿ ಸಿಲುಕಿರುವ ಯೋಧರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಿನ್ನೂರು ಜಿಲ್ಲಾ ಪೊಲೀಸರು 150 ಯೋಧರೊಂದಿಗೆ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಹರೆ ಕಾಯುತ್ತಿರುವ ಯೋಧರು ಆಗಾಗ ಹಿಮಕುಸಿತದಲ್ಲಿ ಸಿಲುಕುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+